ಅಜಯ್ ದೇವಗನ್-ಕಿಚ್ಚ ಸುದೀಪ್ ಬಾಕ್ಸ್ಆಫೀಸ್ ಕ್ಲ್ಯಾಶ್​ಗೆ ಬ್ರೇಕ್​; ರಿಲೀಸ್ ಡೇಟ್ ಮುಂದಕ್ಕೆ

ಅಜಯ್​ ದೇವಗನ್ ಸಿನಿಮಾ ಜುಲೈ 29ರಂದು ತೆರೆಗೆ ಬರುವುದರಲ್ಲಿತ್ತು. ಇದಕ್ಕೂ ಒಂದು ದಿನ ಮೊದಲು ಅಂದರೆ ಜುಲೈ 28ರಂದು ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗುತ್ತಿದೆ. ಎರಡೂ ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಊಹಿಸಿದ್ದರು.

ಅಜಯ್ ದೇವಗನ್-ಕಿಚ್ಚ ಸುದೀಪ್ ಬಾಕ್ಸ್ಆಫೀಸ್ ಕ್ಲ್ಯಾಶ್​ಗೆ ಬ್ರೇಕ್​; ರಿಲೀಸ್ ಡೇಟ್ ಮುಂದಕ್ಕೆ
ಅಜಯ್-ಸುದೀಪ್
Updated By: ರಾಜೇಶ್ ದುಗ್ಗುಮನೆ

Updated on: May 27, 2022 | 3:03 PM

ಕಿಚ್ಚ ಸುದೀಪ್ (Kichcha Sudeep) ಹಾಗೂ ಅಜಯ್ ದೇವಗನ್ ನಡುವೆ ಇತ್ತೀಚೆಗೆ ಟ್ವೀಟ್ ಸಮರ ನಡೆದಿತ್ತು. ಕಿಚ್ಚ ಸುದೀಪ್ ಅವರು ಹಿಂದಿ ಭಾಷೆ ವಿಚಾರದಲ್ಲಿ ಹೇಳಿದ ಮಾತಿಗೆ ಟ್ವೀಟ್ ಮಾಡಿದ್ದ ಅಜಯ್ ದೇವಗನ್ (Ajay Devgn) ಮನಸ್ಸಿಗೆ ಬಂದಂತೆ ಮಾತನಾಡಿ ಪೇಚಿಗೆ ಸಿಲುಕಿದ್ದರು. ನಂತರ ಸುದೀಪ್ ಕೊಟ್ಟ ಉತ್ತರ ನೋಡಿ ಅಜಯ್ ದೇವಗನ್ ಅವರು ಕ್ಷಮೆ ಕೇಳಿದ್ದರು. ಆ ಬಳಿಕ ಸಮರ ತಣ್ಣಗಾಗಿತ್ತು. ಈ ಬೆನ್ನಲ್ಲೇ ಅಜಯ್ ದೇವಗನ್ ಹಾಗೂ ಕಿಚ್ಚ ಸುದೀಪ್ ಸಿನಿಮಾ ಒಟ್ಟಿಗೆ ತೆರೆಗೆ ಬರುತ್ತಿವೆ ಎನ್ನುವ ವಿಚಾರ ಗೊತ್ತಾಗಿತ್ತು. ಆದರೆ, ಈಗ ಅಜಯ್ ದೇವಗನ್ ಸಿನಿಮಾ ತಂಡ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿದೆ.

‘ಟೋಟಲ್​ ಧಮಾಲ್’ ಸಿನಿಮಾ 2019ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರವನ್ನು ನಿರ್ದೇಶಿಸಿದ್ದು ಇಂದ್ರ ಕುಮಾರ್. ಈ ಚಿತ್ರದಲ್ಲಿ ಅಜಯ್ ದೇವಗನ್ ಕೂಡ ಕಾಣಿಸಿಕೊಂಡಿದ್ದರು. ಈಗ ಇಬ್ಬರೂ ‘ಥ್ಯಾಂಕ್ ಗಾಡ್’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಸಿನಿಮಾ ಜುಲೈ 29ರಂದು ತೆರೆಗೆ ಬರುವುದರಲ್ಲಿತ್ತು. ಇದಕ್ಕೂ ಒಂದು ದಿನ ಮೊದಲು ಅಂದರೆ ಜುಲೈ 28ರಂದು ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗುತ್ತಿದೆ. ಎರಡೂ ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಊಹಿಸಿದ್ದರು. ಆದರೆ, ‘ಥ್ಯಾಂಕ್ ಗಾಡ್’ ಸಿನಿಮಾ ರಿಲೀಸ್ ದಿನಾಂಕ ಮುಂದೂಡಿಕೊಂಡಿದೆ.

ಭೂಷಣ್ ಕುಮಾರ್ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಆದರೆ, ಈ ಚಿತ್ರಕ್ಕೆ ವಿಎಫ್​ಎಕ್ಸ್ ಕೆಲಸಗಳು ಹೆಚ್ಚಿವೆ. ಹೀಗಾಗಿ ಚಿತ್ರದ ಕೆಲಸಗಳು ವಿಳಂಬವಾಗಲಿದೆ. ಇದರಿಂದ ಸಹಜವಾಗಿಯೇ ರಿಲೀಸ್ ದಿನಾಂಕ ಮುಂದೂಡಲ್ಪಡುತ್ತಿದೆ ಎಂದು ಭೂಷಣ್ ಕುಮಾರ್ ಅವರೇ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ
KGF Chapter 2: 6 ವಾರಗಳಲ್ಲಿ ‘ಕೆಜಿಎಫ್ ಚಾಪ್ಟರ್ 2’ ಗಳಿಸಿದ್ದೆಷ್ಟು? ಇದು ಬೆರಗಾಗಿಸೋ ನಂಬರ್!
ವಿಷ್ಣುವರ್ಧನ್ ಸ್ಮಾರಕದ ಕೆಲಸ ಪೂರ್ಣಗೊಳ್ಳೋದು ಯಾವಾಗ? ಮಾಹಿತಿ ನೀಡಿದ ಅನಿರುದ್ಧ್​
ಮೂವರು ಪುರುಷರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ; ಆಸ್ಕರ್ ವಿಜೇತ ನಟನಿಗೆ ಹೆಚ್ಚಾಯ್ತು ಸಂಕಷ್ಟ
Vikrant Rona: ‘ಊರಲ್ಲೆಲ್ಲಾ ಒಬ್ಬನ ಹೆಸರೇ ಚಾಲ್ತಿಯಲ್ಲಿರೋದು..’; ಭರ್ಜರಿಯಾಗಿ ‘ವಿಕ್ರಾಂತ್ ರೋಣ’ ಡೈಲಾಗ್ ಹೊಡೆದ ಜಾಕ್ವೆಲಿನ್​

ಇದನ್ನೂ ಓದಿ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬಗ್ಗೆ ಕಿಚ್ಚ ಸುದೀಪ್ ಮೆಚ್ಚುಗೆಯ ಮಾತು

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಚರ್ಚೆ ಆಗುತ್ತಿದೆ. ‘ಕೆಜಿಎಫ್ 2’ ಎದುರು ಬಂದ ಸಿನಿಮಾಗಳು ಸೋತಿವೆ. ‘ಜೆರ್ಸಿ’ ಸಿನಿಮಾ ಒಂದು ವಾರ ತಡವಾಗಿ ರಿಲೀಸ್ ಆದರೂ ‘ಕೆಜಿಎಫ್​ 2’ ಅಬ್ಬರಕ್ಕೆ ಎದುರು ನಿಲ್ಲಲು ಸಾಧ್ಯವಾಗಿಲ್ಲ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ‘ವಿಕ್ರಾಂತ್​ ರೋಣ’ ಚಿತ್ರದ ಎದುರು ಸ್ಪರ್ಧಿಸಲು ಹೆದರಿ ‘ಥ್ಯಾಂಕ್ ಗಾಡ್​’ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಿಕೊಂಡಿದೆ ಎಂಬ ಮಾತು ಕೇಳಿ ಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.