ಅಮೇಜಾನ್ ಪ್ರೈಂ ಹೊಂದಿರುವವರಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ರಿಲೀಸ್ ಆಗಲಿದೆ ಬಹುನಿರೀಕ್ಷಿತ ಶೇರ್ನಿ
Amazon Prime Video: ಅಮೇಜಾನ್ ಪ್ರೈಮ್ನಲ್ಲಿ ಶೇರ್ನಿ ಸಿನಿಮಾ ರಿಲೀಸ್ ಆಗಲಿದೆ. ಜೂನ್ ತಿಂಗಳಲ್ಲಿ ಈ ಸಿನಿಮಾ ವೀಕ್ಷಣಗೆ ಲಭ್ಯವಾಗಲಿದೆ. ಈ ಬಗ್ಗೆ ಅಮೇಜಾನ್ ಪ್ರೈಂ ತನ್ನ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಮಾಹಿತಿ ಹಂಚಿಕೊಂಡಿದೆ.
ಕೊರೊನಾ ವೈರಸ್ ನಿಯಂತ್ರಿಸಲು ಬಹುತೇಕ ರಾಜ್ಯಗಳಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಪರಿಣಾಮವಾಗಿ ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಿವೆ. ಬಿಡುಗಡೆಗೆ ಸಿದ್ಧ ಆಗಿರುವ ಎಲ್ಲ ಸಿನಿಮಾಗಳು ಚಿತ್ರಮಂದಿರದ ಬದಲಿಗೆ ಬೇರೆ ಮಾರ್ಗಗಳ ಮೂಲಕ ರಿಲೀಸ್ ಆಗಲು ಪ್ಲ್ಯಾನ್ ಮಾಡುತ್ತಿವೆ. ಇತ್ತೀಚೆಗೆ ಸಲ್ಮಾನ್ ಖಾನ್ ನಟನೆಯ ‘ರಾಧೆ’ ಚಿತ್ರ ಓಟಿಟಿ ಮೂಲಕ ಬಿಡುಗಡೆಯಾಯಿತು. ಈಗ ವಿದ್ಯಾ ಬಾಲನ್ ನಟನೆಯ ‘ಶೇರ್ನಿ’ ಸಿನಿಮಾ ಕೂಡ ಓಟಿಟಿಯತ್ತ ಮುಖ ಮಾಡುತ್ತಿದೆ.
ಅಮೇಜಾನ್ ಪ್ರೈಮ್ನಲ್ಲಿ ಶೇರ್ನಿ ಸಿನಿಮಾ ರಿಲೀಸ್ ಆಗಲಿದೆ. ಜೂನ್ ತಿಂಗಳಲ್ಲಿ ಈ ಸಿನಿಮಾ ವೀಕ್ಷಣಗೆ ಲಭ್ಯವಾಗಲಿದೆ. ಈ ಬಗ್ಗೆ ಅಮೇಜಾನ್ ಪ್ರೈಂ ತನ್ನ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಮಾಹಿತಿ ಹಂಚಿಕೊಂಡಿದೆ. ಆದರೆ ಪಕ್ಕಾ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಟಿ ಸಿರೀಸ್ ಮತ್ತು ಅಬಂಡಾನ್ಷಾ ಎಂಟರ್ಟೇನ್ಮೆಂಟ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿವೆ. ಮುಖ್ಯ ಭೂಮಿಕೆಯಲ್ಲಿ ವಿದ್ಯಾ ಬಾಲನ್ ನಟಿಸಿದ್ದು, ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಮನುಷ್ಯ ಮತ್ತು ಪ್ರಾಣಿಗಳ ಸಂಘರ್ಷದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.
ವಿದ್ಯಾ ಬಾಲನ್ ಜತೆಗೆ ಶರತ್ ಸಕ್ಸೇನಾ, ಮುಕುಲ್ ಚೆಡ್ಡಾ, ವಿಜಯ್ ರಾಜ್ ಮುಂತಾದವರು ಕೂಡ ನಟಿಸಿದ್ದಾರೆ. ‘ನ್ಯೂಟನ್’ ಸಿನಿಮಾ ಖ್ಯಾತಿಯ ಅಮಿತ್ ಮಸುರ್ಕರ್ ಅವರು ‘ಶೇರ್ನಿ’ಗೆ ನಿರ್ದೇಶನ ಮಾಡಿದ್ದಾರೆ. 2019ರಲ್ಲಿ ವಿದ್ಯಾ ಬಾಲನ್ ನಟನೆಯ ‘ಮಿಷನ್ ಮಂಗಲ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹಿಟ್ ಆಗಿತ್ತು. ಆ ಬಳಿಕ ಅವರು ನಟಿಸಿದ ‘ಶಕುಂತಲಾ ದೇವಿ’ ಸಿನಿಮಾ ಕಳೆದ ವರ್ಷ ಲಾಕ್ಡೌನ್ ಪರಿಣಾಮ ನೇರವಾಗಿ ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿ ಗಮನ ಸೆಳೆಯಿತು. ಈಗ ಅದೇ ಮಾರ್ಗವನ್ನು ಶೇರ್ನಿ ಅನುಸರಿಸುತ್ತಿದೆ.
ಲಾಕ್ಡೌನ್ನಲ್ಲಿ ಸಿನಿಪ್ರಿಯರು ಆನ್ಲೈನ್ ಮೂಲಕ ಮನರಂಜನೆ ಪಡೆಯಲು ಒಗ್ಗಿಕೊಂಡಿದ್ದಾರೆ. ಅಮೇಜಾನ್ ಪ್ರೈಮ್, ನೆಟ್ಫ್ಲಿಕ್ಸ್ ಮುಂತಾದ ಓಟಿಟಿ ಪ್ಲಾಟ್ಫಾರ್ಮ್ಗಳಿಗೆ ಚಂದದಾರರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಈ ಸಂದರ್ಭದಲ್ಲಿ ಹಲವು ಸಿನಿಮಾಗಳು ನೇರವಾಗಿ ಓಟಿಟಿ ಮೂಲಕ ಬಿಡುಗಡೆ ಆಗುತ್ತಿವೆ. ಆ ಸಾಲಿಗೆ ಶೇರ್ನಿ ಕೂಡ ಸೇರ್ಪಡೆ ಆಗುತ್ತಿದೆ.
ಇದನ್ನೂ ಓದಿ:
Salman Khan: ಕಳಪೆ ವಿಮರ್ಶೆ ಸಿಕ್ಕರೂ ದಾಖಲೆ ಬರೆದ ‘ರಾಧೆ’; ಒಟಿಟಿಯಲ್ಲಿ ಸಲ್ಮಾನ್ ಖಾನ್ ಹೊಸ ರೆಕಾರ್ಡ್