Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡನೇ ಮದುವೆ ಆಗಲಿದ್ದಾರೆ ನಟಿ ಚೈತ್ರಾ ವಾಸುದೇವನ್

Chaithra Vasudevan: ಮಾಜಿ ಬಿಗ್​ಬಾಸ್ ಸ್ಪರ್ಧಿ, ಜನಪ್ರಿಯ ಟಿವಿ ನಿರೂಪಕಿ ಚೈತ್ರಾ ವಾಸುದೇವನ್ ಮತ್ತೊಮ್ಮೆ ಮದುವೆ ಆಗುತ್ತಿದ್ದಾರೆ. ಈ ಹಿಂದೆ ಮದುವೆ ಆಗಿದ್ದ ಚೈತ್ರಾ, ದಾಂಪತ್ಯದಲ್ಲಿ ವಿರಸ ಮೂಡಿದ ಕಾರಣ ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ಮದುವೆ ಆಗುತ್ತಿದ್ದು, ಪ್ಯಾರಿಸ್​ನಲ್ಲಿ ನಿಂತು ಈ ವಿಷಯ ಘೋಷಣೆ ಮಾಡಿದ್ದಾರೆ.

ಎರಡನೇ ಮದುವೆ ಆಗಲಿದ್ದಾರೆ ನಟಿ ಚೈತ್ರಾ ವಾಸುದೇವನ್
Chaithra Vasudevan
Follow us
ಮಂಜುನಾಥ ಸಿ.
|

Updated on:Jan 29, 2025 | 9:56 AM

ಖ್ಯಾತ ಟಿವಿ ನಿರೂಪಕಕಿ, ಮಾಜಿ ಬಿಗ್​ಬಾಸ್ ಸ್ಪರ್ಧಿಯೂ ಆಗಿರುವ ಚೈತ್ರಾ ವಾಸುದೇವನ್ ಎರಡನೇ ಮದುವೆಗೆ ಸಜ್ಜಾಗಿದ್ದಾರೆ. ಮೊದಲ ಮದುವೆ ಬಳಿಕ ದಂಪತಿಗಳು ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ಚೈತ್ರಾ ವಾಸುದೇವನ್ ಎರಡನೇ ಮದುವೆ ಆಗಲಿದ್ದು, ಈ ವಿಷಯವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಖಾತ್ರಿ ಪಡಿಸಿದ್ದಾರೆ. ಚೈತ್ರಾ ವಾಸುದೇವನ್ ಹಾಗೂ ಭಾವಿ ಪತಿ ಪ್ಯಾರಿಸ್​ನಲ್ಲಿ ಪರಸ್ಪರ ಉಂಗುರ ಬದಲಿಸಿಕೊಂಡು ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಚೈತ್ರಾ ವಾಸುದೇವನ್ ಹಾಗೂ ಅವರ ಭಾವಿ ಪತಿ ಹೃದಯದಾಕಾರದ ಉಂಗುರಗಳನ್ನು ತೊಟ್ಟು ಪ್ಯಾರಿಸ್​ನಲ್ಲಿ ಓಡಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದರ ವಿಡಿಯೋ ಅನ್ನು ಚೈತ್ರಾ ವಾಸುದೇವನ್ ಹಂಚಿಕೊಂಡಿದ್ದಾರೆ. ಆದರೆ ಚೈತ್ರಾ, ತಾವು ಮದುವೆ ಆಗುತ್ತಿರುವ ಯುವಕನ ಮುಖವನ್ನು ವಿಡಿಯೋದಲ್ಲಿ ತೋರಿಸಿಲ್ಲ. ಚೈತ್ರಾ ಅವರನ್ನು ಮದುವೆ ಆಗುತ್ತಿರುವ ಯುವಕ ಯಾರೆಂಬುದು ಗುಟ್ಟಾಗಿಯೇ ಇದೆ. ಎರಡನೇ ಮದುವೆ ಘೋಷಣೆಗೆ ಶಾಸ್ವಿ ಶ್ರೀವತ್ಸ, ಹರ್ಷಿಕಾ ಪೂಣಚ್ಚ, ದಿವ್ಯಾ ಉರುಡುಗ, ಶ್ವೇತಾ ಚೆಂಗಪ್ಪ, ಕಾವ್ಯಾ ಗೌಡ, ಕಾವ್ಯಾ ಶೆಟ್ಟಿ ಇನ್ನೂ ಅನೇಕ ಟಿವಿ ಮತ್ತು ಸಿನಿಮಾ ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ.

ಚೈತ್ರಾ ವಾಸುದೇವನ್ ಈ ಹಿಂದೆ ಮದುವೆ ಆಗಿದ್ದರು. ಆದರೆ ದಾಂಪತ್ಯದಲ್ಲಿ ವಿರಸ ಮೂಡಿದ ಕಾರಣ ವಿಚ್ಛೇದನ ಪಡೆದುಕೊಂಡಿದ್ದರು. ಬಿಗ್​ಬಾಸ್ 7ರ ಸ್ಪರ್ಧಿ ಆಗಿದ್ದ ಚೈತ್ರಾ ವಾಸುದೇವನ್, ಜನಪ್ರಿಯ ಟಿವಿ ನಿರೂಪಕಿಯೂ ಹೌದು. ಜೊತೆಗೆ ಉದ್ಯಮಿಯೂ ಆಗಿರುವ ಚೈತ್ರಾ ವಾಸುದೇವನ್ ಇವೆಂಟ್ ಮ್ಯಾನೇಜ್​ಮೆಂಟ್ ಸಂಸ್ಥೆಯೊಂದನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಇದೀಗ ಎರಡನೇ ಮದುವೆ ಆಗುವ ಮೂಲಕ ಬಾಳಿನಲ್ಲಿ ಮತ್ತೆ ಜಂಟಿಯಾಗಲು ಚೈತ್ರಾ ಮುಂದಾಗಿದ್ದಾರೆ.

ಕಳೆದ ಕೆಲ ದಿನಗಳಿಂದಲೂ ಪ್ಯಾರಿಸ್​ನಲ್ಲಿರುವ ಚೈತ್ರಾ ವಾಸುದೇವನ್ ಅವರು ಅಲ್ಲಿ ಕೆಲ ಫೋಟೊಶೂಟ್​ಗಳನ್ನು ಮಾಡಿಸಿದ್ದಾರೆ. ಕೊನೆಗೆ ಐಫೆಲ್ ಟವರ್ ಎದುರು ನಿಂತು ತಾವು ಮದುವೆ ಆಗಲಿರುವ ವಿಷಯವ ಘೋಷಿಸಿದ್ದಾರೆ. ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿಯೂ ಈ ವಿಷಯ ಹಂಚಿಕೊಂಡಿರುವ ನಟಿ, ವಿವಿಧ ಆರೋಗ್ಯಕರ ಆಹಾರದ ಚಿತ್ರಗಳನ್ನು ಹಂಚಿಕೊಂಡು ವಧು ಆಗುತ್ತಿದ್ದೇನೆ. ತ್ವಚೆಯನ್ನು ಸುಂದರವಾಗಿಟ್ಟುಕೊಳ್ಳಲು ಇದೆಲ್ಲ ಮಾಡಬೇಕಿದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:23 am, Wed, 29 January 25

ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಡಾಕ್ಟ್ರಮ್ಮ ತಂಗಿಯಾಗಿ ಸಿಕ್ಕಿರೋದು ಬಹಳ ಖುಷಿಯಾಗ್ತಿದೆ: ಧನಂಜಯ ಅತ್ತಿಗೆ
ಡಾಕ್ಟ್ರಮ್ಮ ತಂಗಿಯಾಗಿ ಸಿಕ್ಕಿರೋದು ಬಹಳ ಖುಷಿಯಾಗ್ತಿದೆ: ಧನಂಜಯ ಅತ್ತಿಗೆ
ಪಾಕಿಸ್ತಾನದಲ್ಲಿ ಕಿಂಗ್ ಕೊಹ್ಲಿ ಕ್ರೇಝ್: ಕರಾಚಿಯಲ್ಲಿ ಮೊಳಗಿದ RCB ಹರ್ಷೋದ್
ಪಾಕಿಸ್ತಾನದಲ್ಲಿ ಕಿಂಗ್ ಕೊಹ್ಲಿ ಕ್ರೇಝ್: ಕರಾಚಿಯಲ್ಲಿ ಮೊಳಗಿದ RCB ಹರ್ಷೋದ್
ಬೆಂಗಳೂರಿನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿ ಲೈವ್
ಬೆಂಗಳೂರಿನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿ ಲೈವ್
ಮತ್ತೊಮ್ಮೆ ನಾಲಗೆ ಮೇಲೆ ಹಿಡಿತ ತಪ್ಪಿದ ಸಹಕಾರ ಸಚಿವ ಕೆಎನ್ ರಾಜಣ್ಣ
ಮತ್ತೊಮ್ಮೆ ನಾಲಗೆ ಮೇಲೆ ಹಿಡಿತ ತಪ್ಪಿದ ಸಹಕಾರ ಸಚಿವ ಕೆಎನ್ ರಾಜಣ್ಣ
ಈ ಸರ್ಕಾರ ತನ್ನನೇನೂ ಮಾಡಲಾಗಲ್ಲ: ಕುಮಾರಸ್ವಾಮಿ, ಕೇಂದ್ರ ಸಚಿವ
ಈ ಸರ್ಕಾರ ತನ್ನನೇನೂ ಮಾಡಲಾಗಲ್ಲ: ಕುಮಾರಸ್ವಾಮಿ, ಕೇಂದ್ರ ಸಚಿವ