ಹೊಸ ರೊಮ್ಯಾಂಟಿಕ್ ಸಾಂಗ್ ರಿಲೀಸ್​ಗೆ ರೆಡಿ ಆದ ‘ಲೈಗರ್​’; ಇಲ್ಲಿದೆ ಟೀಸರ್

| Updated By: ರಾಜೇಶ್ ದುಗ್ಗುಮನೆ

Updated on: Aug 04, 2022 | 5:36 PM

‘ಲೈಗರ್​’ ವಿಜಯ್ ದೇವರಕೊಂಡ ಪಾಲಿಗೆ ಅತಿ ಮುಖ್ಯವಾದ ಚಿತ್ರ. ಈ ಸಿನಿಮಾದಿಂದ ಅವರು ಬಾಲಿವುಡ್​​ಗೆ ಬಡ್ತಿ ಪಡೆಯುತ್ತಿದ್ದಾರೆ. ಸಿದ್ಧತೆಗಳನ್ನು ಮಾಡಿಕೊಂಡು ವಿಜಯ್ ದೇವರಕೊಂಡ ಅವರು ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ‘

ಹೊಸ ರೊಮ್ಯಾಂಟಿಕ್ ಸಾಂಗ್ ರಿಲೀಸ್​ಗೆ ರೆಡಿ ಆದ ‘ಲೈಗರ್​’; ಇಲ್ಲಿದೆ ಟೀಸರ್
ಅನನ್ಯಾ ಪಾಂಡೆ-ವಿಜಯ್ ದೇವರಕೊಂಡ
Follow us on

ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಲೈಗರ್​’ ಸಿನಿಮಾ  ನಿತ್ಯ ಹೊಸ ಹೊಸ ಅಪ್​​​ಡೇಟ್​​ಗಳೊಂದಿಗೆ ಜನರನ್ನು ತಲುಪುವ ಕೆಲಸ ಮಾಡುತ್ತಿದೆ. ಈ ಸಿನಿಮಾದ ಹಲವು ಸಾಂಗ್​ಗಳು ಈಗಾಗಲೇ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿವೆ. ಇತ್ತೀಚೆಗೆ ಬಿಡುಗಡೆ ಆದ ‘ಲೈಗರ್’ ಚಿತ್ರದ (Liger Movie) ಟ್ರೇಲರ್ ಕೂಡ ಸದ್ದು ಮಾಡಿದೆ. ಈಗ ‘ಆಫತ್​..’ ಹೆಸರಿನ ಹೊಸ ರೊಮ್ಯಾಂಟಿಕ್ ಸಾಂಗ್ ರಿಲೀಸ್​ಗೆ ರೆಡಿ ಇದೆ. ಈ ಹಾಡನ್ನು ಬಿಡುಗಡೆ ಮಾಡುವುದಕ್ಕೂ ಮೊದಲು ಚಿತ್ರತಂಡ ಟೀಸರ್ ಒಂದನ್ನು ಬಿಡುಗಡೆ ಮಾಡಿದೆ.

‘ಲೈಗರ್​’ ವಿಜಯ್ ದೇವರಕೊಂಡ ಪಾಲಿಗೆ ಅತಿ ಮುಖ್ಯವಾದ ಚಿತ್ರ. ಈ ಸಿನಿಮಾದಿಂದ ಅವರು ಬಾಲಿವುಡ್​​ಗೆ ಬಡ್ತಿ ಪಡೆಯುತ್ತಿದ್ದಾರೆ. ಬೇರೆ ಚಿತ್ರರಂಗಕ್ಕೆ ಕಾಲಿಡಬೇಕು ಎಂದರೆ ಅದಕ್ಕೆ ಒಂದಷ್ಟು ಸಿದ್ಧತೆ ಬೇಕು. ಆ ಸಿದ್ಧತೆಗಳನ್ನು ಮಾಡಿಕೊಂಡು ವಿಜಯ್ ದೇವರಕೊಂಡ ಅವರು ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ‘ಲೈಗರ್’ ಚಿತ್ರಕ್ಕೆ ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಕಾರಣದಿಂದಲೂ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈಗ ರಿಲೀಸ್ ಆಗಿರುವ ‘ಆಫತ್​..’ ಹಾಡಿನ ಟೀಸರ್ ಸದ್ದು ಮಾಡುತ್ತಿದೆ.

ಇದನ್ನೂ ಓದಿ
‘ಇದು ಕ್ರಾಸ್ ಬ್ರೀಡ್’; ಆ್ಯಕ್ಷನ್​ ಮೂಲಕ ‘ಲೈಗರ್’ ಟ್ರೇಲರ್​ನಲ್ಲಿ ಮಿಂಚಿದ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಜತೆ ಡೇಟ್ ಮಾಡಲು ಸಾರಾ-ಜಾನ್ವಿ ನಡುವೆ ಸ್ಪರ್ಧೆ
‘ಅಕ್ಡಿ ಪಕ್ಡಿ’ ಸಾಂಗ್ ಮೂಲಕ ಗಮನ ಸೆಳೆದ ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ
Vijay Devarakonda: ಹುಡುಗಿ ಬೆನ್ನಲ್ಲಿ ವಿಜಯ್​ ದೇವರಕೊಂಡ ಟ್ಯಾಟೂ; ನೆಚ್ಚಿನ ಹೀರೋ ಮುಂದೆ ಯುವತಿ ಆನಂದಭಾಷ್ಪ

‘ಆಫತ್​..’ ಲಿರಿಕಲ್ ವಿಡಿಯೋ ಶುಕ್ರವಾರ ಸಂಜೆ (ಜುಲೈ 5) ಬಿಡುಗಡೆ ಆಗಲಿದೆ. ಅದಕ್ಕೂ ಮೊದಲು ಟೀಸರ್ ರಿಲೀಸ್ ಮಾಡುವ ಮೂಲಕ ಈ ಹಾಡಿನ ಕುತೂಹಲ ಹೆಚ್ಚಿಸಲಾಗಿದೆ. ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯಾ ಪಾಂಡೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಕಥಾ ನಾಯಕನನ್ನು ಕಾಡಿಸುವ ಹುಡುಗಿಯಾಗಿ ಅನನ್ಯಾ ಪಾಂಡೆ ಟೀಸರ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬೇರೆ ನಟರಿಗಿಂತ ದೇವರಕೊಂಡ ಬಗ್ಗೆ ಫ್ಯಾನ್ಸ್​ಗೆ ಹೆಚ್ಚು ಕ್ರೇಜ್​; ‘ಲೈಗರ್’ ಇವೆಂಟ್​ನಲ್ಲಿ ನಡೆಯಿತು ಅಚ್ಚರಿಯ ಘಟನೆ

ಆಗಸ್ಟ್ 25ರಂದು ‘ಲೈಗರ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ರಿಲೀಸ್​ಗೂ ಮುನ್ನ ಇಡೀ ಚಿತ್ರ ತಂಡ ನಾನಾ ನಗರಗಳಿಗೆ ತೆರಳಿ ಪ್ರಚಾರ ಕಾರ್ಯದಲ್ಲಿ ಭಾಗಿ ಆಗಲಿದೆ. ಬೆಂಗಳೂರು, ದೆಹಲಿ ಮೊದಲಾದ ಕಡೆ ವಿಜಯ್ ದೇವರಕೊಂಡ ಆ್ಯಂಡ್ ಟೀಂ ಪ್ರಮೋಷನ್ ಮಾಡಲಿದೆ. ಈ ಮೂಲಕ ಚಿತ್ರದ ಬಿಡುಗಡೆಗೂ ಮುನ್ನ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲು ಟೀಂ ನೀಲನಕ್ಷೆ ರೆಡಿ ಮಾಡಿಕೊಂಡಿದೆ. ಈ ಚಿತ್ರಕ್ಕೆ ಕರಣ್ ಜೋಹರ್ ಮೊದಲಾದವರು ಬಂಡವಾಳ ಹೂಡಿದ್ದಾರೆ.

Published On - 5:33 pm, Thu, 4 August 22