AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಳಪತಿ ವಿಜಯ್​​ಗೆ ಮತ್ತೊಂದು ಶಾಕ್; ಕಟ್ಟಬೇಕಿದೆ ಒಂದೂವರೆ ಕೊಟಿ ರೂ. ದಂಡ

ದಳಪತಿ ವಿಜಯ್ ತೆರಿಗೆ ವಂಚನೆ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಅವರಿಗೆ ರಿಲೀಫ್ ನೀಡಲು ನಿರಾಕರಿಸಿದೆ. 2015-16ರ ಐಟಿ ದಾಳಿ ವೇಳೆ 15 ಕೋಟಿ ರೂ. ಆದಾಯ ಬಹಿರಂಗಪಡಿಸದ ಕಾರಣ ತೆರಿಗೆ ಇಲಾಖೆ ವಿಧಿಸಿದ್ದ 1.5 ಕೋಟಿ ರೂ. ದಂಡವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಇದರಿಂದ ವಿಜಯ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

ದಳಪತಿ ವಿಜಯ್​​ಗೆ ಮತ್ತೊಂದು ಶಾಕ್; ಕಟ್ಟಬೇಕಿದೆ ಒಂದೂವರೆ ಕೊಟಿ ರೂ. ದಂಡ
ವಿಜಯ್
ರಾಜೇಶ್ ದುಗ್ಗುಮನೆ
|

Updated on: Feb 06, 2026 | 2:55 PM

Share

ದಳಪತಿ ವಿಜಯ್ (Vijay) ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ಗೆ ಇನ್ನೂ ರಿಲೀಸ್ ಭಾಗ್ಯ ಸಿಕ್ಕಿಲ್ಲ. ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣಕ್ಕೆ ಆದ ತೊಂದರೆಯಿಂದ ಅವರ ಚಿತ್ರ ಬಿಡುಗಡೆ ಭಾಗ್ಯ ಕಾಣುತ್ತಿಲ್ಲ. ಹೀಗಿರುವಾಗೇ ಅವರಿಗೆ ಮದ್ರಾಸ್ ಹೈಕೋರ್ಟ್​​ನಿಂದ ದೊಡ್ಡ ಶಾಕ್ ಒಂದು ಎದುರಾಗಿದೆ. ಆಸ್ತಿ ಬಹಿರಂಗಪಡಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆರಿಗೆ ಇಲಾಖೆ ಹೇರಿದ್ದ ಒಂದೂವರೆ ಕೋಟಿ ರೂಪಾಯಿ ದಂಡದ ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ ಹೇಳಿದೆ.

2015-16ನೇ ಆರ್ಥಿಕ ಸಾಲಿನಲ್ಲಿ ವಿಜಯ್ ಮನೆ ಮೇಲೆ ಐಟಿ ಇಲಾಖೆ ದಾಳಿ ನಡೆಸಿತ್ತು. ಈ ವೇಳೆ ಅವರು 15 ಕೋಟಿ ರೂಪಾಯಿ ಆದಾಯವನ್ನು ತೋರಿಸದೆ, ತೆರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಅವರಿಗೆ ಒಂದೂವರೆ ಕೋಟಿ ರೂಪಾಯಿ ದಂಡ ವಿಧಿಸಿತ್ತು.

ದಳಪತಿ ವಿಜಯ್ ಅವರು 2022ರಲ್ಲಿ ಈ ನೋಟಿಸ್ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ವರ್ಷ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಸೆಂದಿಲ್ ಕುಮಾರ್ ರಾಮಮೂರ್ತಿ ಅವರು ಶುಕ್ರವಾರ (ಫೆಬ್ರವರಿ 6) ತೀರ್ಪು ನೀಡಿದ್ದಾರೆ. ಇದು ವಿಜಯ್ ವಿರುದ್ಧದ ತೀರ್ಪಾಗಿದೆ. ವಿಜಯ್​​ಗೆ ರಿಲೀಫ್ ನೀಡಲು ಸಾಧ್ಯವಿಲ್ಲ ಎಂದಿದೆ.

ಇದನ್ನೂ ಓದಿ: ಕನ್ನಡದ ನಿರ್ಮಾಪಕನ ಬಗ್ಗೆ ಮರುಕ ವ್ಯಕ್ತಪಡಿಸಿದ ದಳಪತಿ ವಿಜಯ್

‘ತೆರಿಗೆ ಅಧಿಕಾರಿಗಳು ಹೊರಡಿಸಿದ ಶೋಕಾಸ್ ನೋಟಿಸ್ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 263ರ ಅಡಿಯಲ್ಲಿ ನಿಗದಿಪಡಿಸಿದ ಸಮಯದ ಮಿತಿಯೊಳಗೆ ಇದೆ . ಅದರ ಜಾರಿಯಲ್ಲಿ ಯಾವುದೇ ತಪ್ಪಾಗಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಅರ್ಜಿಯನ್ನು ತಿರಸ್ಕರಿಸುವ ವೇಳೆ ‘ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ’ಯಲ್ಲಿ ಇದನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ನೀಡಿದೆ.

ಸಿಕ್ಕಿತ್ತು 15 ಕೋಟಿ

ವಿಜಯ್ ಮನೆಯ ಮೇಲೆ ದಾಳಿ ಮಾಡಿದಾಗ ವಿಜಯ್ ಅವರು 15 ಕೋಟಿ ಹಣದ ಬಗ್ಗೆ ಮಾಹಿತಿ ನೀಡಿದ್ದರು. ಇದಕ್ಕೆ ತೆರಿಗೆ ಪಾವತಿಸದ ಕಾರಣ ಈ ದಂಡ ವಿಧಿಸಲಾಗಿತ್ತು. ಅವರು ದಂಡ ಪಾವತಿ ಮಾಡುತ್ತಾರಾ ಅಥವಾ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ ಈ ಆದೇಶವನ್ನು ಪ್ರಶ್ನಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.