‘ಪುಷ್ಪ 2’ ಒಟಿಟಿ ಬಿಡುಗಡೆ ಬಗ್ಗೆ ಸ್ಪಷ್ಟನೆ ನೀಡಿದ ನಿರ್ಮಾಪಕರು

Pushpa 2: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಿ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಸಾಕಷ್ಟು ಸುದ್ದಿಗಳು ಈಗಾಗಲೇ ಹರಿದಾಡುತ್ತಿವೆ. ಸಂಕ್ರಾಂತಿಗೆ ಈ ಸಿನಿಮಾ ಒಟಿಟಿಗೆ ಬರಲಿದೆ ಎನ್ನಲಾಗುತ್ತಿದೆ. ಇದೀಗ ಸಿನಿಮಾದ ನಿರ್ಮಾಪಕರು ‘ಪುಷ್ಪ 2’ ಒಟಿಟಿ ಬಿಡುಗಡೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ಪುಷ್ಪ 2’ ಒಟಿಟಿ ಬಿಡುಗಡೆ ಬಗ್ಗೆ ಸ್ಪಷ್ಟನೆ ನೀಡಿದ ನಿರ್ಮಾಪಕರು
Pushpa 2
Follow us
ಮಂಜುನಾಥ ಸಿ.
|

Updated on: Dec 21, 2024 | 9:05 AM

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಇದೇ ತಿಂಗಳು ಡಿಸೆಂಬರ್ 05 ರಂದು ತೆರೆಗೆ ಬಂದಿದೆ. ಸಿನಿಮಾ ಬಿಡುಗಡೆ ಆಗಿ 15 ದಿನಗಳಿಗೂ ಹೆಚ್ಚು ಸಮಯವಾಗಿದ್ದರೂ ಸಹ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್​ನಲ್ಲಿ ಸಹ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ಈ ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈ ಸಿನಿಮಾ ಸಂಕ್ರಾಂತಿ ಹಬ್ಬದ ವೇಳೆಗೆ ನೆಟ್​ಫ್ಲಿಕ್ಸ್​ ಹಾಗೂ ಅಮೆಜಾನ್ ಒಟಿಟಿಗಳಲ್ಲಿ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸ್ವತಃ ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ಮೈತ್ರಿ ಮೂವಿ ಮೇಕರ್ಸ್ ಸ್ಪಷ್ಟನೆ ನೀಡಿದ್ದಾರೆ.

ಟ್ವೀಟ್ ಮಾಡಿರುವ ಮೈತ್ರಿ ಮೂವಿ ಮೇಕರ್ಸ್, ‘ಪುಷ್ಪ 2’ ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಆದರೆ ನಮ್ಮ ಸಿನಿಮಾ ಕನಿಷ್ಟ 56 ದಿನಗಳ ವರೆಗೆ ಯಾವುದೇ ಒಟಿಟಿಗೆ ಬಿಡುಗಡೆ ಆಗುವುದಿಲ್ಲ. ಈ ವರ್ಷ ಹಬ್ಬದ ಸೀಸನ್​ಗೆ ಚಿತ್ರಮಂದಿರದಲ್ಲಿರುವ ದೊಡ್ಡ ಸಿನಿಮಾ ‘ಪುಷ್ಪ 2’ ಆಗಿದ್ದು, ಎಲ್ಲರೂ ಚಿತ್ರಮಂದಿಗಳಿಗೆ ಹೋಗಿ ಸಿನಿಮಾ ವೀಕ್ಷಿಸಿ’ ಎಂದು ನಿರ್ಮಾಪಕರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:‘ಪುಷ್ಪ 2’ ಎಫೆಕ್ಟ್​, ರಾಮ್ ಚರಣ್​ ಸಿನಿಮಾಕ್ಕೆ ಇಲ್ಲ ವಿಶೇಷ ಶೋ, ಭಾರಿ ನಷ್ಟ

‘ಪುಷ್ಪ 2’ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಒಟಿಟಿಗೆ ಬರಲಿದೆ ಎಂಬ ಸುದ್ದಿ ಜೋರಾಗಿ ಹರಿದಾಡಿತ್ತು. ಹಲವು ಮಂದಿ ಸಿನಿಮಾ ಒಟಿಟಿಗೆ ಬರಲೆಂದು ಕಾಯುತ್ತಿದ್ದರು. ಆದರೆ ಇದೀಗ ಸ್ವತಃ ಸಿನಿಮಾದ ನಿರ್ಮಾಪಕರು ‘ಪುಷ್ಪ 2’ ಒಟಿಟಿ ಬಿಡುಗಡೆ ಬಗ್ಗೆ ಖಾತ್ರಿಪಡಿಸಿದ್ದು, ಮೈತ್ರಿ ಮೂವಿ ಮೇಕರ್ಸ್ ಹೇಳಿರುವಂತೆ ‘ಪುಷ್ಪ 2’ ಸಿನಿಮಾ ಫೆಬ್ರವರಿ ಮೊದಲ ವಾರದ ವರೆಗೆ ಒಟಿಟಿಯಲ್ಲಿ ಬಿಡುಗಡೆ ಆಗುವುದಿಲ್ಲ ಎಂಬುದು ಖಾತ್ರಿ ಆಗಿದೆ.

ತೆಲುಗು ಸಿನಿಮಾಗಳು ಬಿಡುಗಡೆ ಆದ ಒಂದು ತಿಂಗಳು ಒಟಿಟಿಗೆ ಬರುವಂತಿಲ್ಲ ಎಂಬ ನಿಯಮವಿದೆ. ಆದರೆ ‘ಪುಷ್ಪ 2’ ಸಿನಿಮಾ ಎರಡು ತಿಂಗಳಾದ ಬಳಿಕ ಒಟಿಟಿಗೆ ಬರಲಿದೆ. ಆ ಮೂಲಕ ಚಿತ್ರಮಂದಿರದಲ್ಲಿಯೇ ಹೆಚ್ಚು ಗಳಿಕೆ ಮಾಡುವ ಫೋಕಸ್ ಅನ್ನು ನಿರ್ಮಾಪಕರು ಇರಿಸಿಕೊಂಡಿದ್ದಾರೆ. ಸಿನಿಮಾದ ಒಟಿಟಿ ಹಕ್ಕು ಈಗಾಗಲೇ ಭಾರಿ ಮೊತ್ತಕ್ಕೆ ಒಟಿಟಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ನೆಟ್​ಫ್ಲಿಕ್ಸ್​ ಹಾಗೂ ಜೀ 5ಗೆ ಸಿನಿಮಾದ ಒಟಿಟಿ ಹಕ್ಕು ಮಾರಾಟಗೊಂಡಿದ್ದು ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
ತಾಳಿ ಕಟ್ಟುವಾಗ ಮೂರು ಗಂಟು ಹಾಕುವುದು ಏಕೆ? ಅದರ ಮಹತ್ವ ತಿಳಿಯಿರಿ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Daily Horoscope: ವೃಷಭ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಬಿಗ್ ಬಾಸ್ ಮನೆ ಎದುರು ಹನುಮಂತನ ಅಭಿಮಾನಿಗಳ ಸಂಭ್ರಮಾಚರಣೆ
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
ಅಪ್ಪಾಜಿ ಕಿಡ್ನಾಪ್ ಆಗಿ ವಾಪಸ್ ಬಂದಾಗ ಆದಷ್ಟು ಸಂತೋಷ ಈಗ ಆಗಿದೆ: ರಾಘಣ್ಣ
ಅಪ್ಪಾಜಿ ಕಿಡ್ನಾಪ್ ಆಗಿ ವಾಪಸ್ ಬಂದಾಗ ಆದಷ್ಟು ಸಂತೋಷ ಈಗ ಆಗಿದೆ: ರಾಘಣ್ಣ