ಮದುವೆ ಫಂಕ್ಷನ್​​ಗೆ ಅಟೆಂಡ್ ಆಗಿದ್ದಕ್ಕೂ ಟೀಕೆ ಎದುರಿಸಿದ ದಳಪತಿ ವಿಜಯ್

ಚೆನ್ನೈನಲ್ಲಿ ನಡೆದ ಮದುವೆಯಲ್ಲಿ ದಳಪತಿ ವಿಜಯ್ ಭಾಗಿ ಆಗಿದ್ದಾರೆ. ಇದು ಹೈ ಪ್ರಾಫೈಲ್ ಮದುವೆ ಆಗಿತ್ತು. ಈ ಕಾರಣಕ್ಕೆ ಸಾಕಷ್ಟು ಗಣ್ಯರು ಹಾಜರಿ ಹಾಕಿದ್ದರು. ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಇದರಲ್ಲಿ ಭಾಗಿ ಆಗಿದ್ದಾರೆ. ಈ ಬಗ್ಗೆ ಚರ್ಚೆ ನಡೆದಿದೆ. ಅನೇಕರು ವಿಜಯ್ ಅವರನ್ನು ಟೀಕಿಸಿದ್ದಾರೆ.

ಮದುವೆ ಫಂಕ್ಷನ್​​ಗೆ ಅಟೆಂಡ್ ಆಗಿದ್ದಕ್ಕೂ ಟೀಕೆ ಎದುರಿಸಿದ ದಳಪತಿ ವಿಜಯ್
ವಿಜಯ್

Updated on: Feb 09, 2026 | 9:09 AM

ದಳಪತಿ ವಿಜಯ್ (vijay) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಅವರು ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅವರ ನಟನೆಯ ‘ಜನ ನಾಯಗನ್’ ರಿಲೀಸ್ ಬಗ್ಗೆ ಇನ್ನೂ ಯಾವುದೇ ಅಪ್​​ಡೇಟ್ ಸಿಕ್ಕಿಲ್ಲ. ಕಾಲ್ತುಳಿತದ ವೇಳೆ 41 ಜನ ಸತ್ತ ಪ್ರಕರಣದಲ್ಲಿ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಅವರು ಒಂದು ವಿಷಯಕ್ಕೆ ಟೀಕೆ ಎದುರಿಸಿದ್ದಾರೆ. ಇದಕ್ಕೆ ಕಾರಣ ಮದುವೆಯಲ್ಲಿ ಭಾಗಿ ಆಗಿದ್ದು.

ಚೆನ್ನೈನಲ್ಲಿ ನಡೆದ ಮದುವೆಯಲ್ಲಿ ದಳಪತಿ ವಿಜಯ್ ಭಾಗಿ ಆಗಿದ್ದಾರೆ. ಇದು ಹೈ ಪ್ರಾಫೈಲ್ ಮದುವೆ ಆಗಿತ್ತು. ಈ ಕಾರಣಕ್ಕೆ ಸಾಕಷ್ಟು ಗಣ್ಯರು ಹಾಜರಿ ಹಾಕಿದ್ದರು. ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಸೇರಿದಂತೆ ಅನೇಕ ಗಣ್ಯರು ಇದರಲ್ಲಿ ಭಾಗಿ ಆಗಿದ್ದಾರೆ. ಈ ಬಗ್ಗೆ ಚರ್ಚೆ ನಡೆದಿದೆ. ಅನೇಕರು ವಿಜಯ್ ಅವರನ್ನು ಟೀಕಿಸಿದ್ದಾರೆ.

ಕರೂರಿನಲ್ಲಿ ಕಳೆದ ವರ್ಷ ವಿಜಯ್ ನಡೆಸಿದ ರ್ಯಾಲಿ ವೇಳೆ ಸಾಕಷ್ಟು ಮಂದಿ ಮೃತಪಟ್ಟರು. ಈ ಕಾಲ್ತುಳಿತಕ್ಕೆ ವಿಜಯ್ ಹೊಣೆ ಎಂಬ ಆರೋಪ ಇದೆ. ವಿಜಯ್ ವಿವಾಹ ಫಂಕ್ಷನ್​​ಗೆ ಹಾಜರಿ ಹಾಕಿದ್ದನ್ನು ಈ ರೀತಿ ಆರೋಪ ಮಾಡಿದವರು ಖಂಡಿಸಿದ್ದಾರೆ. ಇದು ಸರಿ ಅಲ್ಲ ಎಂದು ಹೇಳಿದ್ದಾರೆ. ‘ಕರೂರು ಕಾಲ್ತುಳಿತದ ಮೃತರ ಕುಟುಂಬಕ್ಕೆ ಭೇಟಿ ನೀಡಲು ವಿಜಯ್ ಬಳಿ ಸಮಯವಿಲ್ಲ. ಮದುವೆ ಮನೆಗೆ ತೆರಳಲು ಅವರ ಬಳಿ ಸಮಯವಿದೆ’ ಎಂಬುದು ಅನೇಕರ ಟೀಕೆ.

ಇದನ್ನೂ ಓದಿ: ದಳಪತಿ ವಿಜಯ್​​ಗೆ ಮತ್ತೊಂದು ಶಾಕ್; ಕಟ್ಟಬೇಕಿದೆ ಒಂದೂವರೆ ಕೊಟಿ ರೂ. ದಂಡ

ಇನ್ನು, ವಿಜಯ್ ನಟನೆಯ ‘ಜನ ನಾಯಗನ್’ ರಿಲೀಸ್ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ಸಿನಿಮಾದಲ್ಲಿರುವ ರಾಜಕೀಯ ವಿಷಯವೇ ರಿಲೀಸ್ ವಿಳಂಬಕ್ಕೆ ಕಾರಣ ಎಂಬ ಮಾತುಗಳು ವ್ಯಕ್ತವಾಗಿದೆ. ಈ ಚಿತ್ರವನ್ನು ಕನ್ನಡದ ಕೆವಿಎನ್ ಸಂಸ್ಥೆ ನಿರ್ಮಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us