AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕ್ಸ್ ಆಫೀಸ್​ನಲ್ಲಿ ಅಜಿತ್ vs ವಿಜಯ್​; ಈಗಲೇ ಶುರುವಾಯ್ತು ಫ್ಯಾನ್ಸ್​ ವಾರ್

ಅಜಿತ್ ಹಾಗೂ ವಿಜಯ್ ಸಿನಿಮಾಗಳು ಕ್ಲ್ಯಾಶ್ ಆಗುತ್ತಿರುವುದು ಇದೇ ಮೊದಲೇನಲ್ಲ. 2014ರಲ್ಲಿ ವಿಜಯ್ ಅವರ ‘ಜಿಲ್ಲಾ’ ಹಾಗೂ ಅಜಿತ್ ಅವರ ‘ವೀರಂ’ ಚಿತ್ರಗಳು ಒಟ್ಟಿಗೆ ತೆರೆಗೆ ಬಂದಿದ್ದವು.

ಬಾಕ್ಸ್ ಆಫೀಸ್​ನಲ್ಲಿ ಅಜಿತ್ vs ವಿಜಯ್​; ಈಗಲೇ ಶುರುವಾಯ್ತು ಫ್ಯಾನ್ಸ್​ ವಾರ್
ಅಜಿತ್-ವಿಜಯ್
TV9 Web
| Edited By: |

Updated on: Oct 28, 2022 | 3:59 PM

Share

ನಟ ಅಜಿತ್ ಕುಮಾರ್ (Ajith Kumar) ಹಾಗೂ ನಟ ದಳಪತಿ ವಿಜಯ್ ಅಭಿಮಾನಿಗಳ ಮಧ್ಯೆ ಕಿರಿಕ್ ಸರ್ವೇಸಾಮಾನ್ಯ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅನೇಕ ಸಮರಗಳು ನಡೆದಿವೆ. ಸಿನಿಮಾ ವಿಚಾರದಿಂದ ಹಿಡಿದು, ವೈಯಕ್ತಿಕ ಜೀವನದ ವಿಚಾರದವರೆಗೆ ಎಲ್ಲ ವಿಷಯಗಳಲ್ಲೂ ಅಜಿತ್ ಹಾಗೂ ವಿಜಯ್ ಅಭಿಮಾನಿಗಳು ಕಿತ್ತಾಡಿಕೊಳ್ಳುತ್ತಾರೆ. ಈಗ ಈ ಹೀರೋಗಳ ಸಿನಿಮಾಗಳು ಒಂದೇ ದಿನ ತೆರೆಗೆ ಬರುತ್ತಿವೆ. ಇದರಿಂದ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕ್ಲ್ಯಾಶ್ ಏರ್ಪಡುತ್ತಿವೆ.

‘ವಲಿಮೈ’ ತೆರೆಗೆ ಬಂದ ನಂತರದಲ್ಲಿ ಇದೇ ತಂಡ ಮತ್ತೊಮ್ಮೆ ಜತೆಯಾಗಿತ್ತು. ‘ವಲಿಮೈ’ನಲ್ಲಿ ಅಜಿತ್ ಕುಮಾರ್ ಅವರು ಹೀರೋ ಆಗಿ ನಟಿಸಿದರೆ, ಎಚ್​. ವಿನೋದ್ ನಿರ್ದೇಶನ ಹಾಗೂ ಬೋನಿ ಕಪೂರ್ ನಿರ್ಮಾಣ ಈ ಚಿತ್ರಕ್ಕಿತ್ತು. ಇದೇ ಕಾಂಬಿನೇಷನ್​ನಲ್ಲಿ ‘ತುನಿವು’ ಮೂಡಿ ಬಂದಿದೆ. ಈ ಚಿತ್ರ ಮುಂದಿನ ಸಂಕ್ರಾಂತಿಗೆ ರಿಲೀಸ್ ಆಗಲಿದೆ. ಈ ಸಂಬಂಧ ಬೋನಿ ಕಪೂರ್ ಅವರು ಟ್ವೀಟ್ ಮಾಡಿದ್ದಾರೆ. ಈ ಮೂಲಕ ರಿಲೀಸ್ ದಿನಾಂಕ ಖಚಿತಪಡಿಸಿದ್ದಾರೆ.

ಇದನ್ನೂ ಓದಿ
Image
Thala Ajith Kumar Birthday: ಅಜಿತ್​ ಕುಮಾರ್​ ಜನ್ಮದಿನ: ವಿಮಾನದ ಪೈಲಟ್​ ಕೂಡ ಆಗಿರುವ ಸ್ಟಾರ್​ ನಟನಿಗಿದೆ ಹಲವು ಹವ್ಯಾಸ
Image
ಒಟಿಟಿಯಲ್ಲಿ ‘ವಲಿಮೈ’ ದಾಖಲೆ; ಒಂದೇ ನಿಮಿಷಕ್ಕೆ 10 ಕೋಟಿ ಸ್ಟ್ರೀಮಿಂಗ್
Image
​ಕೀಳು ಮಟ್ಟಕ್ಕೆ ಬಂತು ಫ್ಯಾನ್ಸ್​ ವಾರ್​; ದಳಪತಿ ವಿಜಯ್​ ನಿಧನ ಎಂದು ಫೇಕ್​ ನ್ಯೂಸ್​ ಹಬ್ಬಿಸಿದ ಅಜಿತ್​ ಫ್ಯಾನ್ಸ್​
Image
ನಿರ್ಮಾಪಕನ ಕಾರಿಗೆ ಮೊಸರಿನ ಅಭಿಷೇಕ; ಅಜಿತ್ ಫ್ಯಾನ್ಸ್​ ಮೇಲೆ ಪೆಟ್ರೋಲ್​ ಬಾಂಬ್​​ ಎಸೆತ

ದಳಪತಿ ವಿಜಯ್ ನಟನೆಯ ‘ವಾರಿಸು’ ಕೂಡ ಅದೇ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ. ಇದನ್ನು ಚಿತ್ರತಂಡ ಇತ್ತೀಚೆಗೆ ಖಚಿತಪಡಿಸಿತ್ತು. ವಂಶಿ ಪೈಡಿಪಲ್ಲಿ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪೋಸ್ಟರ್​ಗಳು ಸಾಕಷ್ಟು ಗಮನ ಸೆಳೆದಿವೆ. ನಟಿ ರಶ್ಮಿಕಾ ಮಂದಣ್ಣ ಅವರು ಈ ಚಿತ್ರದಲ್ಲಿ ನಾಯಕಿ ಆಗಿ ನಟಿಸಿದ್ದಾರೆ.

ಅಜಿತ್ ಹಾಗೂ ವಿಜಯ್ ಸಿನಿಮಾಗಳು ಕ್ಲ್ಯಾಶ್ ಆಗುತ್ತಿರುವುದು ಇದೇ ಮೊದಲೇನಲ್ಲ. 2014ರಲ್ಲಿ ವಿಜಯ್ ಅವರ ‘ಜಿಲ್ಲಾ’ ಹಾಗೂ ಅಜಿತ್ ಅವರ ‘ವೀರಂ’ ಚಿತ್ರಗಳು ಒಟ್ಟಿಗೆ ತೆರೆಗೆ ಬಂದಿದ್ದವು. ಈ ವೇಳೆ ‘ವೀರಂ’ ಚಿತ್ರ ಹೆಚ್ಚು ಮೆಚ್ಚುಗೆ ಪಡೆಯಿತು. ‘ಜಿಲ್ಲಾ’ ಕೊಂಚ ಕಡಿಮೆ ಅಬ್ಬರಿಸಿತು. ಈ ಸಂದರ್ಭದಲ್ಲಿ ಅಜಿತ್ ಫ್ಯಾನ್ಸ್ ಹಬ್ಬ ಮಾಡಿದ್ದರು. ಈಗ 8 ವರ್ಷಗಳ ಬಳಿಕ ಇಬ್ಬರೂ ಮುಖಾಮುಖಿ ಆಗುತ್ತಿದ್ದಾರೆ. ಈಗಲೇ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಶುರುವಾಗಿದೆ. ಈ ರೇಸ್​ನಲ್ಲಿ ಗೆಲ್ಲೋದು ಯಾರು ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ: ಬಿಡುಗಡೆ ಆಯ್ತ ಭಾರತದ ಟಾಪ್ ಹೀರೋಗಳ ಪಟ್ಟಿ; ದಳಪತಿ ವಿಜಯ್ ಫಸ್ಟ್​, ಯಶ್​ಗೆ ಎಷ್ಟನೇ ಸ್ಥಾನ?

ಈ ಮೊದಲು ರಿಲೀಸ್ ಆದ ವಿಜಯ್ ನಟನೆಯ ‘ಬೀಸ್ಟ್’ ಅಷ್ಟಾಗಿ ಅಬ್ಬರಿಸಿಲ್ಲ. ಇದೇ ಸಂದರ್ಭದಲ್ಲಿ ‘ಕೆಜಿಎಫ್ 2’ ರಿಲೀಸ್ ಆಗಿದ್ದರಿಂದ ‘ಬೀಸ್ಟ್’ಗೆ ಮತ್ತಷ್ಟು ಹೊಡೆತ ಉಂಟಾಯಿತು. ಈಗ ವಿಜಯ್​ಗೆ ಗೆಲ್ಲುವ ಅನಿವಾರ್ಯತೆ ಇದೆ.

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್