‘ಟಾಕ್ಸಿಕ್’ ಸಿನಿಮಾ: ‘ರಾಯ’ನ ಕಿಕ್ ಕೊಡೋ ಸ್ಟೈಲ್

Toxic movie: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಅತ್ಯಂತ ನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಟಾಕ್ಸಿಕ್’. ಸಿನಿಮಾದ ಬಿಡುಗಡೆ ಈಗಾಗಲೇ ಎರಡು ಬಾರಿ ಮುಂದೆ ಹೋಗಿದೆ. ಆದರೂ ಸಿನಿಮಾದ ಕ್ರೇಜ್ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ‘ಟಾಕ್ಸಿಕ್’ ಸಿನಿಮಾದ ಕ್ಯಾರೆಕ್ಟರ್ ಪೋಸ್ಟರ್ ಹಾಗೂ ಎರಡು ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಕುತೂಹಲ ಮೂಡಿಸಿವೆ. ಇದೀಗ ‘ಟಾಕ್ಸಿಕ್’​​ ತಂಡವು ಸಿನಿಮಾದಲ್ಲಿನ ಯಶ್​​ ಪಾತ್ರವಾದ ‘ರಾಯ’ನ ಆಕರ್ಷಕ ಫೋಟೊಗಳನ್ನು ಹಂಚಿಕೊಂಡಿದೆ.

‘ಟಾಕ್ಸಿಕ್’ ಸಿನಿಮಾ: ‘ರಾಯ’ನ ಕಿಕ್ ಕೊಡೋ ಸ್ಟೈಲ್
Yash Raya1

Updated on: May 19, 2026 | 5:52 PM

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ, ಅತ್ಯಂತ ನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಟಾಕ್ಸಿಕ್’. ಸಿನಿಮಾದ ಬಿಡುಗಡೆ ಈಗಾಗಲೇ ಎರಡು ಬಾರಿ ಮುಂದೆ ಹೋಗಿದೆ. ಆದರೂ ಸಿನಿಮಾದ ಕ್ರೇಜ್ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ‘ಟಾಕ್ಸಿಕ್’ ಸಿನಿಮಾದ ಕ್ಯಾರೆಕ್ಟರ್ ಪೋಸ್ಟರ್ ಹಾಗೂ ಎರಡು ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಸಖತ್ ಕುತೂಹಲ ಮೂಡಿಸಿವೆ. ಇದೀಗ ‘ಟಾಕ್ಸಿಕ್’​​ ತಂಡವು ಸಿನಿಮಾದಲ್ಲಿನ ಯಶ್​​ ಪಾತ್ರವಾದ ‘ರಾಯ’ನ ಆಕರ್ಷಕ ಫೋಟೊಗಳನ್ನು ಹಂಚಿಕೊಂಡಿದೆ.

ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್ ನಲ್ಲಿ ಯಶ್ ರಾಯನ ವೇಷದಲ್ಲಿ ಸಖತ್ ಸ್ಟೈಲಿಷ್ ಆಗಿ ಕಾಣುತ್ತಿದ್ದಾರೆ. ಕಡು ಕೆಂಪು ಮತ್ತು ನಿಯಾನ್ ದೀಪಗಳ ಹಿನ್ನೆಲೆಯಲ್ಲಿ, ವಿಂಟೇಜ್ ಕಾರೊಂದರ ಮುಂದೆ ಯಶ್ ಖಡಕ್ ಆಗಿ ನಿಂತಿದ್ದಾರೆ. ಅವರ ಸುತ್ತಲೂ ಬಂದೂಕುಗಳನ್ನು ಹಿಡಿದಿರುವ ಕಾವಲುಗಾರರು ಅಥವಾ ಅಂಡರ್‌ವರ್ಲ್ಡ್ ಗ್ಯಾಂಗ್ ಸದಸ್ಯರು ಇರುವುದನ್ನು ಕಾಣಬಹುದು. ಈ ಆಕರ್ಷಕ ದೃಶ್ಯವು ಚಿತ್ರದಲ್ಲಿ ಸೃಷ್ಟಿಯಾಗಲಿರುವ ಕರಾಳ ಭೂಗತ ಲೋಕದ ವೈಭವ ಹಾಗೂ ತೀವ್ರತೆಯನ್ನು ಧ್ವನಿಸುತ್ತಿದೆ.

ಇದರ ಜೊತೆಗೆ ಯಶ್​ ಅವರ ರಾಯ ಪಾತ್ರ ಸಿಗರೇಟು ಸೇದುತ್ತಾ ತೀಕ್ಷ್ಣ ದೃಷ್ಟಿಯಿಂದ ನೋಡುತ್ತಿರುವ ಕ್ಲೋಸ್ ಅಪ್ ಫೋಟೊ ಒಂದನ್ನು ಸಹ ಬಿಡುಗಡೆ ಮಾಡಲಾಗಿದೆ. ಎರಡೂ ಫೋಟೊಗಳನ್ನು ಯಶ್ ಬಲು ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಎರಡೂ ಫೋಟೊಗಳು ಅವರ ರಾಯ ಪಾತ್ರದ್ದೇ ಆಗಿವೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾ ಪದೇ ಪದೇ ಪೋಸ್ಟ್‌ಪೋನ್; ಅಭಿಮಾನಿಗಳ ಬೇಸರದ ಬಗ್ಗೆ ಯಶ್ ಮಾತು

ರಾಷ್ಟ್ರಪ್ರಶಸ್ತಿ ವಿಜೇತ ಮತ್ತು ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತ ನಾಮನಿರ್ದೇಶನ ಪಡೆದಿದ್ದ ಚಿತ್ರಗಳ ನಿರ್ದೇಶಕಿ ಗೀತು ಮೋಹನ್‌ದಾಸ್ ‘ಟಾಕ್ಸಿಕ್’ ಸಿನಿಮಾವನ್ನು ನಿರ್ದೇಶಿಸಿದ್ದು. ಇತ್ತೀಚೆಗೆ ಕಾನ್ ಚಲನಚಿತ್ರೋತ್ಸವದಲ್ಲಿ ಚಿತ್ರದ ಪ್ರಮುಖ ನಟಿಯರಲ್ಲಿ ಒಬ್ಬರಾದ ತಾರಾ ಸುತಾರಿಯಾ ಚಿತ್ರದ ಕುರಿತು ಮಾತನಾಡುತ್ತಾ, “ಗೀತು ಮೋಹನ್‌ದಾಸ್ ಅವರಂತಹ ಮಹಿಳಾ ನಿರ್ದೇಶಕಿಯ ಜೊತೆ ಕೆಲಸ ಮಾಡುವುದು ಅದ್ಭುತ ಅನುಭವ. ಈ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ಮಹಿಳಾ ಪಾತ್ರಕ್ಕೂ ಅಪಾರ ಶಕ್ತಿ, ಧೈರ್ಯ ಹಾಗೂ ಆಳವಾದ ವ್ಯಕ್ತಿತ್ವವಿದೆ. ಭಾರತೀಯ ಚಿತ್ರರಂಗದಲ್ಲೇ ವಿಭಿನ್ನವಾದ ಶೈಲಿಯಲ್ಲಿ ಈ ಸಿನಿಮಾವನ್ನು ಜಾಗತಿಕ ಮಟ್ಟಕ್ಕಾಗಿ ರೂಪಿಸಲಾಗುತ್ತಿದೆ’ ಎಂದು ಹೊಗಳಿದ್ದಾರೆ.

Yash Raya

Yash Raya

‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಜೊತೆಗೆ ದೊಡ್ಡ ತಾರಾಗಣವೇ ಇದೆ. ಕಿಯಾರಾ ಅಡ್ವಾಣಿ (ನಾಡಿಯಾ ಪಾತ್ರದಲ್ಲಿ), ನಯನತಾರಾ (ಗಂಗಾ ಪಾತ್ರದಲ್ಲಿ), ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಜೊತೆಗೆ ಇನ್ನೂ ಹಲವು ಖ್ಯಾತ ನಟರುಗಳು ಸಿನಿಮಾನಲ್ಲಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಛಾಯಾಗ್ರಾಹಕ ರಾಜೀವ್ ರವಿ ಕ್ಯಾಮೆರಾ ಸಿನಿಮಾಟೊಗ್ರಫಿ ಮಾಡಿದ್ದಾರೆ. ರವಿ ಬಸ್ರೂರ್ ಮತ್ತು ವಿಶಾಲ್ ಮಿಶ್ರಾ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮೊನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಭಾರಿ ಬಜೆಟ್​ನಲ್ಲಿ ಸಿನಿಮಾ ನಿರ್ಮಿಸಿವೆ.

ಈ ಹಿಂದೆ ‘ಟಾಕ್ಸಿಕ್’ ಚಿತ್ರವನ್ನು 2026ರ ಮಾರ್ಚ್ 19 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ನಂತರ ಜೂನ್ 4 ಕ್ಕೆ ಮುಂದೂಡಲಾಗಿತ್ತು. ಆದರೆ, ಇತ್ತೀಚೆಗೆ ಚಿತ್ರತಂಡ ಅಧಿಕೃತ ಪ್ರಕಟಣೆ ಹೊರಡಿಸಿ, ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದರೂ ಜಾಗತಿಕ ಮಟ್ಟದ ವಿತರಣೆ ಮಾಡುವ ಹೊಂದಿಸುವ ಸಲುವಾಗಿ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದೆ. ಪ್ರಸ್ತುತ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಆಗಸ್ಟ್ 14 ಕ್ಕೆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us