ತೆಲುಗಿನ ಖ್ಯಾತ ಹಾಸ್ಯ ನಟ ರಾಜೇಂದ್ರ ಪ್ರಸಾದ್ ಮಗಳು ಹೃದಯಾಘಾತದಿಂದ ನಿಧನ

ಗಾಯತ್ರಿ ಅವರಿಗೆ ಹೃದಯಘಾತ ಆಗುವಾಗ ರಾಜೇಂದ್ರ ಪ್ರಸಾದ್ ಅವರು ಶೂಟಿಂಗ್​ನಲ್ಲಿ ಬ್ಯುಸಿ ಇದ್ದರು. ವಿಚಾರ ತಿಳಿಯುತ್ತಿದ್ದಂತೆ ಅವರು ಆಸ್ಪತ್ರೆಗೆ ಬಂದಿದ್ದಾರೆ. ವೈದ್ಯರು ತಮ್ಮ ಕೈಲಾದ ಪ್ರಯತ್ನ ಮಾಡಿದ್ದಾರೆ. ಆದರೆ, ಅವರನ್ನು ಬದುಕುಳಿಸಲು ಸಾಧ್ಯವಾಗಲೇ ಇಲ್ಲ.

ತೆಲುಗಿನ ಖ್ಯಾತ ಹಾಸ್ಯ ನಟ ರಾಜೇಂದ್ರ ಪ್ರಸಾದ್ ಮಗಳು ಹೃದಯಾಘಾತದಿಂದ ನಿಧನ
ರಾಜೇಂದ್ರ-ಗಾಯತ್ರಿ
Follow us
ರಾಜೇಶ್ ದುಗ್ಗುಮನೆ
|

Updated on: Oct 05, 2024 | 8:57 AM

ತೆಲುಗಿನ ಜನಪ್ರಿಯ ಹಾಸ್ಯನಟ ರಾಜೇಂದ್ರ ಪ್ರಸಾದ್ ಅವರ ಮಗಳು ಗಾಯತ್ರಿ (38) ಸಣ್ಣ ವಯಸ್ಸಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶುಕ್ರವಾರ (ಅಕ್ಟೋಬರ್ 5) ಹೃದಯಾಘಾತ ಆಗಿತ್ತು. ಅವರನ್ನು ಕುಟುಂಬಸ್ಥರು ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯತ್ರಿ ಇಂದು (ಅಕ್ಟೋಬರ್ 6) ಮೃತಪಟ್ಟಿದ್ದಾರೆ. ರಾಜೇಂದ್ರ ಪ್ರಸಾದ್ ಅವರಿಗೆ ಈಗ ಮಗ ಮಾತ್ರ ಉಳಿದುಕೊಂಡಿದ್ದಾನೆ. ಮಗಳ ಸಾವಿನಿಂದ ರಾಜೇಂದ್ರ ಪ್ರಸಾದ್ ಅವರ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಅನೇಕ ಗಣ್ಯರು ಬಂದು ಸಂತಾಪ ಸೂಚಿಸಿದ್ದಾರೆ.

ಗಾಯತ್ರಿ ಅವರಿಗೆ ಹೃದಯಘಾತ ಆಗುವಾಗ ರಾಜೇಂದ್ರ ಪ್ರಸಾದ್ ಅವರು ಶೂಟಿಂಗ್​ನಲ್ಲಿ ಬ್ಯುಸಿ ಇದ್ದರು. ವಿಚಾರ ತಿಳಿಯುತ್ತಿದ್ದಂತೆ ಅವರು ಆಸ್ಪತ್ರೆಗೆ ಬಂದಿದ್ದಾರೆ. ವೈದ್ಯರು ತಮ್ಮ ಕೈಲಾದ ಪ್ರಯತ್ನ ಮಾಡಿದ್ದಾರೆ. ಆದರೆ, ಅವರನ್ನು ಬದುಕುಳಿಸಲು ಸಾಧ್ಯವಾಗಲೇ ಇಲ್ಲ. ಗಾಯತ್ರಿ ಅವರ ಅಂತಿಮ ಸಂಸ್ಕಾರ ಇಂದು (ಅಕ್ಟೋಬರ್ 5) ನಡೆಯಲಿದೆ. ಹಲವು ಸೆಲೆಬ್ರಿಟಿಗಳು ರಾಜೇಂದ್ರ ಪ್ರಸಾದ್ ನಿವಾಸಕ್ಕೆ ಬಂದು ಧೈರ್ಯ ತುಂಬಿದ್ದಾರೆ.

ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ರಾಜೇಂದ್ರ ಪ್ರಸಾದ್ ವೃತ್ತಿ ಜೀವನ ಆರಂಭಿಸಿದರು. ವರ್ಷಗಳು ಕಳೆದಂತೆ ಅವರಿಗೆ ಬೇಡಿಕೆ ಹೆಚ್ಚುತ್ತಾ ಹೋಯಿತು. ಟಾಲಿವುಡ್​ನ ಖ್ಯಾತ ಹಾಸ್ಯನಟನಾಗಿ ಅವರು ಗುರುತಿಸಿಕೊಂಡಿದ್ದಾರೆ. ರಾಜೇಂದ್ರ ಪ್ರಸಾದ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡಿಲ್ಲ. ಅವರ ಕುಟುಂಬದಿಂದ ಯಾರೂ ಇಂಡಸ್ಟ್ರಿಗೆ ಬರಲಿಲ್ಲ. 2018ರಲ್ಲಿ ಸಿನಿಮಾದ ಪ್ರೀ ರಿಲೀಸ್ ಈವೆಂಟ್​ನಲ್ಲಿ ಅವರು ತಮ್ಮ ಮಗಳ ಬಗ್ಗೆ ಮಾತನಾಡಿ, ಭಾವುಕರಾಗಿದ್ದರು.

ಇದನ್ನೂ ಓದಿ: 4ನೇ ಮದುವೆ ಆಗಲಿರುವ ನಟಿ ವನಿತಾ ವಿಜಯ್​ಕುಮಾರ್; ಹಳೇ ಗೆಳೆಯನಿಗೆ ಮಂಡಿಯೂರಿ ಪ್ರಪೋಸ್

ಈ ಹಿಂದೆ ರಾಜೇಂದ್ರ ಪ್ರಸಾದ್ ಅವರು ‘ಬೇವಾರ್ಸ್’ ಸಿನಿಮಾದ ಪ್ರೀ ರಿಲೀಸ್ ಸಮಾರಂಭದಲ್ಲಿ ಈ ಬಗ್ಗೆ ಮಾತನಾಡಿದ್ದರು. ‘ಈ ಸಿನಿಮಾದಲ್ಲಿ ಅಮ್ಮನ ಮೇಲೆ ಒಂದು ಹಾಡು ಇದೆ. ತಾಯಿ ಇಲ್ಲದವನು ತನ್ನ ಮಗಳಲ್ಲಿ ತಾಯಿಯನ್ನು ಕಾಣುತ್ತಾನೆ. ನಾನು ಹತ್ತು ವರ್ಷದವನಿದ್ದಾಗ ನನ್ನ ತಾಯಿಯನ್ನು ಕಳೆದುಕೊಂಡೆ. ನನ್ನ ಮಗಳಲ್ಲಿ ಅಮ್ಮನನ್ನು ಕಂಡೆ. ಈ ಸಿನಿಮಾದ ಬಳಿಕ ಮಗಳನ್ನು ಮನೆಗೆ ಕರೆದು ಅಮ್ಮ ಹಾಡನ್ನು ನಾಲ್ಕು ಬಾರಿ ಕೇಳಿದ್ದೇನೆ’ ಎಂದರು ರಾಜೇಂದ್ರ ಪ್ರಸಾದ್ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.