ತೆಲುಗು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮೇಲೆ ಓಪನ್​ ಟ್ರೋಲ್; ಹುಟ್ಟಿತು ಚರ್ಚೆ

ತೆಲುಗಿನ ‘ಸಿಂಗಲ್’ ಸಿನಿಮಾನ ವೈರಲ್ ಮೀಮ್‌ಗಳು ಮತ್ತು ಸೆಲೆಬ್ರಿಟಿಗಳ ಡೈಲಾಗ್‌ಗಳನ್ನು ಬಳಸಿ ನಿರ್ಮಿಸಲಾಗಿದೆ. ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಹಾಗೂ ಇತರ ಸೆಲೆಬ್ರಿಟಿಗಳ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಮತ್ತು ಡೈಲಾಗ್‌ಗಳನ್ನು ಚಿತ್ರದಲ್ಲಿ ಬಳಸಲಾಗಿದೆ. ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಚಿತ್ರದ ಕೆಲವು ದೃಶ್ಯಗಳು ಬಾಲಯ್ಯ ಮತ್ತು ಅಲ್ಲು ಅರ್ಜುನ್ ಸಿನಿಮಾಗಳನ್ನು ನೆನಪಿಸುತ್ತವೆ.

ತೆಲುಗು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮೇಲೆ ಓಪನ್​ ಟ್ರೋಲ್; ಹುಟ್ಟಿತು ಚರ್ಚೆ
ವಿಜಯ್-ರಶ್ಮಿಕಾ

Updated on: Jun 11, 2025 | 7:01 AM

ಕಳೆದ ವರ್ಷ ರಿಲೀಸ್ ಆದ ಉಪೇಂದ್ರ ನಟನೆ ಹಾಗೂ ನಿರ್ದೇಶನದ ‘ಯುಐ’ ಸಿನಿಮಾ (UI Movie) ಯಶಸ್ಸು ಕಂಡಿತ್ತು. ಈ ಚಿತ್ರದ ‘ಟ್ರೋಲ್’ ಸಾಂಗ್ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಟ್ರೋಲ್​ಗಳನ್ನೇ ಇಟ್ಟುಕೊಂಡು ಈ ಹಾಡನ್ನು ರಚಿಸಲಾಗಿತ್ತು. ಹೀಗಿರುವಾಗ ಮೀಮ್​ಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡಿದರೆ? ಅಂಥ ಸಾಹಸಕ್ಕೆ ತೆಲುಗು ಮಂದಿ ಕೈ ಹಾಕಿ ಯಶಸ್ಸು ಕಂಡಿದ್ದಾರೆ. ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಸೇರಿದಂತೆ ಅನೇಕರ ಡೈಲಾಗ್ ಹಾಗೂ ಪೋಸ್​ಗಳನ್ನು ಇದರಲ್ಲಿ ಬಳಕೆ ಮಾಡಿಕೊಳ್ಳಲಾಗಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

‘ಸಿಂಗಲ್’ ಅನ್ನೋದು ಸಿನಿಮಾದ ಹೆಸರು. ಮೇ 9ರಂದು ಈ ಸಿನಿಮಾ ಥಿಯೇಟರ್​ನಲ್ಲಿ ಬಿಡುಗಡೆ ಕಂಡಿತು. ಕಾರ್ತಿಕ್ ರಾಜು ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ನಿರ್ದೇಶನದಲ್ಲಿ ಅವರಿಗೆ ಇದು ಐದನೇ ಅನುಭವ. ಈ ಸಿನಿಮಾದಲ್ಲಿ ಶ್ರೀ ವಿಷ್ಣು, ಇವಾನಾ, ವೆನ್ನೆಲಾ ಕಿಶೋರ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಪ್ರೆಸೆಂಟ್ ಮಾಡಿದ್ದಾರೆ. ಈ ಚಿತ್ರದ ಕ್ಲಿಪ್​ಗಳು ವೈರಲ್ ಆಗಿವೆ.

ಇದನ್ನೂ ಓದಿ
ಒಂದೇ ವರ್ಷ, ಮೂರು ಖ್ಯಾತ ನಿರ್ದೇಶಕರು ಮತ್ತು ನಾಲ್ಕು ಡಿಸಾಸ್ಟರ್ ಸಿನಿಮಾ
ಸಿನಿಮಾ ಇಲ್ಲದೆ ಕಷ್ಟದಲ್ಲಿರೋ ತ್ರಿವಿಕ್ರಂಗೆ ದೊಡ್ಡ ಸಲಹೆ ಕೊಟ್ಟ ಪವನ್
ಹೊಸ ಅಧ್ಯಾಯ ಆರಂಭಿಸಿದ ಜೀ ಕನ್ನಡ; ವಿನೂತನ ಲೋಗೋ, ಹೊಸ ಅಧ್ಯಾಯ
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್

ಇದನ್ನೂ ಓದಿ: ‘ಚೆನ್ನೈಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನ ಇದೆ, ನಾನು ಮೊದಲ ಕಲಿತ ಭಾಷೆ ತಮಿಳು’: ರಶ್ಮಿಕಾ ಮಂದಣ್ಣ

ಈ ಮೊದಲು ರಶ್ಮಿಕಾ ಮಂದಣ್ಣ ಅವರು ತಮ್ಮ ಬರ್ತ್​ಡೇ ದಿನ ತಲೆಯ ಮೇಲೆ ಕೈ ಇಟ್ಟುಕೊಂಡು ‘ಹ್ಯಾಪಿ ಬರ್ತ್​ಡೇ ರಶ್ಶಿ’ ಎನ್ನುತ್ತಾ ಹೇಳುತ್ತಾ ಬರುತ್ತಿದ್ದರು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ವಿಶೇಷ ಎಂದರೆ ‘ಸಿಂಗಲ್’ ಸಿನಿಮಾದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ವೆನ್ನೆಲ್ಲಾ ಕಿಶೋರ್ ಅವರು ‘ಹ್ಯಾಪಿ ಬರ್ತ್​ಡೇ ಗಾಯತ್ರಿ’ ಎನ್ನುತ್ತಾ ಸೇಮ್ ಪೋಸ್​ನಲ್ಲಿ ಬರುತ್ತಾರೆ. ಸದ್ಯ ಈ ವಿಚಾರ ಚರ್ಚೆ ಹುಟ್ಟುಹಾಕಿದೆ. ಇಷ್ಟೇ ಅಲ್ಲ ಬಾಲಯ್ಯ, ಅಲ್ಲು ಅರ್ಜುನ್ ಸಿನಿಮಾದ ದೃಶ್ಯಗಳನ್ನು ಅದೇ ರೀತಿಯಲ್ಲಿ ನಕಲು ಮಾಡಲಾಗಿದೆ. ವಿಜಯ್ ದೇವರಕೊಂಡ ವೇದಿಕೆ ಮೇಲೆ ಹೇಳಿದ್ದ ಡೈಲಾಗ್ ಒಂದನ್ನು ಸಿನಿಮಾದಲ್ಲಿ ಬಳಕೆ ಬಳಸಲಾಗಿದೆ.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಕ್ಲಿಪ್​ಗಳು ವೈರಲ್ ಆಗಿವೆ. ಇಷ್ಟೇ ಅಲ್ಲ, ಒರಿಜಿನಲ್ ಮೀಮ್/ ಡೈಲಾಗ್ ಯಾವುದು ಎಂಬದುನ್ನು ಒಂದು ಭಾಗದಲ್ಲಿ ಇಡಲಾಗಿದ್ದು, ಸಿನಿಮಾದಲ್ಲಿ ಬಳಕೆ ಆದ ಡೈಲಾಗ್​ನ ಮತ್ತೊಂದು ಕಡೆಯಲ್ಲಿ ಹಾಕಿ ವೈರಲ್ ಮಾಡಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.