‘ಟಾಕ್ಸಿಕ್’: ‘ಮನಮೋಹಕ’ ಹಾಡಿನಲ್ಲಿ ‘ಕಿರಾತಕ’ನ ಹುಡುಕಿದ ಅಭಿಮಾನಿಗಳು

Toxic movie song: ಇದೀಗ ‘ಟಾಕ್ಸಿಕ್’ ಸಿನಿಮಾದ ‘ಮನಮೋಹಕ’ ಎಂಬ ಹಾಡು ಬಿಡುಗಡೆ ಆಗಿದೆ. ಹಾಡಿನಲ್ಲಿ ಈ ಬಾರಿ ಯಶ್, ತಾರಾ ಸುತಾರಿಯಾ ಜೊತೆಗೆ ರೊಮ್ಯಾನ್ಸ್ ಮಾಡಿದ್ದಾರೆ. ಆದರೆ ಹಾಡು ನೋಡಿದ ಕೆಲವರು ‘ಕಿರಾತಕ’ ಸಿನಿಮಾ ಅನ್ನು ನೆನಪು ಮಾಡಿಕೊಂಡಿದ್ದಾರೆ. ‘ಟಾಕ್ಸಿಕ್’ ಹಾಡಿಗೂ ‘ಕಿರಾತಕ’ ಸಿನಿಮಾಕ್ಕೂ ಏನು ಸಂಬಂಧ? ಇಲ್ಲಿದೆ ಮಾಹಿತಿ...

‘ಟಾಕ್ಸಿಕ್’: ‘ಮನಮೋಹಕ’ ಹಾಡಿನಲ್ಲಿ ‘ಕಿರಾತಕ’ನ ಹುಡುಕಿದ ಅಭಿಮಾನಿಗಳು
Kirathaka

Updated on: Jul 21, 2026 | 12:16 PM

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಮತ್ತೊಂದು ಹಾಡು ಇಂದು (ಜುಲೈ 21) ಬಿಡುಗಡೆ ಆಗಿದೆ. ಕೆಲ ದಿನಗಳ ಹಿಂದಷ್ಟೆ ‘ತಬಾಹಿ’ ಹಾಡು ಬಿಡುಗಡೆ ಆಗಿ ಸಖತ್ ಹವಾ ಸೃಷ್ಟಿಸಿತ್ತು. ಯಶ್ ಹಾಗೂ ಕಿಯಾರಾ ಅವರುಗಳ ಕೆಮಿಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಇದೀಗ ‘ಟಾಕ್ಸಿಕ್’ ಸಿನಿಮಾದ ‘ಮನಮೋಹಕ’ ಎಂಬ ಹಾಡು ಬಿಡುಗಡೆ ಆಗಿದೆ. ಹಾಡಿನಲ್ಲಿ ಈ ಬಾರಿ ಯಶ್, ತಾರಾ ಸುತಾರಿಯಾ ಜೊತೆಗೆ ರೊಮ್ಯಾನ್ಸ್ ಮಾಡಿದ್ದಾರೆ. ಆದರೆ ಹಾಡು ನೋಡಿದ ಕೆಲವರು ‘ಕಿರಾತಕ’ ಸಿನಿಮಾ ಅನ್ನು ನೆನಪು ಮಾಡಿಕೊಂಡಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಹಾಡಿಗೆ ಹಲವಾರು ರೀತಿಯ ಕಮೆಂಟುಗಳು ಬಂದಿವೆ. ಹಾಡು ವೀಕ್ಷಿಸಿದ ಬಹುತೇಕರು ಹಾಡನ್ನು ಇಷ್ಟಪಟ್ಟಿದ್ದಾರೆ. ಯಶ್ ಅವರ ಲುಕ್​​ ಅನ್ನು ಕೊಂಡಾಡಿದ್ದಾರೆ. ಜೊತೆಗೆ ಮೇಕಿಂಗ್ ಅನ್ನು ಸಹ ಕೊಂಡಾಡಿದ್ದಾರೆ. ‘ತಬಾಹಿ’ ರೀತಿಯೇ ಈ ಹಾಡನ್ನು ಸಹ ಬಲು ರಿಚ್ ಆಗಿ ಚಿತ್ರೀಕರಿಸಲಾಗಿದೆ. ‘ತಬಾಹಿ’ ಯಂತೆ ಈ ಹಾಡಿನಲ್ಲೂ ರೊಮ್ಯಾಂಟಿಕ್ ದೃಶ್ಯಗಳಿವೆ. ಇದೇ ಕಾರಣಕ್ಕೆ ಕೆಲವರು ‘ತಬಾಹಿ’ ಅಷ್ಟು ನೋಡಲು ಮುದವಿಲ್ಲ’ ಎಂದು ತಮಾಷೆ ಮಾಡಿದ್ದಾರೆ.

ಹಲವಾರು ಯಶ್ ಅಭಿಮಾನಿಗಳು ಸಿನಿಮಾ ನೋಡಲು ಕಾತರರಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ. ಕರ್ನಾಟಕ ಮಾತ್ರವೇ ಅಲ್ಲದೆ, ದೇಶದ ಹಲವು ರಾಜ್ಯಗಳ ಅಭಿಮಾನಿಗಳು ಯಶ್ ಅವರ ಹಾಡಿಗೆ ಧನಾತ್ಮಕವಾಗಿ ಕಮೆಂಟ್ ಮಾಡಿದ್ದಾರೆ. ಆದರೆ ಕೆಲವರು ಹಾಡು ನೋಡಿ ಯಶ್ ಅವರ ‘ಕಿರಾತಕ’ ಸಿನಿಮಾ ಅನ್ನು ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Toxic Song: ‘ಟಾಕ್ಸಿಕ್’ ಚಿತ್ರದ ‘ಮನಮೋಹಕ..’ ಸಾಂಗ್; ಯಶ್-ತಾರಾ ಸುತಾರಿಯಾ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ

‘ಮನಮೋಹಕ’ ಹಾಡಿನ ಅಂತ್ಯದಲ್ಲಿ ದೃಶ್ಯವೊಂದಿದೆ. ಯಶ್, ಕಾರಿನ ಮೇಲೆ ಕೂತಿರುತ್ತಾರೆ. ಅವರ ಗುಂಪಿನ ಸದಸ್ಯರು ಅವರ ಸುತ್ತ ನೆರೆದಿರುತ್ತಾರೆ. ಆಗ ನಟಿ ತಾರಾ ಸುತಾರಿಯಾ ಅಲ್ಲಿಗೆ ಬರುತ್ತಾರೆ. ಯಶ್, ಬಂದೂಕು ತೆಗೆದು ನೆಲಕ್ಕೆ ಶೂಟ್ ಮಾಡಿ ಸುತ್ತ ಇದ್ದವರನ್ನು ದೂರ ಅಟ್ಟುತ್ತಾರೆ. ಬಳಿಕ ನಾಯಕಿಯನ್ನು ಬರಸೆಳೆದು ತಬ್ಬಿಕೊಳ್ಳುತ್ತಾರೆ. ಈ ದೃಶ್ಯ ನೋಡಿ ಹಲವರು ‘ಕಿರಾತಕ’ ಸಿನಿಮಾ ನೆನಪು ಮಾಡಿಕೊಂಡಿದ್ದಾರೆ.

‘ಕಿರಾತಕ’ ಸಿನಿಮಾನಲ್ಲಿಯೂ ಇಂಥಹುದೇ ಒಂದು ದೃಶ್ಯವಿದೆ. ನಾಯಕಿಗಾಗಿ, ಯಶ್ ತನ್ನ ಗೆಳೆಯರನ್ನು ಓಡಿಸುತ್ತಾರೆ. ‘ಕಿರಾತಕ’ ಸಿನಿಮಾನಲ್ಲಿ ಯಶ್ ಪಾತ್ರ ನಾಯಕಿಯ ಊರಿಗೆ ಡ್ಯಾನ್ಸ್ ಪ್ರೋಗ್ರಾಂ ನೋಡಲು ಹೋದಾಗ ಈ ದೃಶ್ಯವಿದೆ. ಆ ದೃಶ್ಯದಲ್ಲಿ ಯಶ್, ನಾಯಕಿಯೊಟ್ಟಿಗೆ ಮಾತನಾಡಲು, ತನ್ನ ಗೆಳೆಯರನ್ನು ಅಲ್ಲಿಂದ ದೂರ ಕಳಿಸುತ್ತಾರೆ. ಈಗ ‘ಮನಮೋಹಕ’ ಹಾಡಿನ ದೃಶ್ಯ ನೋಡಿ ಅಭಿಮಾನಿಗಳು ‘ಕಿರಾತಕ’ ಸೀನ್ ನೆನಪು ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:15 pm, Tue, 21 July 26

Follow Us