Upasana: ಪತ್ನಿ ಪ್ರೆಗ್ನೆಂಟ್​ ಅಂತ ಹೇಳಿದಾಗ ರಾಮ್​ ಚರಣ್ ಅತಿಯಾಗಿ ಖುಷಿಪಡಲಿಲ್ಲ​; ಕಾರಣ ತಿಳಿಸಿದ ಉಪಾಸನಾ

Ram Charan: ‘ಆಮೇಲೆ ಹಲವು ಬಾರಿ ಪರೀಕ್ಷೆ ಮಾಡಿಸಿದೆವು’ ಎಂದು ಉಪಾಸನಾ ಕೊನಿಡೆಲಾ ಹೇಳಿದ್ದಾರೆ. ರಾಮ್​ ಚರಣ್​ ಅವರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ಉಪಾಸನಾ ವಿವರಿಸಿದ್ದಾರೆ.

Upasana: ಪತ್ನಿ ಪ್ರೆಗ್ನೆಂಟ್​ ಅಂತ ಹೇಳಿದಾಗ ರಾಮ್​ ಚರಣ್ ಅತಿಯಾಗಿ ಖುಷಿಪಡಲಿಲ್ಲ​; ಕಾರಣ ತಿಳಿಸಿದ ಉಪಾಸನಾ
ರಾಮ್​ ಚರಣ್​, ಉಪಾಸನಾ
Follow us
ಮದನ್​ ಕುಮಾರ್​
|

Updated on: Jun 15, 2023 | 11:09 AM

ಟಾಲಿವುಡ್​ ಸ್ಟಾರ್​ ನಟ ರಾಮ್​ ಚರಣ್​ (Ram Charan) ಹಾಗೂ ಅವರ ಪತ್ನಿ ಉಪಾಸನಾ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಶೀಘ್ರದಲ್ಲೇ ಉಪಾಸನಾ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಕುರಿತು ಅವರು ‘ಇ ಟೈಮ್ಸ್​’ ಜೊತೆ ಮಾತನಾಡಿದ್ದು ಕೆಲವು ಇಂಟರೆಸ್ಟಿಂಗ್​ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಉಪಾಸನಾ ಅವರು ತಾವು ಪ್ರೆಗ್ನೆಂಟ್​ (Upasana pregnant) ಎಂಬ ವಿಚಾರವನ್ನು ಮೊದಲ ಬಾರಿಗೆ ತಿಳಿಸಿದಾಗ ರಾಮ್​ ಚರಣ್​ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ. ಅಚ್ಚರಿ ಏನೆಂದರೆ ರಾಮ್​​ ಚರಣ್​ ಅವರು ಮೊದಲಿಗೆ ಅತಿಯಾಗಿ ಖುಷಿಪಡಲಿಲ್ಲ. ಆ ಕುರಿತು ಉಪಾಸನಾ (Upasana) ಮಾತನಾಡಿದ್ದಾರೆ.

‘ನಾನು ರಾಮ್​ ಚರಣ್​ ಅವರಿಗೆ ಮೊದಲ ಬಾರಿ ಈ ವಿಷಯ ತಿಳಿಸಿದಾಗ ಅತಿಯಾಗಿ ಖುಷಿಪಡಬೇಡ, ಸಮಾಧಾನದಿಂದ ಇರು ಅಂತ ಅವರು ನನಗೆ ಹೇಳಿದರು. ಆಮೇಲೆ ಹಲವು ಬಾರಿ ಪರೀಕ್ಷೆ ಮಾಡಿಸಿದೆವು. ಎಲ್ಲ ಪರೀಕ್ಷೆ ಸರಿಯಾಗಿದೆ ಎಂದು ತಿಳಿದ ನಂತರವಷ್ಟೇ ಅವರು ಸೆಲೆಬ್ರೇಟ್​ ಮಾಡಿದರು. ರಾಮ್​ ಚರಣ್ ಅವರ ಈ ಗುಣ ನನಗೆ ಬಹಳ ಇಷ್ಟ. ನಾನು ಬಹಳ ಎಗ್ಸೈಟಿಂಗ್ ಆದಂತಹ ವ್ಯಕ್ತಿ. ನನ್ನನ್ನು ಸಮಾಧಾನ ಪಡಿಸುವುದು ಅವರೇ. ಭಾವನೆಗಳನ್ನು ಅಭಿವ್ಯಕ್ತಿಸುವುದು ನನಗೆ ಇಷ್ಟ. ಆದರೆ ಅವರು ತಮ್ಮದೇ ಶೈಲಿಯಲ್ಲಿ ಸಮಾಧಾನದಿಂದ ಭಾವನೆಗಳನ್ನು ಹೊರಹಾಕುತ್ತಾರೆ’ ಎಂದು ಉಪಾಸನಾ ಹೇಳಿದ್ದಾರೆ.

ಇದನ್ನೂ ಓದಿ: Upasana Konidela: ರಾಮ್​ ಚರಣ್​ ಪತ್ನಿ ಉಪಾಸನಾ ಅದ್ದೂರಿ ಸೀಮಂತ ಸಂಭ್ರಮ; ಅಲ್ಲು ಅರ್ಜುನ್, ಸಾನಿಯಾ ಮಿರ್ಜಾ ಭಾಗಿ

ರಾಮ್​ ಚರಣ್ ಮತ್ತು ಉಪಾಸನಾ ಕೊನಿಡೆಲಾ ಅವರು ದಾಂಪತ್ಯ ಜೀವನದಲ್ಲಿ 11 ವರ್ಷಗಳನ್ನು ಪೂರೈಸಿದ್ದಾರೆ. ಬುಧವಾರ (ಜೂನ್​ 14) ಹನ್ನೊಂದನೇ ವಿವಾಹ ವಾರ್ಷಿಕೋತ್ಸವವನ್ನು ಅವರು ಆಚರಿಸಿಕೊಂಡಿದ್ದಾರೆ. ಈ ಶುಭ ಸಂದರ್ಭದಲ್ಲಿ ಅವರಿಗೆ ಅಭಿಮಾನಿಗಳಿಂದ, ಆಪ್ತರಿಂದ, ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ರಾಮ್​ ಚರಣ್​ ಅವರ ತಂದೆ ‘ಮೆಗಾ ಸ್ಟಾರ್​’ ಚಿರಂಜೀವಿ ಕೂಡ ವಿಶೇಷವಾಗಿ ವಿಶ್​ ಮಾಡಿದ್ದಾರೆ. ಮಗ ಮತ್ತು ಸೊಸೆ ಬಗ್ಗೆ ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ಪತ್ನಿ ಉಪಾಸನಾ ಸೀಮಂತಕ್ಕೆ ಧರಿಸಿದ್ದ ಬಟ್ಟೆಯ ಬೆಲೆ ಅಬ್ಬಬ್ಬಾ!

ರಾಮ್​ ಚರಣ್​ ಮತ್ತು ಉಪಾಸನಾ ಅವರಿಗೆ ವಿವಾಹ ವಾರ್ಷಿಕೋತ್ಸವದ ಅಭಿನಂದನೆ ತಿಳಿಸಲು ಚಿರಂಜೀವಿ ಅವರು ವಿಶೇಷವಾದ ಒಂದು ಫೋಟೋ ಹಂಚಿಕೊಂಡಿದ್ದಾರೆ. ‘ಹಾಯ್​ ಚರಣ್​ ಮತ್ತು ಉಪಾಸನಾ. ಈ ವಿಶೇಷ ದಿನದಂದು ನಿಮಗೆ ನಾನು ಶುಭಕೋರುತ್ತೇನೆ. ಅಳೆಯಲು ಸಾಧ್ಯವಾಗದಷ್ಟು ಹೆಮ್ಮೆ ಮತ್ತು ಖುಷಿಯನ್ನು ನೀವಿಬ್ಬರು ನಮಗೆ ನೀಡಿದ್ದೀರಿ. ತಂದೆ-ತಾಯಿ ಆಗುತ್ತಿರುವ ನಿಮಗೆ ನಾವು ಆಲ್ ದಿ ಬೆಸ್ಟ್​ ತಿಳಿಸುತ್ತೇವೆ’ ಎಂದು ಚಿರಂಜೀವಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ವಿದೇಶಿ ಯೂಟ್ಯೂಬ್ ಚಾನೆಲ್​ನಲ್ಲಿ ದಾಖಲೆ ಬರೆದ ರಾಮ್ ಚರಣ್ ಹಾಗೂ ಉಪಾಸನಾ ವಿಡಿಯೋ

ವೆಡ್ಡಿಂಗ್​ ಆ್ಯನಿವರ್ಸರಿ ಸಲುವಾಗಿ ರಾಮ್​ ಚರಣ್​ ಮತ್ತು ಉಪಾಸನಾ ಕೊನಿಡೆಲಾ ಅವರು ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಈ ದಂಪತಿ ನೂರಾರು ವರ್ಷ ಸುಖವಾಗಿ ಬಾಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾದ ಬಳಿಕ ರಾಮ್​ ಚರಣ್​ ಅವರ ಖ್ಯಾತಿ ಹೆಚ್ಚಿದೆ. ಈಗ ಅವರು ‘ಗೇಮ್​ ಚೇಂಜರ್​’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್