ಬಿಡುಗಡೆ ಆಯ್ತ ಭಾರತದ ಟಾಪ್ ಹೀರೋಗಳ ಪಟ್ಟಿ; ದಳಪತಿ ವಿಜಯ್ ಫಸ್ಟ್​, ಯಶ್​ಗೆ ಎಷ್ಟನೇ ಸ್ಥಾನ?

2022ರ ಜುಲೈ ಅವಧಿಯ ಭಾರತದ ಟಾಪ್ 10 ಜನಪ್ರಿಯ ನಟರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ದಳಪತಿ ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ.

ಬಿಡುಗಡೆ ಆಯ್ತ ಭಾರತದ ಟಾಪ್ ಹೀರೋಗಳ ಪಟ್ಟಿ; ದಳಪತಿ ವಿಜಯ್ ಫಸ್ಟ್​, ಯಶ್​ಗೆ ಎಷ್ಟನೇ ಸ್ಥಾನ?
ಯಶ್-ವಿಜಯ್-ಜ್ಯೂ.ಎನ್​ಟಿಆರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 23, 2022 | 2:49 PM

ಸದ್ಯ ದಕ್ಷಿಣ ಭಾರತದ ಚಿತ್ರರಂಗ ಟಾಪ್​ನಲ್ಲಿದೆ. ಕನ್ನಡ, ತೆಲುಗು ಮೊದಲಾದ ಚಿತ್ರರಂಗದಿಂದ ಅತ್ಯುತ್ತಮ ಸಿನಿಮಾಗಳು ರಿಲೀಸ್ ಆಗುತ್ತಿವೆ. ದೊಡ್ಡ ಬಜೆಟ್​ನ ಚಿತ್ರಗಳು ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡುತ್ತಿವೆ. ‘ಕೆಜಿಎಫ್ 2’ (KGF Chapter 2), ‘777 ಚಾರ್ಲಿ’, ‘ಆರ್​ಆರ್​ಆರ್​’, ‘ವಿಕ್ರಮ್’ ಮೊದಲಾದ ಸಿನಿಮಾಗಳು ಇದಕ್ಕೆ ಉತ್ತಮ ಉದಾಹರಣೆ. ಈಗ ಭಾರತದ ಎಲ್ಲಾ ಸ್ಟಾರ್ಸ್​​ಗಳಿಗೆ ರ್ಯಾಂಕಿಂಗ್ ನೀಡಲಾಗಿದೆ. Ormax ಮೀಡಿಯಾ ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಪಟ್ಟಿ ಬಿಡುಗಡೆ ಮಾಡಿದೆ.

2022ರ ಜುಲೈ ಅವಧಿಯ ಭಾರತದ ಟಾಪ್ 10 ಜನಪ್ರಿಯ ನಟರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ದಳಪತಿ ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ. ಅವರ ನಟನೆಯ ‘ಬೀಸ್ಟ್​’ ಅಂದುಕೊಂಡ ಮಟ್ಟಕ್ಕೆ ಸದ್ದು ಮಾಡಿಲ್ಲ. ಆದಾಗ್ಯೂ ಅವರ ಖ್ಯಾತಿ ಕಡಿಮೆ ಆಗಿಲ್ಲ. ‘ವಾರಿಸು’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಸತತ ಸೋಲು ಕಾಣುತ್ತಿರುವ ಪ್ರಭಾಸ್​ಗೆ ಎರಡನೇ ಸ್ಥಾನ ಸಿಕ್ಕಿದೆ. ಮೂರನೇ ಸ್ಥಾನದಲ್ಲಿ ಜ್ಯೂ.ಎನ್​ಟಿಆರ್ ಇದ್ದಾರೆ. ‘ಆರ್​ಆರ್​ಆರ್’ ಚಿತ್ರದ ಮೂಲಕ ಅವರು ದೊಡ್ಡ ಯಶಸ್ಸು ಕಂಡಿದ್ದಾರೆ. ‘ಪುಷ್ಪ’ ಚಿತ್ರದಿಂದ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ಅಲ್ಲು ಅರ್ಜುನ್​​ಗೆ ನಾಲ್ಕನೇ ಸ್ಥಾನ ಸಿಕ್ಕಿದೆ.

ಇದನ್ನೂ ಓದಿ
Image
ಬಾಲ್ಯ ಸ್ನೇಹಿತನ ಮದುವೆಗೆ ಪತ್ನಿ ಸಮೇತ ಬಂದು ಹರಸಿದ ಯಶ್​; ಸಲಾಂ ರಾಕಿ ಭಾಯ್​ ಎಂದ ಫ್ಯಾನ್ಸ್​
Image
ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ
Image
‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?
Image
‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

‘ಕೆಜಿಎಫ್ 2’ ಚಿತ್ರದ ಮೂಲಕ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಖ್ಯಾತಿ ಯಶ್​ಗೆ ಸಲ್ಲುತ್ತದೆ. ಅವರು ಈ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಕನ್ನಡ ಚಿತ್ರರಂಗದಿಂದ ಸ್ಥಾನ ಪಡೆದ ಏಕೈಕ ನಟ ಎಂಬ ಹೆಗ್ಗಳಿಕೆ ರಾಕಿಂಗ್ ಸ್ಟಾರ್​ಗೆ ಸಿಕ್ಕಿದೆ.

ರಾಮ್ ಚರಣ್​ (6), ಅಕ್ಷಯ್ ಕುಮಾರ್ (7), ಮಹೇಶ್ ಬಾಬು (8), ಸೂರ್ಯ (9), ಅಜಿತ್ ಕುಮಾರ್ (10) ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಾಲಿವುಡ್​ನಲ್ಲಿ ಯಾವ ಚಿತ್ರಗಳೂ ಹೇಳಿಕೊಳ್ಳುವಂತಹ ಬಿಸ್ನೆಸ್ ಮಾಡುತ್ತಿಲ್ಲ. ಹೀಗಾಗಿ, ಬಾಲಿವುಡ್​ನಿಂದ ಸ್ಥಾನ ಪಡೆದ ಏಕೈಕ ಹೀರೋ ಎಂಬ ಖ್ಯಾತಿ ಅಕ್ಷಯ್ ಕುಮಾರ್​ಗೆ ಸಲ್ಲುತ್ತದೆ.

ಇದನ್ನೂ ಓದಿ: Ramya: 18ನೇ ಪ್ರಾಯದಲ್ಲಿ ರಮ್ಯಾ ಹೇಗಿದ್ದರು ನೋಡಿ; ವೈರಲ್​ ಆಗಿದೆ ಹಳೇ ಐಡಿ ಕಾರ್ಡ್​​ ಫೋಟೋ

Ormax ಮೀಡಿಯಾ ಪ್ರತಿ ತಿಂಗಳು ಟಾಪ್​ 10 ನಟ-ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಪ್ರೇಕ್ಷಕರು ನೀಡುವ ರೇಟಿಂಗ್ ಆಧರಿಸಿ ಸ್ಥಾನಗಳು ನಿಗದಿ ಆಗುತ್ತವೆ.

ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ಧರಣಿ ಮರೆತು ಸಚಿವೆ ಜತೆ ಸೆಲ್ಫೀ ತೆಗೆದುಕೊಂಡ ಅಂಗನವಾಡಿ ಕಾರ್ಯಕರ್ತೆಯರು!
ಧರಣಿ ಮರೆತು ಸಚಿವೆ ಜತೆ ಸೆಲ್ಫೀ ತೆಗೆದುಕೊಂಡ ಅಂಗನವಾಡಿ ಕಾರ್ಯಕರ್ತೆಯರು!
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ