ಅಮೆರಿಕದ ನೌಕಾಸೇನೆ ಅಧಿಕಾರಿಗಳ ಬಾಯಲ್ಲೂ ಬಾಲಿವುಡ್ ಹಾಡು! ಇಲ್ಲಿದೆ ವೈರಲ್ ವಿಡಿಯೋ
ಒಂದೂವರೆ ನಿಮಿಷ ಅವಧಿಯ ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವ್ಯೂಸ್ ಪಡೆದುಕೊಂಡಿದೆ. 26 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿವೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಬಾಲಿವುಡ್ ಸಿನಿಮಾ ಗೀತೆಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತವೆ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಆದರೆ ಅಮೆರಿಕದ ನೌಕಾಸೇನೆಯ ಅಧಿಕಾರಿಗಳು ಕೂಡ ಹಿಂದಿ ಚಿತ್ರದ ಹಾಡುಗಳನ್ನು ಗುನುಗುತ್ತಾರೆ ಎಂಬುದು ಅಚ್ಚರಿಯ ವಿಚಾರ. ಹೌದು, ಅಮೆರಿಕದ ನೌಕಾಸೇನೆ ಅಧಿಕಾರಿಗಳು ಶಾರುಖ್ ಖಾನ್ ಸಿನಿಮಾದ ಒಂದು ಹಾಡನ್ನು ಹಾಡುತ್ತಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಮೆರಿಕದಲ್ಲಿ ಇರುವ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಅವರ ಜೊತೆ ಇತ್ತೀಚೆಗೆ ಯುಎಸ್ ನೌಕಾಸೇನಾ ಅಧಿಕಾರಿಗಳ ಸಭೆ ನಡೆಯಿತು. ಆ ವೇಳೆ ಅಲ್ಲಿನ ಅಧಿಕಾರಿಗಳು ‘ಯೇ ಜೋ ದೇಶ್ ತೇರಾ ಹೈ…’ ಹಾಡನ್ನು ಬಹಳ ಶಿಸ್ತಿನಿಂದ ಹಾಡಿದ್ದಾರೆ. ಅವರಿಗೆ ಸಂಗೀತ ವಾದ್ಯಗಳು ಸಾಥ್ ನೀಡಿವೆ. ಇದು 2004ರಲ್ಲಿ ಬಿಡುಗಡೆಯಾದ ‘ಸ್ವದೇಸ್’ ಸಿನಿಮಾದ ಗೀತೆ. ಶಾರುಖ್ ಖಾನ್ ನಟನೆಯ ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದರು.
ನೌಕಾಸೇನೆ ಅಧಿಕಾರಿಗಳು ಈ ಹಾಡನ್ನು ಗುನುಗುತ್ತಿರುವ ವಿಡಿಯೋವನ್ನು ತರಂಜಿತ್ ಸಿಂಗ್ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಒಂದೂವರೆ ನಿಮಿಷ ಅವಧಿಯ ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವ್ಯೂಸ್ ಪಡೆದುಕೊಂಡಿದೆ. 26 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿವೆ. ಸಾವಿರಾರು ಜನರು ಇದನ್ನು ಶೇರ್ ಮಾಡಿಕೊಳ್ಳುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
‘ये वो बंधन है जो कभी टूट नहीं सकता! This is a friendship bond that cannot be broken ever.’ ????
US Navy singing a popular Hindi tune @USNavyCNO ‘s dinner last night! pic.twitter.com/hfzXsg0cAr
— Taranjit Singh Sandhu (@SandhuTaranjitS) March 27, 2021
‘ಭಾರತ ಮತ್ತು ಅಮೆರಿಕದ ಈ ಸಂಬಂಧ ಎಂದಿಗೂ ಹಾಳಾಗಲು ಸಾಧ್ಯವಿಲ್ಲ’ ಎಂದು ತರಂಜಿತ್ ಸಿಂಗ್ ಸಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿರುವುದು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಗಮನಕ್ಕೂ ಬಂದಿದೆ. ಅವರು ಕೂಡ ಇದನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ‘ಸ್ವದೇಸ್ ಎಂದೆಂದಿಗೂ ಆಳ್ವಿಕೆ ನಡೆಸುತ್ತದೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಬಾಲಿವುಡ್ ಸಿನಿಪ್ರೇಮಿಗಳು ಈ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ: ಅಣ್ಣಾವ್ರ ಹಾಡು ಹೇಳಿ ಕನ್ನಡಿಗರ ಮನ ಗೆದ್ದ ಬಾಲಿವುಡ್ ನಟ ಗೋವಿಂದ! ಹರ್ಷಿಕಾ ಜತೆಗಿನ ವಿಡಿಯೋ ವೈರಲ್