ಟ್ವಿಟರ್​ನಲ್ಲಿ ಈ ವರ್ಷ ಅತಿ ಹೆಚ್ಚು ಟ್ರೆಂಡ್​ ಆದ ದಕ್ಷಿಣ ಭಾರತದ ಕಲಾವಿದರು ಇವರು

| Updated By: ಮದನ್​ ಕುಮಾರ್​

Updated on: Dec 12, 2021 | 3:54 PM

2021 Twitter Trending: 2021ರ ಸಾಲಿನಲ್ಲಿ ಟ್ವಿಟರ್​ನಲ್ಲಿ ಅತಿ ಹೆಚ್ಚು ಟ್ರೆಂಡ್​ ಆದ ದಕ್ಷಿಣ ಭಾರತದ ಟಾಪ್​ 10 ನಟ-ನಟಿಯರ ಪಟ್ಟಿ ಬಿಡುಗಡೆ ಆಗಿದೆ. ಇದರಲ್ಲಿ ಕನ್ನಡದ ಯಾವ ಕಲಾವಿದರೂ ಇಲ್ಲ!

ಟ್ವಿಟರ್​ನಲ್ಲಿ ಈ ವರ್ಷ ಅತಿ ಹೆಚ್ಚು ಟ್ರೆಂಡ್​ ಆದ ದಕ್ಷಿಣ ಭಾರತದ ಕಲಾವಿದರು ಇವರು
ಅತಿ ಹೆಚ್ಚು ಟ್ರೆಂಡ್ ಆದ ದಕ್ಷಿಣ ಭಾರತದ ಕಲಾವಿದರು
Follow us on

ನೋಡನೋಡುತ್ತಿದ್ದಂತೆಯೇ ವರ್ಷಾಂತ್ಯ ಸಮೀಪಿಸಿದೆ. 2021ರ ವರ್ಷ ಇನ್ನೇನು ಕಳೆದುಹೋಗಲಿದೆ. ಈ ವರ್ಷ ಅನೇಕ ಪ್ರಮುಖ ಘಟನೆಗಳು ನಡೆದವು. ಸಿನಿಮಾರಂಗ ಕೂಡ ಅದಕ್ಕೆ ಹೊರತಾಗಿಲ್ಲ. ಆ ಎಲ್ಲ ಘಟನೆಗಳ ಬಗೆಗಿನ ಮಾತುಕತೆಗೆ ಸೋಶಿಯಲ್​ ಮೀಡಿಯಾದಲ್ಲಿ ಜಾಗ ಸಿಕ್ಕಿತ್ತು. ಅನೇಕ ಸಿನಿಮಾಗಳ ಬಗ್ಗೆ, ಸೆಲೆಬ್ರಿಟಿಗಳ ಬಗ್ಗೆ, ವಿವಾದಗಳ ಬಗ್ಗೆ ಟ್ವಿಟರ್​ನಲ್ಲಿ ಚರ್ಚೆ ಆಯಿತು. ನೆಗೆಟಿವ್​ ಅಥವಾ ಪಾಸಿಟಿವ್​ ಯಾವುದೇ ವಿಚಾರಕ್ಕಿರಲಿ, ಈ ವರ್ಷ ಅತಿ ಹೆಚ್ಚು ಟ್ರೆಂಡಿಂಗ್​ನಲ್ಲಿದ್ದ (Twitter Trending) ದಕ್ಷಿಣ ಭಾರತದ ಸೆಲೆಬ್ರಿಟಿಗಳ ಪಟ್ಟಿಯನ್ನು ಈಗ ಟ್ವಿಟರ್​ ಬಿಡುಗಡೆ ಮಾಡಿದೆ. ನಟಿಯರ ಪೈಕಿ ಕೀರ್ತಿ ಸುರೇಶ್​ (Keerthy Suresh) ಅವರು ನಂಬರ್​ ಸ್ಥಾನದಲ್ಲಿದ್ದಾರೆ. ನಟರಲ್ಲಿ ದಳಪತಿ ವಿಜಯ್​ (Thalapathy Vijay) ಅವರು ಅಗ್ರ ಸ್ಥಾನ ಅಲಂಕರಿಸಿದ್ದಾರೆ.

ನಟಿಯರು ಪೈಕಿ ಈ ವರ್ಷ ಅತಿಹೆಚ್ಚು ಟ್ರೆಂಡ್​ ಆದವರು ಪಟ್ಟಿ ಈ ರೀತಿ ಇದೆ. ಟಾಪ್​ 10ರ ಪಟ್ಟಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಜಾಗವೇ ಇಲ್ಲ!

  1. ಕೀರ್ತಿ ಸುರೇಶ್​
  2. ಪೂಜಾ ಹೆಗ್ಡೆ
  3. ಸಮಂತಾ
  4. ಕಾಜಲ್​ ಅಗರ್​ವಾಲ್​
  5. ಮಾಳವಿಕಾ ಮೋಹನನ್
  6. ರಾಕುಲ್​ ಪ್ರೀತ್​ ಸಿಂಗ್​
  7. ಸಾಯಿ ಪಲ್ಲವಿ
  8. ತಮನ್ನಾ ಭಾಟಿಯಾ
  9. ಅನುಷ್ಕಾ ಶೆಟ್ಟಿ
  10. ಅನುಪಮಾ ಪರಮೇಶ್ವರನ್​

2021ರ ಸಾಲಿನಲ್ಲಿ ಟ್ವಿಟರ್​ನಲ್ಲಿ ಅತಿ ಹೆಚ್ಚು ಟ್ರೆಂಡ್​ ಆದ ದಕ್ಷಿಣ ಭಾರತದ ಟಾಪ್​ 10 ನಟರು ಇವರು. ಇದರಲ್ಲಿ ಕನ್ನಡದ ಯಾವ ಹೀರೋಗಳೂ ಇಲ್ಲ!

  1. ದಳಪತಿ ವಿಜಯ್​
  2. ಪವನ್​ ಕಲ್ಯಾಣ್​
  3. ಮಹೇಶ್​ ಬಾಬು
  4. ಸೂರ್ಯ
  5. ಜ್ಯೂ. ಎನ್​ಟಿಆರ್​
  6. ಅಲ್ಲು ಅರ್ಜುನ್​
  7. ರಜನಿಕಾಂತ್​
  8. ರಾಮ್​ ಚರಣ್​
  9. ಧನುಶ್​
  10. ಅಜಿತ್​ ಕುಮಾರ್​

ಈ ವರ್ಷ ಟ್ವಿಟರ್​ನಲ್ಲಿ ಅತಿ ಹೆಚ್ಚು ಸೌಂಡು ಮಾಡಿದ ಹಲವು ವಿಷಯಗಳ ಬಗ್ಗೆ ಟ್ವಿಟರ್​ ಸಂಸ್ಥೆಯು ಪಟ್ಟಿ ಬಿಡುಗಡೆ ಮಾಡುತ್ತಿದೆ. ಅದರಲ್ಲಿ ಅತಿ ಹೆಚ್ಚು ಟ್ರೆಂಡ್​ ಆದ ದಕ್ಷಿಣ ಭಾರತದ ಸಿನಿಮಾಗಳ ಪಟ್ಟಿ ಈ ರೀತಿ ಇದೆ. ನಂ.1 ಸ್ಥಾನವನ್ನು ದಳಪತಿ ವಿಜಯ್​ ನಟನೆಯ ‘ಮಾಸ್ಟರ್​’ ಚಿತ್ರ ಅಲಂಕರಿಸಿದೆ. ಎರಡನೇ ಸ್ಥಾನದಲ್ಲಿ ಅಜಿತ್​ ಕುಮಾರ್​ ಅವರ ‘ವಲಿಮೈ’ ಸಿನಿಮಾ ಇದೆ. ಮೂರನೇ ಸ್ಥಾನದಲ್ಲಿ ವಿಜಯ್​ ಅವರ ‘ಬೀಸ್ಟ್​’ ಸಿನಿಮಾ ಇದೆ.

ಇನ್ನುಳಿದಂತೆ 4ರಿಂದ 9ರವರೆಗೆ ಕ್ರಮವಾಗಿ ಜೈ ಭೀಮ್​, ವಕೀಲ್​ ಸಾಬ್​, ಆರ್​ಆರ್​ಆರ್​, ಸರ್ಕಾರು ವಾರಿ ಪಾಟ, ಪುಷ್ಪ, ಡಾಕ್ಟರ್​ ಸಿನಿಮಾಗಳಿವೆ. 10ನೇ ಸ್ಥಾನಕ್ಕೆ ಕನ್ನಡದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ತೃಪ್ತಿಪಟ್ಟುಕೊಂಡಿದೆ. ಅಂದರೆ, ಈ ಟಾಪ್​ 10ರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕನ್ನಡ ಸಿನಿಮಾ ‘ಕೆಜಿಎಫ್​ 2’.

ಇದನ್ನೂ ಓದಿ:

ಟ್ರೆಂಡಿಂಗ್​ ಪೈಪೋಟಿಯಲ್ಲಿ ಪರಭಾಷೆ ಚಿತ್ರಗಳಿಗೆ ಫೈಟ್​ ಕೊಟ್ಟ ಏಕೈಕ ಕನ್ನಡ ಸಿನಿಮಾ ಯಾವುದು?

ಯಶ್​, ಪ್ರಭಾಸ್​, ಸಮಂತಾರನ್ನೂ ಹಿಂದಿಕ್ಕಿ ರಶ್ಮಿಕಾ ನಂ.1, ದೇವರಕೊಂಡ ನಂ.2: ಇಲ್ಲಿದೆ ಫೋರ್ಬ್ಸ್​ ಪಟ್ಟಿ

Published On - 3:40 pm, Sun, 12 December 21