ತೆಲುಗು ಚಿತ್ರರಂಗದಲ್ಲಿ ನೆಪೋಟಿಸಂ ಇಲ್ಲವೇ ಇಲ್ಲ ಎಂದ ಖ್ಯಾತ ನಿರ್ಮಾಪಕ

ನಾಗ ವಂಶಿ ಅವರು ತೆಲುಗು ಚಿತ್ರರಂಗದಲ್ಲಿ ನೆಪೋಟಿಸಂ ಇಲ್ಲ ಎಂದು ಹೇಳಿದ್ದಾರೆ. ಬಾಲಿವುಡ್‌ನಲ್ಲಿ ಹೊರಗಿನವರಿಗೆ ಅವಕಾಶ ಕಡಿಮೆ ಎಂಬುದನ್ನು ಒಪ್ಪಿಕೊಂಡ ಅವರು, ತೆಲುಗು ಚಿತ್ರರಂಗದಲ್ಲಿ ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ಅವರಂತಹ ನಟರು ತಮ್ಮ ಯಶಸ್ಸಿಗೆ ಶ್ರಮ ಪಟ್ಟಿದ್ದಾರೆ ಎಂದು ಒತ್ತಿ ಹೇಳಿದ್ದಾರೆ. ನಿತಿನ್, ನಾನಿ, ವಿಜಯ್ ದೇವರಕೊಂಡರ ಯಶಸ್ಸನ್ನು ಉಲ್ಲೇಖಿಸಿ ನೆಪೋಟಿಸಂ ಇಲ್ಲದಿರುವುದಕ್ಕೆ ಸಾಕ್ಷಿ ನೀಡಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ನೆಪೋಟಿಸಂ ಇಲ್ಲವೇ ಇಲ್ಲ ಎಂದ ಖ್ಯಾತ ನಿರ್ಮಾಪಕ
ತೆಲುಗು ಚಿತ್ರರಂಗದಲ್ಲಿ ನೆಪೋಟಿಸಂ ಇಲ್ಲವೇ ಇಲ್ಲ ಎಂದ ಖ್ಯಾತ ನಿರ್ಮಾಪಕ
Updated By: ರಾಜೇಶ್ ದುಗ್ಗುಮನೆ

Updated on: Mar 31, 2025 | 7:53 AM

ಸದ್ಯ ಎಲ್ಲೆಲ್ಲೂ ನೆಪೋಟಿಸಂದೇ ಚರ್ಚೆ. ನೆಪೋಟಿಂಸ ಇರುವ ಕಾರಣಕ್ಕೆ ಚಿತ್ರರಂಗ ಹಾಳಾಗುತ್ತಿದೆ ಎಂಬ ವಾದವನ್ನು ಅನೇಕರು ಮುಂದಿಟ್ಟಿದ್ದನ್ನು ನೀವು ಕಾಣಬಹುದು. ಕೆಲವರು ಈ ವಾದವನ್ನು ಒಪ್ಪುತ್ತಾರೆ. ಸ್ಟಾರ್ ಹೀರೋನ ಮಕ್ಕಳು ಸುಲಭವಾಗಿ ಚಿತ್ರರಂಗಕ್ಕೆ ಬರುತ್ತಾರೆ. ಆದರೆ, ಅವರಿಗೆ ಮುಂದುವರಿಯೋಕೆ ಕಷ್ಟ ಪಡುತ್ತಾರೆ. ಆದರೂ ಕೆಲವು ನಿರ್ಮಾಪಕರು ಬಂಡವಾಳ ಹೂಡುತ್ತಾರೆ. ಬಾಲಿವುಡ್​ನಲ್ಲಿ (Bollywood) ಇದು ಜೋರಿದೆ. ಈ ಕಾರಣಕ್ಕೆ ಹೊರಗಿನಿಂದ ಬರುವವರಿಗೆ ಅವಕಾಶ ಸಿಗೋದಿಲ್ಲ. ಟಾಲಿವುಡ್​ನಲ್ಲೂ ಅನೇಕ ಸ್ಟಾರ್ ಹೀರೋಗಳ ಮಕ್ಕಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಆದರೆ, ಇಲ್ಲಿ ನೆಪೋಟಿಸಂ ಇಲ್ಲ ಎಂದು ಖ್ಯಾತ ನಿರ್ಮಾಪಕ ನಾಗ ವಂಶಿ ಹೇಳಿದ್ದಾರೆ. ಗಲಾಟಾ ಪ್ಲಸ್​ಗೆ ನೀಡಿಗೆ ಸಂದರ್ಶನದಲ್ಲಿ ಹೇಳಿದ್ದಾರೆ.

‘ಢಾಕು ಮಹರಾಜ್’ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿದವರು ನಾಗ ವಂಶಿ. ಅವರು ಟಾಲಿವುಡ್ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ‘ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಬಗ್ಗೆ ನನಗೆ ಗೊತ್ತಿಲ್ಲ. ಗೊತ್ತಿಲ್ಲದ ಚಿತ್ರರಂಗದ ಬಗ್ಗೆ ನಾನು ಕಮೆಂಟ್ ಮಾಡಲ್ಲ’ ಎಂದಿರೋ ನಾಗ ವಂಶಿ ಅವರು ಟಾಲಿವುಡ್ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ
ಚಿತ್ರರಂಗದ ಕರಾಳ ಮುಖ ತೆರೆದಿಟ್ಟ ಅಜಯ್ ರಾವ್; ಎದುರಿಸುವ ಸಮಸ್ಯೆಗಳೇನು?
ಗಳಿಕೆಯಲ್ಲಿ ಮೊದಲ ದಿನವೇ ಮಕಾಡೆ ಮಲಗಿದ ‘ಸಿಕಂದರ್’
‘ಸಿಖಂಧರ್’ ಸಿನಿಮಾ ನೋಡಿದ ಪ್ರೇಕ್ಷಕರು ನೀಡಿದ ತೀರ್ಪೇನು?
ಐಶಾರಾಮಿ ಕಾರು ಖರೀದಿ ಮಾಡಿದ ರಶ್ಮಿಕಾ ಮಂದಣ್ಣ, ಬೆಲೆ ಎಷ್ಟು ಕೋಟಿ?


‘ತೆಲುಗು ಚಿತ್ರರಂಗದಲ್ಲಿ ನೆಪೋಟಿಸಂ ಇಲ್ಲ’ ಎಂದು ಹೇಳಿದಾಗ ಸಂದರ್ಶಕ ನಕ್ಕರು. ‘ತೆಲುಗು ಚಿತ್ರರಂಗದಲ್ಲಿ ನೆಪೋಟಿಸಂನಿಂದ ಇಂಥವರಿಗೆ ತೊಂದರೆ ಆಗಿದೆ ಎಂದರೆ ಹೇಳಿ. ನೆಪೋಟಿಸಂ ಇದ್ದಿದ್ದರೆ ನಾನಿ, ವಿಜಯ್ ದೇವರಕೊಂಡ, ನಿತಿನ್ ಯಾರೂ ದೊಡ್ಡ ಸ್ಟಾರ್ ಆಗುತ್ತಲೇ ಇರಲಿಲ್ಲ’ ಎಂದು ನಾಗ ವಂಶಿ ಹೇಳಿದ್ದಾರೆ. ಬಾಲಿವುಡ್​ನಲ್ಲಿ ಇಂಡಸ್ಟ್ರಿ ಹೊರಗಿನಿಂದ ಬರುವವರಿಗೆ ಅವಕಾಶವೇ ಇರುವುದಿಲ್ಲ. ಆದರೆ, ಟಾಲಿವುಡ್​ನಲ್ಲಿ ಆ ರೀತಿ ಇಲ್ಲ, ಹೊರಗಿನವರಿಗೂ ಅವಕಾಶ ಇದೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ‘ದೇವರ’ ನಕಲಿ ಕಲೆಕ್ಷನ್, ವಿತರಕ ನಾಗ ವಂಶಿ ಸ್ಪಷ್ಟಣೆಯಿಂದ ಇನ್ನಷ್ಟು ಅನುಮಾನ

‘ಅಲ್ಲು ಅರ್ಜುನ್, ರಾಮ್ ಚರಣ್ ನೆಪೋ ಕಿಡ್ ಅಲ್ಲ. ಅವರು ಚಿತ್ರರಂಗಕ್ಕೆ ಬಂದು ಸಾಕಷ್ಟು ಎಫರ್ಟ್ ಹಾಕಿದ್ದಾರೆ. ಅವರು ಪ್ರಭಾವಿ ವ್ಯಕ್ತಿಯ ಮಕ್ಕಳಾಗಿರಬಹುದು. ಆದರೆ, ಸಾಕಷ್ಟು ಶ್ರಮ ಹಾಕಿದ್ದಾರೆ’ ಎಂದಿದ್ದಾರೆ. ಬಾಲಿವುಡ್​ನಲ್ಲಿ ನೆಪೋ ಕಿಡ್​ಗಳು ಯಾವುದೇ ಎಫರ್ಟ್ ಹಾಕುವುದಿಲ್ಲ, ತಂದೆಯ ಪ್ರಭಾವದಿಂದ ಅವರು ಮುಂದುವರಿಯುತ್ತಿದ್ದಾರೆ, ಅವರು ಯಾವುದೇ ಶ್ರಮ ಹಾಕುವುದಿಲ್ಲ ಎನ್ನುವ ಆರೋಪ ಇದೆ. ಅಲ್ಲದೆ, ಹೊರಗಿನವರಿಗೆ ಬರೋಕೂ ಅವರು ಅವಕಾಶ ನೀಡುವುದಿಲ್ಲ ಎಂಬ ಮಾತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.