Pooja Hegde: ಸರಿಯಾದ ಅವಕಾಶ ಇಲ್ಲದೇ ಐಟಂ ಡ್ಯಾನ್ಸ್​ ಮಾಡಲು ಮುಂದಾದ್ರಾ ನಟಿ ಪೂಜಾ ಹೆಗ್ಡೆ?

ಪೂಜಾ ಹೆಗ್ಡೆ ಅವರ ಕೈಯಲ್ಲಿ ಒಂದಷ್ಟು ಅವಕಾಶಗಳ ಇವೆ. ಆದರೆ ದಿನದಿಂದ ದಿನಕ್ಕೆ ಅವರಿಗೆ ಇರುವ ಡಿಮ್ಯಾಂಡ್​ ಕಡಿಮೆ ಆಗುತ್ತಿದೆ.

Pooja Hegde: ಸರಿಯಾದ ಅವಕಾಶ ಇಲ್ಲದೇ ಐಟಂ ಡ್ಯಾನ್ಸ್​ ಮಾಡಲು ಮುಂದಾದ್ರಾ ನಟಿ ಪೂಜಾ ಹೆಗ್ಡೆ?
ಪೂಜಾ ಹೆಗ್ಡೆ

Updated on: May 16, 2023 | 6:45 AM

ಮುಖ್ಯಾಂಶಗಳು

  • ಈಗ ಪೂಜಾ ಹೆಗ್ಡೆ ಅವರ ಕೈಯಲ್ಲಿ ಅವಕಾಶಗಳ ಇವೆ. ಆದರೆ ದಿನದಿಂದ ದಿನಕ್ಕೆ ಅವರಿಗೆ ಇರುವ ಡಿಮ್ಯಾಂಡ್​ ಕಡಿಮೆ ಆಗುತ್ತಿದೆ.
  • ಐಟಂ ಡ್ಯಾನ್ಸ್​ ಮಾಡಿದರೆ ಸಮಂತಾ ರೀತಿ ಸಕ್ಸಸ್​ ಪಡೆಯಬಹುದು ಎಂದು ಆಲೋಚನೆ ಪೂಜಾಗೆ ಬಂದಿದೆ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
  • ಪ್ರಭಾಸ್​, ಅಲ್ಲು ಅರ್ಜುನ್​ ಮುಂತಾದ ಸ್ಟಾರ್​ ಕಲಾವಿದರ ಜೊತೆ ನಟಿಸಿದ ಖ್ಯಾತಿ ಪೂಜಾ ಹಗ್ಡೆ ಅವರಿಗೆ ಸಲ್ಲುತ್ತಿದೆ.

ನಟಿ ಪೂಜಾ ಹೆಗ್ಡೆ (Pooja Hegde) ಅವರಿಗೆ ನಿರೀಕ್ಷಿತ ಗೆಲುವು ಸಿಗುತ್ತಿಲ್ಲ. ಇತ್ತೀಚೆಗೆ ಅವರು ಮಾಡಿದ ಸಿನಿಮಾಗಳೆಲ್ಲವೂ ಸೋಲುತ್ತಿವೆ. ಹಾಗಾಗಿ ಅವರು ಐಟಂ ಡ್ಯಾನ್ಸ್​ ಮಾಡಲು ಸಜ್ಜಾಗಿದ್ದಾರೆ ಎಂದು ಟಾಲಿವುಡ್​ (Tollywood) ಅಂಗಳಲ್ಲಿ ಗುಸುಗುಸು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಪೂಜಾ ಹೆಗ್ಡೆ ಅವರು ಎಲ್ಲಿಯೂ ಮಾತನಾಡಿಲ್ಲ. ಪೂಜಾ ಹೆಗ್ಡೆ ಅವರಿಗೆ ಸೋಲು ಹೊಸದೇನೂ ಅಲ್ಲ. ಈಗಾಗಲೇ ಅವರು ಅನೇಕ ಚಿತ್ರಗಳಲ್ಲಿ ಸೋಲು ಕಂಡಿದ್ದಾರೆ. ಬಾಲಿವುಡ್​ ಮತ್ತು ಟಾಲಿವುಡ್​ನಲ್ಲಿ ಸಕ್ರಿಯವಾಗಿರುವ ಪೂಜಾ ಹೆಗ್ಡೆ ಅವರು ಅನೇಕ ಸ್ಟಾರ್​ ಹೀರೋಗಳ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಆದರೆ ಈಗ ಸರಿಯಾಗಿ ಅವರಿಗೆ ಸಕ್ಸಸ್​ ಸಿಗುತ್ತಿಲ್ಲ. ಅದಕ್ಕಾಗಿ ಐಟಂ ಡ್ಯಾನ್ಸ್​ (Item Dance) ಮಾಡುವ ಮೂಲಕ ಜನರಿಗೆ ಹತ್ತಿರವಾಗಲು ಅವರು ತೀರ್ಮಾನಿಸಿದ್ದಾರೆ ಎಂದು ಗಾಸಿಪ್​ ಹಬ್ಬಿದೆ.

ಸಲ್ಮಾನ್​ ಖಾನ್​, ಹೃತಿಕ್​ ರೋಷನ್​, ಪ್ರಭಾಸ್​, ಅಲ್ಲು ಅರ್ಜುನ್​ ಮುಂತಾದ ಸ್ಟಾರ್​ ಕಲಾವಿದರ ಜೊತೆ ನಟಿಸಿದ ಖ್ಯಾತಿ ಪೂಜಾ ಹಗ್ಡೆ ಅವರಿಗೆ ಸಲ್ಲುತ್ತಿದೆ. ಆದರೆ ಇತ್ತೀಚೆಗೆ ಅವರಿಗೆ ಅದೃಷ್ಟ ಕೈ ಕೊಟ್ಟಿದೆ ಎನ್ನಬಹುದು. ‘ರಾಧ್ಯೆ ಶ್ಯಾಮ್​’ ಸಿನಿಮಾ ಸೋತಿತು. ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಚಿತ್ರ ಕೂಡ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ.

ಇದನ್ನೂ ಓದಿ: Shriya Saran: ಐಟಂ ಡ್ಯಾನ್ಸ್​ ಮಾಡಲು 1 ಕೋಟಿ ರೂ. ಸಂಭಾವನೆ ಕೇಳಿದ ‘ಕಬ್ಜ’ ಬೆಡಗಿ ಶ್ರೀಯಾ ಶರಣ್​?

ಇದನ್ನೂ ಓದಿ
Pooja Hegde: ನ್ಯೂಯಾರ್ಕ್​​ನಲ್ಲಿ ಪೂಜಾ ಹೆಗ್ಡೆ ಮಸ್ತಿ; ಇಲ್ಲಿವೆ ಫೋಟೋಗಳು
Pooja Hegde: ಇಂಡಿಗೋ ವಿಮಾನದಲ್ಲಿ ಪೂಜಾ ಹೆಗ್ಡೆಗೆ ಕೆಟ್ಟ ಅನುಭವ; ಕ್ಷಮೆ ಕೇಳಿದ ಸಂಸ್ಥೆ
JGM Movie: ‘ಜೆಜಿಎಮ್​’ ಚಿತ್ರೀಕರಣ ಆರಂಭ; ವಿಜಯ್ ದೇವರಕೊಂಡ ಜತೆ ತೆರೆ ಹಂಚಿಕೊಳ್ಳಲಿರುವ ಪೂಜಾ ಹೆಗ್ಡೆ
ವಿದೇಶಕ್ಕೆ ಹೋಗಿ ಎಲ್ಲ ಬಟ್ಟೆ ಕಳೆದುಕೊಂಡ ಪೂಜಾ ಹೆಗ್ಡೆ; ಕೊನೇ ಕ್ಷಣದಲ್ಲಿ ನಟಿ ಮಾಡಿದ್ದೇನು?

ಈಗ ಪೂಜಾ ಹೆಗ್ಡೆ ಅವರ ಕೈಯಲ್ಲಿ ಅವಕಾಶಗಳ ಇವೆ. ಆದರೆ ದಿನದಿಂದ ದಿನಕ್ಕೆ ಅವರಿಗೆ ಇರುವ ಡಿಮ್ಯಾಂಡ್​ ಕಡಿಮೆ ಆಗುತ್ತಿದೆ. ಐಟಂ ಡ್ಯಾನ್ಸ್​ ಮಾಡಿದರೆ ಸಮಂತಾ ರುತ್​ ಪ್ರಭು ರೀತಿ ಸಕ್ಸಸ್​ ಪಡೆಯಬಹುದು ಎಂದು ಆಲೋಚನೆ ಅವರಿಗೆ ಬಂದಿದೆ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Kamaal R Khan: ‘ವಿರಾಟ್​ ಕೊಹ್ಲಿಗೆ ಐಟಂ ಡ್ಯಾನ್ಸ್​ ಮಾಡುವ ಚಾನ್ಸ್​ ಕೊಡ್ತೀನಿ’ ಎಂದ ‘ದೇಶದ್ರೋಹಿ’ ನಟ

ಐಟಂ ಡ್ಯಾನ್ಸ್​ ವಿಚಾರದಲ್ಲಿ ನಟಿಯರ ಅಭಿಪ್ರಾಯ ಬೇರೆ ಬೇರೆ ರೀತಿ ಇದೆ. ಒಂದು ಕಾಲದಲ್ಲಿ ಐಟಂ ಡ್ಯಾನ್ಸ್​ ಮಾಡಲು ಪ್ರತ್ಯೇಕ ನಟಿಯರು ಇರುತ್ತಿದ್ದರು. ನಂತರ ಕಾಲ ಬದಲಾಯಿತು. ಹೀರೋಯಿನ್​ಗಳೇ ಸ್ಪೆಷಲ್​ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡಲು ಆರಂಭಿಸಿದರು. ಕರೀನಾ ಕಪೂರ್​, ಕತ್ರಿನಾ ಕೈಫ್​, ದೀಪಿಕಾ ಪಡುಕೋಣೆ ಮುಂತಾದವರು ಇಂಥ ಹಾಡುಗಳಲ್ಲಿ ಕಾಣಿಸಿಕೊಂಡು ಫೇಮಸ್​ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us