ಪವನ್ ಎಚ್ಚರಿಕೆ ಬಳಿಕ ಸಿಎಂ ಭೇಟಿಗೆ ಮುಂದಾದ ಟಾಲಿವುಡ್, ಆದರೆ….
Tollywood News: ಜಗನ್ ಸರ್ಕಾರ ಇದ್ದಾಗ ತೆಲುಗು ಚಿತ್ರರಂಗದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿತು. ಜಗನ್ ಸರ್ಕಾರವನ್ನು ಟಾಲಿವುಡ್ ಬಹಿರಂಗವಾಗಿ ವಿರೋಧಿಸಿತು. ಇದೀಗ ಚಂದ್ರಬಾಬು ನಾಯ್ಡು ಸರ್ಕಾರ ಬಂದಿದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಇತ್ತೀಚೆಗೆ ಸರ್ಕಾರ ಮತ್ತು ಚಿತ್ರರಂಗದ ನಡುವೆ ಮುನಿಸು ಮೂಡಿದಂತಿದೆ. ಇದರ ಬೆನ್ನಲ್ಲೆ ಟಾಲಿವುಡ್ ಪ್ರಮುಖರು ಚಂದ್ರಬಾಬು ನಾಯ್ಡು ಅವರೊಟ್ಟಿಗೆ ಸಭೆಗೆ ಮುಂದಾಗಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಜಗನ್ (Jagan) ಸಿಎಂ ಆಗಿದ್ದಾಗ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿತು. ಟಿಕೆಟ್ ದರಗಳನ್ನು ಧಾರುಣವಾಗಿ ಕಡಿಮೆ ಮಾಡಲಾಯ್ತು, ಚಿತ್ರಮಂದಿರಗಳನ್ನು ಮುಚ್ಚಿಸಲಾಯ್ತು, ತೆರಿಗೆಗಳನ್ನು ಹೆಚ್ಚಿಸಲಾಗಿತ್ತು. ತೆಲುಗು ಚಿತ್ರರಂಗ ಬಹಿರಂಗವಾಗಿ ಜಗನ್ ವಿರುದ್ಧ ಕಿಡಿ ಕಾರಿತ್ತು. ಇದೀಗ ಜಗನ್ ಸರ್ಕಾರ ತೊಲಗಿ ಚಂದ್ರಬಾಬು ನಾಯ್ಡು ಸರ್ಕಾರ ಬಂದಿದೆ. ಸ್ಟಾರ್ ನಟರಾಗಿರುವ ಪವನ್, ಆಂಧ್ರ ಡಿಸಿಎಂ ಆಗಿದ್ದಾರೆ. ಆದರೆ ಈಗ ತೆಲುಗು ಚಿತ್ರರಂಗಕ್ಕೆ ಹೊಸ ಸಮಸ್ಯೆ ಶುರುವಾಗಿದೆ.
ಚಿತ್ರರಂಗಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಚುನಾವಣೆ ಸಮಯದಲ್ಲಿ ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಹೇಳಿದ್ದರು. ಆದರೆ ಇತ್ತೀಚೆಗೆ ಬಹಿರಂಗ ಪತ್ರ ಬರೆದಿದ್ದ ಪವನ್ ಕಲ್ಯಾಣ್, ಟಾಲಿವುಡ್ ಮೇಲೆ ತಮ್ಮ ಅಸಹನೆ ಹೊರಹಾಕಿದ್ದರು. ಸರ್ಕಾರ ಬಂದು ವರ್ಷವಾದರೂ ಸಹ ಟಾಲಿವುಡ್ನಿಂದ ಯಾರೊಬ್ಬರೂ ಸಹ ಚಂದ್ರಬಾಬು ನಾಯ್ಡು ಅವರನ್ನು ಅಭಿನಂದಿಸಿಲ್ಲ’ ಎಂದಿದ್ದರು. ಮಾತ್ರವಲ್ಲದೆ ಇನ್ನುಮುಂದೆ ಎಚ್ಚರಿಕೆಯಿಂದ ಟಾಲಿವುಡ್ನವರು ‘ನಿಯಮ’ಗಳನ್ನು ಪಾಲಿಸಬೇಕು ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದರು.
ಪವನ್ ಕಲ್ಯಾಣ್ರ ಬಹಿರಂಗ ಪತ್ರ ಭಾರಿ ಹಲ್ಚಲ್ ಎಬ್ಬಿಸಿತ್ತು. ಪವನ್ ಪತ್ರದ ಬೆನ್ನಲ್ಲೆ, ಟಾಲಿವುಡ್ನ ಕೆಲ ಹಿರಿಯ ನಟರು, ನಿರ್ಮಾಪಕರು ಎಲ್ಲ ಸೇರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸುವ ನಿರ್ಧಾರ ಮಾಡಿದ್ದರು. ಜೂನ್ 22 ರಂದು ಸಭೆ ನಿರ್ಧಾರವಾಗಿತ್ತು. ಆದರೆ ಇದೀಗ ಅಚಾನಕ್ಕಾಗಿ ಸಭೆಯನ್ನು ನಿಗದಿತ ದಿನಾಂಕಕ್ಕಿಂತಲೂ ಬೇಗನೆ ಮಾಡಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪವನ್ ಕಲ್ಯಾಣ್.
ಇದನ್ನೂ ಓದಿ:ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಮತ್ತೆ ಮುಂದೂಡಿಕೆ
ಪವನ್ ಕಲ್ಯಾಣ್ ವೈಯಕ್ತಿಕ ಕಾರಣಗಳಿಂದಾಗಿ ವಿದೇಶಕ್ಕೆ ತೆರಳುತ್ತಿರುವ ಕಾರಣಕ್ಕೆ ತೆಲುಗು ಚಿತ್ರರಂಗ, ಚಂದ್ರಬಾಬು ನಾಯ್ಡು ಜೊತೆಗೆ ಜೂನ್ 22 ರಂದು ಮಾಡಬೇಕಾಗಿದ್ದ ಸಭೆಯನ್ನು 15ರಂದೇ ಮಾಡಲು ನಿರ್ಧಾರ ಮಾಡಲಾಗಿದೆ. ನಾಳೆ ನಡೆಯಲಿರುವ ಸಭೆಯಲ್ಲಿ ಯಾರು ಯಾರು ಭಾಗಿ ಆಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಪವನ್ ಕಲ್ಯಾಣ್ ವಿರೋಧಿ ಬಣ ಎಂದು ತೆಲುಗು ಚಿತ್ರರಂಗದಲ್ಲಿ ಕೆಲವರನ್ನು ಗುರುತಿಸಲಾಗಿದ್ದು ಆ ನಿರ್ಮಾಪಕರು, ನಟರು ನಾಳಿನ ಸಭೆಯಲ್ಲಿ ಭಾಗವಹಿಸುತ್ತಾರೆಯೇ ಎಂಬುದು ಕುತೂಹಲದ ವಿಷಯವಾಗಿದೆ.
ಪವನ್ ಕಲ್ಯಾಣ್ ವಿರುದ್ಧ ನಾಲ್ವರು (ಆ ನಲುಗುರು) ನಿರ್ಮಾಪಕರು ಪಿತೂರಿ ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ತೆಲುಗು ಚಿತ್ರರಂಗವನ್ನು ಹಾಗೂ ಆಂಧ್ರ-ತೆಲಂಗಾಣದ ಚಿತ್ರಮಂದಿರಗಳನ್ನು ವರ್ಷಗಳಿಂದಲೂ ನಿಯಂತ್ರಣದಲ್ಲಿ ಇರಿಸಿಕೊಂಡಿರುವ ನಿರ್ಮಾಪಕರುಗಳೂ ಆಗಿರುವ ಏಷಿಯನ್ ಸುನಿಲ್, ಸುರೇಶ್ ಬಾಬು, ದಿಲ್ ರಾಜು ಮತ್ತು ಅಲ್ಲು ಅರವಿಂದ್ ಅವರುಗಳ ವಿರುದ್ಧ ಪಿತೂರಿ ಆರೋಪ ಕೇಳಿ ಬಂದಿದೆ. ಇವರುಗಳು ನಾಳಿನ ಸಭೆಯಲ್ಲಿ ಭಾಗವಹಿಸುತ್ತಾರೆಯೇ ಇಲ್ಲವೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




