- Kannada News Photo gallery CM Siddaramaiah And other Celebrities met Shivarajkumar After He came from America
ಶಿವರಾಜ್ಕುಮಾರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ರಾಜಕೀಯ ಹಾಗೂ ಸಿನಿಮಾ ಗಣ್ಯರು
ಕನ್ನಡದ ನಟ ಶಿವರಾಜ್ಕುಮಾರ್ ಅವರು ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳಿದ್ದರು. ಈಗ ಗುಣಮುಖರಾಗಿ ಅವರು ಅಮೆರಿಕದಿಂದ ಆಗಮಿಸಿದ್ದಾರೆ. ಅವರನ್ನು ಭೇಟಿ ಮಾಡಲು ಗಣ್ಯಾತಿ ಗಣ್ಯರು ಆಗಮಿಸುತ್ತಿದ್ದಾರೆ. ಅವರ ಚೇತರಿಕೆ ಕಂಡಿದ್ದಕ್ಕೆ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಈ ಸಂದರ್ಭದ ಫೋಟೋ ಇಲ್ಲಿದೆ.
Updated on:Jan 27, 2025 | 2:15 PM

ಶಿವರಾಜ್ಕುಮಾರ್ ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ. ಶಿವಣ್ಣ ಅವರ ಆರೋಗ್ಯವನ್ನು ಸಿದ್ದರಾಮಯ್ಯ ಅವರು ವಿಚಾರಿಸಿದ್ದಾರೆ. ಅವರಿಗೆ ಗಿಡ ನೀಡುವ ಮೂಲಕ ಶಿವಣ್ಣನ ಸ್ವಾಗತಿಸಿದ್ದಾರೆ. ಆ ಸಂದರ್ಭದ ಫೋಟೋ ಗಮನ ಸೆಳೆದಿದೆ.

ಜನವರಿ 27ರಂದು ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ಶಿವರಾಜ್ಕುಮಾರ್ ನಿವಾಸಕ್ಕೆ ಆಗಮಿಸಿದರು. ಈ ವೇಳೆ ಶಿವರಾಜ್ಕುಮಾರ್ ಅವರ ಆರೋಗ್ಯವನ್ನು ಸಿದ್ದರಾಮಯ್ಯ ವಿಚಾರಿಸಿದರು.

ಗೀತಾ ಶಿವರಾಜ್ಕುಮಾರ್ ಅವರು ಕಾಂಗ್ರೆಸ್ನವರು. ಅವರು ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧೆ ಮಾಡಿದ್ದರು. ಈ ಸಂದರ್ಭದಲ್ಲಿ ಶಿವರಾಜ್ಕುಮಾರ್ ಅವರು ಪ್ರಚಾರಕ್ಕೆ ತೆರಳಿದ್ದರು. ಹೀಗಾಗಿ, ಕಾಂಗ್ರೆಸ್ ಜೊತೆ ಅವರಿಗೆ ಒಳ್ಳೆಯ ನಂಟು ಬೆಳೆದಿದೆ.

ಶಿವರಾಜ್ಕುಮಾರ್ ಅವರಿಗೆ ಕ್ಯಾನ್ಸರ್ ಆಗಿತ್ತು. ಇದರ ವಿರುದ್ಧ ಹೋರಾಡಿ ಸಂಪೂರ್ಣ ಕ್ಯಾನ್ಸರ್ ಮುಕ್ತರಾಗಿ ಅವರು ಹೊರಹೊಮ್ಮಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ಕೊಟ್ಟಿದೆ

ಡಾಲಿ ಧನಂಜಯ್ ಅವರು ಕೂಡ ಶಿವಣ್ಣನ ಭೇಟಿ ಆಗಿದ್ದಾರೆ. ಇಬ್ಬರೂ ‘ಟಗರು’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ಸಾಕಷ್ಟು ಗಮನ ಸೆಳೆದಿತ್ತು. ಈ ಚಿತ್ರದಿಂದ ಡಾಲಿ ವೃತ್ತಿ ಬದುಕು ಬದಲಾಯಿತು.
Published On - 1:06 pm, Mon, 27 January 25
























