Shriya Saran: ಐಟಂ ಡ್ಯಾನ್ಸ್ ಮಾಡಲು 1 ಕೋಟಿ ರೂ. ಸಂಭಾವನೆ ಕೇಳಿದ ‘ಕಬ್ಜ’ ಬೆಡಗಿ ಶ್ರೀಯಾ ಶರಣ್?
ಸ್ಟಾರ್ ನಟಿಯರೇ ಐಟಂ ಡ್ಯಾನ್ಸ್ ಮಾಡುವ ಟ್ರೆಂಡ್ ಚಾಲ್ತಿಯಲ್ಲಿದೆ. ಹಾಗಾಗಿ ಶ್ರೀಯಾ ಶರಣ್ ಅವರಿಗೂ ಆಫರ್ ನೀಡಲಾಗಿದೆ ಎನ್ನಲಾಗುತ್ತಿದೆ.
Updated on: Apr 21, 2023 | 7:15 AM

ನಟಿ ಶ್ರೀಯಾ ಶರಣ್ ಅವರು ಸಿನಿಮಾಗಳ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಇತ್ತೀಚೆಗೆ ಅವರು ‘ಕಬ್ಜ’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದರು. ಅವರ ಬಗ್ಗೆ ಅನೇಕ ಗಾಸಿಪ್ಗಳು ಕೇಳಿಬರುತ್ತಿವೆ.

‘ಮೆಗಾ ಸ್ಟಾರ್’ ಚಿರಂಜೀವಿ ನಟನೆಯ ‘ಭೋಲಾ ಶಂಕರ್’ ಸಿನಿಮಾದಲ್ಲಿನ ಒಂದು ಐಟಂ ಸಾಂಗ್ನಲ್ಲಿ ಡ್ಯಾನ್ಸ್ ಮಾಡಲು ಶ್ರೀಯಾ ಶರಣ್ಗೆ ಆಫರ್ ಮಾಡಲಾಗಿದೆ ಎಂಬ ಗುಸುಗುಸು ಹಬ್ಬಿದೆ.

ಈ ಹಾಡಿನಲ್ಲಿ ಡ್ಯಾನ್ಸ್ ಮಾಡಲು ಶ್ರೀಯಾ ಶರಣ್ ಅವರು ಬರೋಬ್ಬರಿ 1 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ ಎಂದು ಗಾಸಿಪ್ ಹರಡಿದೆ. ಆದರೆ ಆ ವಿಚಾರದ ಬಗ್ಗೆ ಅವರು ಯಾವುದೇ ಹೇಳಿಕೆ ನೀಡಿಲ್ಲ.

ಸ್ಟಾರ್ ನಟಿಯರೇ ಐಟಂ ಸಾಂಗ್ ಮಾಡಿ ಫೇಮಸ್ ಆಗಿರುವ ಉದಾಹರಣೆ ಸಾಕಷ್ಟಿದೆ. ಸಮಂತಾ ಅವರು ‘ಪುಷ್ಪ’ ಸಿನಿಮಾ ಹಾಡಿನಲ್ಲಿ ಕುಣಿದು ಜನಪ್ರಿಯತೆ ಹೆಚ್ಚಿಸಿಕೊಂಡರು. ಈಗ ಶ್ರೀಯಾ ಶರಣ್ಗೂ ಐಟಂ ಸಾಂಗ್ನ ಆಫರ್ ಹೋಗಿದೆ ಎನ್ನಲಾಗಿದೆ.

‘ಕಬ್ಜ’ ಸಿನಿಮಾದಲ್ಲಿ ಶ್ರೀಯಾ ಶರಣ್ ಅವರು ಉಪೇಂದ್ರಗೆ ಜೋಡಿಯಾಗಿ ನಟಿಸಿದರು. ಅವರು ಹೆಜ್ಜೆ ಹಾಕಿದ ‘ನಮಾಮಿ..’ ಹಾಡು ಜನಮೆಚ್ಚುಗೆ ಪಡೆದುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಸಖತ್ ಆ್ಯಕ್ಟೀವ್ ಆಗಿದ್ದಾರೆ.

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್ ಇಂಟರ್ನೆಟ್) ಸಂಸ್ಥೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ.
Read More




