AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thalapathy Vijay: ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಅಟ್ಲಿ ನಿರ್ದೇಶನ; ನಾಯಕಿ ಯಾರು?

ನಟನೆಯಲ್ಲಿ ಗೆಲುವು ಕಂಡವರು ರಾಜಕೀಯಕ್ಕೆ ಕಾಲಿಡೋದು ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳು ಚಿತ್ರರಂಗದಲ್ಲಿ ಹೊಸದದೇನು ಅಲ್ಲ. ವಿಜಯ್ ಕೂಡ ಹಾಗೆಯೇ ಮಾಡುತ್ತಿದ್ದಾರೆ. 69ನೇ ಚಿತ್ರ ಅವರ ಕೊನೆಯ ಸಿನಿಮಾ ಆಗಿರಲಿದೆ. ಈ ಚಿತ್ರಕ್ಕೆ ಅಟ್ಲಿ ಅವರು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Thalapathy Vijay: ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಅಟ್ಲಿ ನಿರ್ದೇಶನ; ನಾಯಕಿ ಯಾರು?
ವಿಜಯ್
ರಾಜೇಶ್ ದುಗ್ಗುಮನೆ
|

Updated on: Mar 04, 2024 | 2:29 PM

Share

ನಟ ದಳಪತಿ ವಿಜಯ್ (Thalapathy Vijay) ಅವರು ರಾಜಕೀಯಕ್ಕೆ ಸೇರುವ ಮೂಲಕ ಫ್ಯಾನ್ಸ್​ಗೆ ಅಚ್ಚರಿ ತಂದಿದ್ದರು. ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಪಡೆದ ಅವರು ಬಳಿಕ ರಾಜಕೀಯಕ್ಕೆ ಕಾಲಿಡುವ ನಿರ್ಧಾರ ಮಾಡಿದ್ದಾರೆ. ವಿಜಯ್ ಅವರು ಶೀಘ್ರವೇ ಸಂಪೂರ್ಣವಾಗಿ ಚಿತ್ರರಂಗ ತೊರೆಯಲಿದ್ದಾರೆ. 69ನೇ ಸಿನಿಮಾ ಅವರ ಕೊನೆಯ ಸಿನಿಮಾ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಸಿನಿಪ್ರಿಯರಿಗೆ ಬೇಸರ ತರಿಸಿದೆ. ಈ ಚಿತ್ರದ ಬಗ್ಗೆ ಈಗ ಒಂದಷ್ಟು ವದಂತಿಗಳು ಹರಿದಾಡುತ್ತಿವೆ.

ನಟನೆಯಲ್ಲಿ ಗೆಲುವು ಕಂಡವರು ರಾಜಕೀಯಕ್ಕೆ ಕಾಲಿಡೋದು ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳು ಚಿತ್ರರಂಗದಲ್ಲಿ ಹೊಸದದೇನು ಅಲ್ಲ. ವಿಜಯ್ ಕೂಡ ಹಾಗೆಯೇ ಮಾಡುತ್ತಿದ್ದಾರೆ. 69ನೇ ಚಿತ್ರ ಅವರ ಕೊನೆಯ ಸಿನಿಮಾ ಆಗಿರಲಿದೆ. ಈ ಚಿತ್ರಕ್ಕೆ ಅಟ್ಲಿ ಅವರು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಟ್ಲಿ ಹಾಗೂ ವಿಜಯ್ ಅವರದ್ದು ಹಿಟ್ ಕಾಂಬಿನೇಷನ್. ‘ಮೆರ್ಸಲ್’, ‘ಬಿಗಿಲ್’ ಹಾಗೂ ‘ತೇರಿ’ ಸಿನಿಮಾಗಳು ಇವರ ಕಾಂಬಿನೇಷನ್​ನಲ್ಲಿ ಮೂಡಿಬಂದಿವೆ. ಈಗ ಇವರು ನಾಲ್ಕನೇ ಬಾರಿಗೆ ಒಂದಾಗಲು ನಿರ್ಧರಿಸಿದ್ದಾರೆ. ಈ ಸಿನಿಮಾ ದೊಡ್ಡ ಬಜೆಟ್​ನಲ್ಲಿ ಮೂಡಿ ಬರಲಿದೆ. ಸನ್​ ಪಿಕ್ಚರ್ಸ್ ಈ ಸಿನಿಮಾ ನಿರ್ಮಾಣ ಮಾಡಲಿದೆ ಎಂದು ಹೇಳಲಾಗುತ್ತಿದೆ. ಸಮಂತಾ ರುತ್ ಪ್ರಭು ಅವರು ಈ ಚಿತ್ರದಲ್ಲಿ ನಾಯಕಿ ಪಾತ್ರ ಮಾಡಲಿದ್ದಾರೆ ಎಂದು ವರದಿ ಆಗಿದೆ.

ಸಮಂತಾ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಅವರು ಸದ್ಯ ಬ್ರೇಕ್​ನಲ್ಲಿ ಇದ್ದಾರೆ. ಈ ಚಿತ್ರಕ್ಕೆ ಸಮಂತಾ ನಾಯಕಿ ಎನ್ನಲಾಗುತ್ತಿದೆ. ಅಬಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಇಷ್ಟೇ ಅಲ್ಲದೆ ಎಚ್​. ವಿನೋದ್ ಹೆಸರು ಕೂಡ ‘ದಳಪತಿ 69’ ಜೊತೆ ತಳುಕು ಹಾಕಿಕೊಂಡಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.

ಇದನ್ನೂ ಓದಿ: ಸಸ್ಪೆನ್ಸ್ ಥ್ರಿಲ್ಲರ್​​ನೊಂದಿಗೆ ಬಂದ ವಿಜಯ್ ರಾಘವೇಂದ್ರ; 136 ಜನರ ಮಿಸ್ಸಿಂಗ್ ಕಥೆ ಹೇಳಲಿದೆ ‘ಜೋಗ್ 101’

ಫೆಬ್ರವರಿ ತಿಂಗಳಲ್ಲಿ ವಿಜಯ್ ಅವರು ‘ತಮಿಳಗ ವೆಟ್ರಿ ಕಳಗಮ್’ ಪಕ್ಷ ಘೋಷಣೆ ಮಾಡಿದರು. 2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಇವರು ಸ್ಪರ್ಧೆ ಮಾಡಲಿದ್ದಾರೆ. ಹೀಗಾಗಿ, ಅವರು ಇನ್ನೊಂದು ವರ್ಷ ಸಿನಿಮಾ ರಂಗದಲ್ಲಿ ಇರಲಿದ್ದು ಆ ಬಳಿಕ ಅವರು ರಾಜಕೀಯ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ. ಸದ್ಯ ಅವರು ವೆಂಕಟ್ ಪ್ರಭು ನಿರ್ದೇಶನದ ‘GOAT’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ