
ಸಮಯ ಎಂದಿಗೂ ಒಂದೇ ರೀತಿ ಇರುವುದಿಲ್ಲ ಎಂಬುದು ಎವರ್ಗ್ರೀನ್ ಮಾತು. ಇದು ಜನಸಾಮಾನ್ಯರಿಗೆ ಮಾತ್ರವಲ್ಲ, ಸ್ಟಾರ್ ನಿರ್ದೇಶಕನ ಜೀವನದಲ್ಲೂ ನಿಜವಾಗಿ ಹೋಗಿದೆ ಎನ್ನಬಹುದು. ಅವರು ಬೇರಾರೂ ಅಲ್ಲ, ಸ್ಟಾರ್ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ (Trivikram Srinivas). ಒಂದು ಕಾಲದಲ್ಲಿ ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡುತ್ತಿದ್ದರು ಅವರು. ಆದರೆ, ಈಗ ಸ್ಟಾರ್ ಕಲಾವಿದರು ಅವರ ಜೊತೆ ಸಿನಿಮಾ ಮಾಡೋಕೆ ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣಕ್ಕೆ ತ್ರಿವಿಕ್ರಂ ಶ್ರೀನಿವಾಸ್ ಈಗ ಪೆಂಡಿಂಗ್ ಸಿನಿಮಾಗಳನ್ನು ಮುಗಿಸಿಕೊಳ್ಳುವ ಪರಿಸ್ಥಿತಿ ಬಂದಿದೆ ಎನ್ನಲಾಗಿದೆ.
ಮಹೇಶ್ ಬಾಬು ಜೊತೆ ತ್ರಿವಿಕ್ರಂ ಶ್ರೀನಿವಾಸ್ ಅವರು ‘ಗುಂಟೂರು ಖಾರಂ’ ಸಿನಿಮಾ ಮಾಡಿದರು. ಈ ಸಿನಿಮಾ 2024ರ ಜನವರಿಯಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋತಿತು. ಈ ಚಿತ್ರಕ್ಕೆ ಎಲ್ಲರೂ ನೆಗೆಟಿವ್ ವಿಮರ್ಶೆ ನೀಡಿದರು. ಮಹೇಶ್ ಬಾಬು ಇದ್ದ ಹೊರತಾಗಿಯೂ ಸಿನಿಮಾ ಗೆದ್ದಿಲ್ಲ ಎಂದೇ ಹೇಳಬಹುದು. ಅಲ್ಲು ಅರ್ಜುನ್ ಜೊತೆ ಅವರು ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕಿತ್ತು. ತ್ರಿವಿಕ್ರಂ ಹಾಗೂ ಬನ್ನಿ ಜೊತೆ ಇದು ನಾಲ್ಕನೇ ಕಾಂಬಿನೇಷನ್ ಆಗಿತ್ತು ಆದರೆ, ಅದು ಸಾಧ್ಯವಾಗಿಲ್ಲ.
ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಂ ಈ ಮೊದಲು, ‘ಸನ್ ಆಫ್ ಸತ್ಯಮೂರ್ತಿ, ‘ಜುಲಾಯಿ’ ಹಾಗೂ ‘ಅಲಾ ವೈಕುಂಟ ಪುರಮುಲೋ’ ಸಿನಿಮಾ ಮಾಡಿದ್ದರು. ಎಲ್ಲಾ ಸಿನಿಮಾಗಳು ಹಿಟ್ ಆದವು.
ಆದರೆ, ಈಗ ಅಲ್ಲು ಅರ್ಜುನ್ ಅವರು ಅಟ್ಲೀ ಜೊತೆ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ಇನ್ನೂ ಎರಡು ವರ್ಷಗಳು ಬೇಕಾಗಬಹುದು. ಅಲ್ಲಿಯವರೆಗೆ ತ್ರಿವಿಕ್ರಂ ಸುಮ್ಮನೆ ಕಾಯುತ್ತಾ ಕೂರಬೇಕಾಗುತ್ತದೆ. ಹೀಗಾಗಿ, ಈ ಸಂದರ್ಭದಲ್ಲಿ ಬಾಕಿ ಉಳಿದ ಚಿತ್ರವನ್ನು ಮಾಡುವ ಆಲೋಚನೆ ತ್ರಿವಿಕ್ರಂಗೆ ಬಂದಿದೆ.
ಇದನ್ನೂ ಓದಿ: ಅಲ್ಲು ಅರ್ಜುನ್-ತ್ರಿವಿಕ್ರಂ ಶ್ರೀನಿವಾಸ್ ಸಿನಿಮಾ ಬಗ್ಗೆ ಸಿಕ್ತು ದೊಡ್ಡ ಅಪ್ಡೇಟ್
2017ರಲ್ಲಿ ತ್ರಿವಿಕ್ರಂ ಹಾಗೂ ವಿಕ್ಟರಿ ವೆಂಕಟೇಶ್ ಸಿನಿಮಾ ಘೋಷಣೆ ಮಾಡಿದ್ದರು. ಆದರೆ, ಈ ಸಿನಿಮಾ ನಿಂತು ಹೋಯಿತು. ಈ ಕೊಲಾಬ್ಯರೇಷನ್ ನೋಡಲು ಫ್ಯಾನ್ಸ್ ಕಾದಿದ್ದರು. ಈಗ ಇವರು ಒಂದಾಗಿ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಲ್ಲವಾದರೆ ಅವರು ಎರಡು ವರ್ಷ ಕಾಯಬೇಕು. ವಿಕ್ಟರಿ ವೆಂಕಟೇಶ್ ಅವರು ‘ಸಂಕ್ರಾಂತಿಕಿ ವಸ್ತುನ್ನಾನು’ ಸಿನಿಮಾ ಮೂಲಕ ಗೆದ್ದಿದ್ದಾರೆ. ಅವರು ತ್ರಿವಿಕ್ರಂ ಜೊತೆ ಸಿನಿಮಾ ಮಾಡೋಕೆ ಒಪ್ಪುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.