‘ಕುಬೇರ’ ಸಿನಿಮಾ ನೋಡಿ ನೆಟ್ಟಿಗರು ಹೇಳಿದ್ದೇನು? ಸಿನಿಮಾ ಹಿಟ್ ಅಥವಾ ಪ್ಲಾಪ್?
Kubera movie: ಧನುಶ್, ರಶ್ಮಿಕಾ ಮತ್ತು ನಟ ನಾಗಾರ್ಜುನ ನಟಿಸಿ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನ ಮಾಡಿರುವ ‘ಕುಬೇರ’ ಸಿನಿಮಾ ಇಂದು (ಜೂನ್ 20) ಬಿಡುಗಡೆ ಆಗಿದೆ. ಸಿನಿಮಾದ ಮೊದಲ ಶೋ ಹಲವೆಡೆ ಈಗಾಗಲೇ ಮುಗಿದಿದೆ. ಸಿನಿಮಾ ನೋಡಿದ ಹಲವರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ಜನಕ್ಕೆ ಇಷ್ಟವಾಯ್ತೆ?

ಧನುಶ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ನಟನೆಯ ‘ಕುಬೇರ’ ಸಿನಿಮಾ ಇಂದು (ಜೂನ್ 20) ಬಿಡುಗಡೆ ಆಗಿದೆ. ಸಿನಿಮಾ ಅನ್ನು ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟ್ರೇಲರ್, ಟೀಸರ್ಗಳು ಸಖತ್ ಗಮನ ಸೆಳೆದಿದ್ದವು. ಇದೊಂದು ಸಾಮಾಜಿಕ ಕಥಾವಸ್ತುವನ್ನು ಇಟ್ಟುಕೊಂಡು ಮಾಡಿದ್ದ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾ ಬಿಡುಗಡೆಗೆ ಮುಂಚೆಯೇ ಸಖತ್ ಟ್ರೆಂಡ್ ಸೃಷ್ಟಿಸಿತ್ತು. ಇದೀಗ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
#SekharKammula #Kubera #Danush #NagarjunaAkkineni 🌟 Kuberaa – (⭐️⭐️⭐️⭐️⭐️) Danush stuns yet again! Kuberaa is a bold and intense film that showcases brilliant storytelling by director Sekhar Kammula, far beyond his usual comfort zone. pic.twitter.com/7eqtQAtrYL
— TANNER JAGADISH (@143PSPKCULT) June 20, 2025
ತನ್ನೇರ್ ಜಗದೀಶ್ ಎಂಬುವರು ‘ಕುಬೇರ’ ಸಿನಿಮಾ ವೀಕ್ಷಿಸಿ 5 ಸ್ಟಾರ್ಗಳನ್ನು ಸಿನಿಮಾಕ್ಕೆ ನೀಡಿದ್ದಾರೆ. ಧನುಶ್ ಮತ್ತೊಮ್ಮೆ ಅತ್ಯುತ್ತಮ ನಟನಾ ಪ್ರದರ್ಶನ ನೀಡಿದ್ದಾರೆ. ಶೇಖರ್ ಕಮ್ಮುಲ ತಮ್ಮ ಕಂಫರ್ಟ್ ಜೋನ್ನಿಂದ ಹೊರಗೆ ಬಂದು ಬಹಳ ಬೋಲ್ಡ್ ಆದ ಮತ್ತು ತೀಕ್ಷ್ಣವಾದ ವಿಷಯವನ್ನು ಆಯ್ಕೆ ಮಾಡಿಕೊಂಡು ಜನರ ಮುಂದೆ ತಂದಿಟ್ಟಿದ್ದಾರೆ. ಶೇಖರ್ ಕಮ್ಮುಲ ಅವರ ಕತೆ ಹೇಳುವ ರೀತಿ ಅದ್ಭುತ ಎಂದಿದ್ದಾರೆ.
Dhanush acting is top-notch Nagarjuna gaaru’s character could be more powerful and impactful Rashmika done her job, DSP’s BGM and some RR are good 👍 Sekhar Kamula could have made this much better with his narration skills nice concept, though.#Kubera pic.twitter.com/7cj9dFw2Po
— Saikiran Puppala🚩 (@Saikiran0789) June 20, 2025
ಸಾಯಿ ಕಿರಣ್ ಪಪ್ಪುಲ ಅವರು ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಧನುಶ್ ಅತ್ಯುತ್ತಮವಾಗಿ ನಟಿಸಿದ್ದಾರೆ. ನಾಗಾರ್ಜುನ ಪಾತ್ರ ಇನ್ನಷ್ಟು ಚೆನ್ನಾಗಿರಬಹುದಿತ್ತು. ರಶ್ಮಿಕಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ಮತ್ತು ರೀ ರೆಕಾರ್ಡಿಂಗ್ ಚೆನ್ನಾಗಿದೆ. ಶೇಖರ್ ಕಮ್ಮುಲ ಒಳ್ಳೆಯ ಸಿನಿಮಾ ಮಾಡಿದ್ದಾರೆ. ಸಿನಿಮಾ ಅನ್ನು ಇನ್ನಷ್ಟು ಚೆನ್ನಾಗಿ ಪ್ರೆಸೆಂಟ್ ಮಾಡುವ ಅವಕಾಶ ಅವರಿಗಿತ್ತು. ಏನೇ ಆಗಲಿ ಸಿನಿಮಾದ ಕಾನ್ಸೆಪ್ಟ್ ಚೆನ್ನಾಗಿದೆ. ನೋಡಬೇಕಾದ ಸಿನಿಮಾ’ ಎಂದಿದ್ದಾರೆ.
#Dhanush – What a Phenomenal Actor!🥹
Every Expression, Every Emotion… He Lives the Role! Words Fall Short to Describe His Brilliance🙏🔥
Truly a Gifted Gem to Indian Cinema🤞❤️#Kuberaa | #Kubera pic.twitter.com/tQSLRZhVhj
— Movies4u Official (@Movies4u_Officl) June 20, 2025
ಮೂವಿಸ್ ಫಾರ್ ಯೂ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಮಾಡಿರುವ ಟ್ವೀಟ್ನಲ್ಲಿ ಧನುಶ್ ನಟನೆಯನ್ನು ಮೆಚ್ಚಿ ಕೊಂಡಾಡಲಾಗಿದೆ. ನಟನೆಯ ವಿಷಯದಲ್ಲಿ ಧನುಶ್ ಅತ್ಯುತ್ತಮ. ಪ್ರತಿ ದೃಶ್ಯ, ಪ್ರತಿ ಎಮೋಷನ್, ಪ್ರತಿ ಎಕ್ಸ್ಪ್ರೆಷನ್ನಲ್ಲಿಯೂ ಅವರು ಪಾತ್ರವನ್ನು ಜೀವಿಸಿದ್ದಾರೆ. ಧನುಶ್, ಭಾತೀಯ ಚಿತ್ರರಂಗಕ್ಕೆ ಸಿಕ್ಕಿರುವ ವರ ಎಂದು ಬಣ್ಣಿಸಿದ್ದಾರೆ. ‘ಕುಬೇರ’ ಸಿನಿಮಾ ಖಂಡಿತ ನೋಡಬೇಕಾದ ಸಿನಿಮಾ ಎಂದು ತೀರ್ಪು ನೀಡಿದ್ದಾರೆ.
#Kuberaareview Though slightly lengthy, the film offers engaging moments throughout. Dhanush’s innocence and Nagarjuna’s character are portrayed perfectly, making it an interesting watch. Sekhar Kammula’s genuine storytelling mostly hits the mark.#Kuberaa #kubera #Dhanush pic.twitter.com/1vrD5h5dyD
— Dingu420 (@dingu420) June 19, 2025
ಡಿಂಗು 420 ಎಂಬ ಟ್ವಿಟ್ಟರ್ ಹ್ಯಾಂಡಲ್ ನಿಂದ ಮಾಡಲಾಗಿರುವ ಟ್ವೀಟ್ನಲ್ಲಿ ಸಿನಿಮಾ ತುಸು ಉದ್ದವಾಯ್ತಾದರೂ ಎಲ್ಲೂ ಸಹ ಬೋರ್ ಎನಿಸುವುದಿಲ್ಲ. ಧನುಶ್ ಅವರ ಅಮಾಯಕತೆ, ನಾಗಾರ್ಜುನ ಅವರ ಪಾತ್ರದ ಬುದ್ಧಿವಂತಿಕೆ ಇಡೀ ಸಿನಿಮಾನಲ್ಲಿ ಚೆನ್ನಾಗಿ ಮೂಡಿಬಂದಿದೆ. ಶೇಖರ್ ಕಮ್ಮುಲ ಕತೆ ಹೇಳಿರುವ ರೀತಿ ಅದ್ಭುತವಾಗಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




