‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಹೊಸ ದಿನಾಂಕ ಲಾಕ್?

Thalapathy Vijay: ಸಂಕ್ರಾಂತಿಗೆ ಬಿಡುಗಡೆ ಆಗಬೇಕಿದ್ದ ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡದೇ ಇರುವ ಕಾರಣ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ‘ಜನ ನಾಯಗನ್​’ಗೆ ಪ್ರಮಾಣ ಪತ್ರ ನಿರಾಕರಿಸಿರುವ ಹಿಂದೆ ರಾಜಕೀಯ ಕೈವಾಡ ಇದೆ ಎಂಬುದು ಗುಟ್ಟೇನೂ ಅಲ್ಲ. ಆದರೆ ಇದೀಗ ಸಿನಿಮಾದ ಬಿಡುಗಡೆ ಕುರಿತಾಗಿ ಹೊಸದೊಂದು ಅಪ್​​ಡೇಟ್ ಹೊರಬಿದ್ದಿದೆ.

‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ಹೊಸ ದಿನಾಂಕ ಲಾಕ್?
ವಿಜಯ್

Updated on: Feb 22, 2026 | 10:01 PM

ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ (Thalapathy Vijay) ಸದ್ಯ ತಮ್ಮ ವೃತ್ತಿಜೀವನದ ಅತ್ಯಂತ ಮಹತ್ವದ ಘಟ್ಟದಲ್ಲಿದ್ದಾರೆ. ರಾಜಕೀಯಕ್ಕೆ ಧುಮುಕಿರುವ ಅವರು ಸಂಪೂರ್ಣವಾಗಿ ರಾಜಕೀಯದಲ್ಲಿ ಮುಳುಗುವ ಮುನ್ನ ಕೊನೆಯ ಸಿನಿಮಾನಲ್ಲಿ ನಟಿಸಿದ್ದರು ಅದುವೇ ‘ಜನ ನಾಯಗನ್’. ಸಂಕ್ರಾಂತಿಗೆ ಬಿಡುಗಡೆ ಆಗಬೇಕಿದ್ದ ಈ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡದೇ ಇರುವ ಕಾರಣ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ‘ಜನ ನಾಯಗನ್​’ಗೆ ಪ್ರಮಾಣ ಪತ್ರ ನಿರಾಕರಿಸಿರುವ ಹಿಂದೆ ರಾಜಕೀಯ ಕೈವಾಡ ಇದೆ ಎಂಬುದು ಗುಟ್ಟೇನೂ ಅಲ್ಲ. ಆದರೆ ಇದೀಗ ಸಿನಿಮಾದ ಬಿಡುಗಡೆ ಕುರಿತಾಗಿ ಹೊಸದೊಂದು ಅಪ್​​ಡೇಟ್ ಹೊರಬಿದ್ದಿದೆ.

ಪಿಂಕ್‌ವಿಲ್ಲಾ ವರದಿಯ ಪ್ರಕಾರ, ಜನವರಿಯಲ್ಲಿ ಬಿಡುಗಡೆ ಆಗಬೇಕಿದ್ದ ಈ ಸಿನಿಮಾವು ಆರು ತಿಂಗಳು ತಡವಾಗಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ವಿಜಯ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾವನ್ನು ತೆರೆಗೆ ತರಲು ಪ್ಲಾನ್ ಮಾಡುತ್ತಿದೆ. ಜೂನ್ 22 ರಂದು ವಿಜಯ್ ಅವರ ಜನ್ಮದಿನವಿದ್ದು, ಅದೇ ವಾರದಲ್ಲಿ ಅಂದರೆ ಜೂನ್ 2026 ರ ಸುಮಾರಿಗೆ ‘ಜನ ನಾಯಗನ್’ ವಿಶ್ವಾದ್ಯಂತ ಬಿಡುಗಡೆಯಾಗುವ ಸಾಧ್ಯತೆ ಇದೆಯಂತೆ.

ತಮಿಳುನಾಡು ಚುನಾವಣೆಗೆ ಮುಂಚೆ ಸಿನಿಮಾವನ್ನು ಬಿಡುಗಡೆ ಮಾಡದಂತೆ ತಡೆಯಲು ಹಲವು ಶಕ್ತಿಗಳು ಪ್ರಯತ್ನಿಸುತ್ತಿದ್ದು, ಸಿನಿಮಾದ ನಿರ್ಮಾಪಕರ ಮೇಲೆ ಸಹ ಈ ಬಗ್ಗೆ ಸಾಕಷ್ಟು ಒತ್ತಡ ಇದೆಯಂತೆ. ಇದೇ ಕಾರಣಕ್ಕೆ ನಿರ್ಮಾಪಕರು ಸಹ ಚುನಾವಣೆ ಮುಗಿದ ಬಳಿಕ ಜೂನ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಮಾನಸಿಕವಾಗಿ ಸಿದ್ಧವಾಗಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ದಳಪತಿ ವಿಜಯ್​​ಗೆ ಮತ್ತೊಂದು ಶಾಕ್; ಕಟ್ಟಬೇಕಿದೆ ಒಂದೂವರೆ ಕೊಟಿ ರೂ. ದಂಡ

ಎಚ್ ವಿನೋತ್ ನಿರ್ದೇಶನದ ‘ಜನ ನಾಯಗನ್’ ಸಿನಿಮಾ ಪಕ್ಕಾ ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಎನ್ನಲಾಗಿದೆ. ಈ ಸಿನಿಮಾ ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಆಗಿದ್ದರೂ ಸಹ ಕೆಲವು ಹೆಚ್ಚುವರಿ ಅಂಶಗಳನ್ನು ಸಿನಿಮಾಕ್ಕೆ ಸೇರಿಸಲಾಗಿದೆ. ವಿಜಯ್ ಈಗಾಗಲೇ ತಮ್ಮ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಮೂಲಕ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವುದರಿಂದ, ಈ ಸಿನಿಮಾದ ಕಥೆ ಮತ್ತು ಸಂಭಾಷಣೆಗಳು ಅವರ ರಾಜಕೀಯ ಹಾದಿಗೆ ಪೂರಕವಾಗಿವೆ, ತಮ್ಮ ರಾಜಕೀಯ ಪಕ್ಷದ ಅಜೆಂಡದ ಪ್ರಚಾರಕ್ಕೆ ಈ ಸಿನಿಮಾವನ್ನು ವಿಜಯ್ ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣಕ್ಕೆ ರಾಜಕೀಯ ಎದುರಾಳಿಗಳು, ‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗದಂತೆ ಪ್ರಭಾವ ಬಳಸಿ ತಡೆ ಹಿಡಿದಿದ್ದಾರೆ.

‘ಜನ ನಾಯಗನ್’ ನಟನಾಗಿ ವಿಜಯ್ ಅವರ 69ನೇ ಹಾಗೂ ಅಂತಿಮ ಚಿತ್ರ. ಈ ಸಿನಿಮಾನಲ್ಲಿ ಬಾಬಿ ಡಿಯೋಲ್ ವಿಲನ್. ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಜೊತೆಗೆ ಮಲಯಾಳಂ ನಟಿ ಮಮಿತಾ ಬಿಜು ಸಹ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅನಿರುದ್ಧ್ ರವಿಚಂದ್ರನ್. ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ ಪತ್ರ ನೀಡದೇ ಇರುವ ಬಗ್ಗೆ ನಿರ್ಮಾಪಕರು ಸಲ್ಲಿಸಿರುವ ಆಕ್ಷೇಪದ ವಿಚಾರಣೆ ಪ್ರಸ್ತುತ ಹೈಕೋರ್ಟ್​​ನಲ್ಲಿ ಚಾಲ್ತಿಯಲ್ಲಿದೆ. ಇದರ ನಡುವೆ ಸಿನಿಮಾವನ್ನು ಸಿಬಿಎಫ್​​ಸಿಯ ರಿವ್ಯೂ ಕಮಿಟಿಗೆ ಕಳಿಸಲಾಗಿದೆ. ಆದರೆ ರಿವ್ಯೂ ಕಮಿಟಿಯವರು ಇನ್ನೂ ಯಾವುದೇ ನಿರ್ಣಯ ಕೈಗೊಂಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ