ಬೇರೆ ನಟರಿಗಿಂತ ದೇವರಕೊಂಡ ಬಗ್ಗೆ ಫ್ಯಾನ್ಸ್​ಗೆ ಹೆಚ್ಚು ಕ್ರೇಜ್​; ‘ಲೈಗರ್’ ಇವೆಂಟ್​ನಲ್ಲಿ ನಡೆಯಿತು ಅಚ್ಚರಿಯ ಘಟನೆ

Vijay Deverakonda: ‘ಲೈಗರ್’ ಚಿತ್ರದ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಭಾರಿ ನಿರೀಕ್ಷೆ ಸೃಷ್ಟಿ ಆಗಿದೆ. ವಿಜಯ್​ ದೇವರಕೊಂಡ ಅವರಿಗೆ ಇರುವ ಫ್ಯಾನ್​ ಫಾಲೋಯಿಂಗ್​ ಹೆಚ್ಚಿದೆ.

ಬೇರೆ ನಟರಿಗಿಂತ ದೇವರಕೊಂಡ ಬಗ್ಗೆ ಫ್ಯಾನ್ಸ್​ಗೆ ಹೆಚ್ಚು ಕ್ರೇಜ್​; ‘ಲೈಗರ್’ ಇವೆಂಟ್​ನಲ್ಲಿ ನಡೆಯಿತು ಅಚ್ಚರಿಯ ಘಟನೆ
ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ
TV9kannada Web Team

| Edited By: Madan Kumar

Aug 01, 2022 | 1:37 PM

ನಟ ವಿಜಯ್​ ದೇವರಕೊಂಡ (Vijay Devarakonda) ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರು ನಟಿಸಿರುವ ‘ಲೈಗರ್​’ ಸಿನಿಮಾ ಹಲವು ಭಾಷೆಗಳಲ್ಲಿ ರಿಲೀಸ್​ ಆಗುತ್ತಿದೆ. ಈ ಚಿತ್ರದ ಮೂಲಕ ಅವರು ನೇರವಾಗಿ ಬಾಲಿವುಡ್​ಗೆ ಎಂಟ್ರಿ ಪಡೆಯುತ್ತಿದ್ದಾರೆ. ಈಗಾಗಲೇ ‘ಲೈಗರ್​’ ಬಗ್ಗೆ ಭಾರಿ ಹೈಪ್​ ಸೃಷ್ಟಿ ಆಗಿದೆ. ಉತ್ತರ ಭಾರತದಲ್ಲೂ ವಿಜಯ್​ ದೇವರಕೊಂಡ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಿನಿಮಾಗಳನ್ನು ಅಲ್ಲಿನ ಮಂದಿ ಇಷ್ಟಪಟ್ಟು ನೋಡುತ್ತಾರೆ. ಇತ್ತೀಚೆಗೆ ‘ಲೈಗರ್​’ ಸಿನಿಮಾ (Liger Movie) ತಂಡದವರು ಮುಂಬೈನ ಅಭಿಮಾನಿಗಳನ್ನು ಭೇಟಿಯಾದರು. ಈ ವೇಳೆ ಏನೆಲ್ಲ ನಡೆಯಿತು ಎಂಬುದನ್ನು ನಿರೂಪಕ ನಿತಿನ್​ ಕಕ್ಕರ್​ ಅವರು ವಿವರಿಸಿದ್ದಾರೆ. ಟಾಲಿವುಡ್​ನ (Tollywood) ಬೇರೆ ಹೀರೋಗಳಿಗೆ ಹೋಲಿಸಿದರೆ ವಿಜಯ್​ ದೇವರಕೊಂಡ ಬಗ್ಗೆ ಕ್ರೇಜ್​ ಹೇಗಿದೆ ಎಂಬುದನ್ನು ನಿತಿನ್​ ವಿವರಿಸಿ​ದಾರೆ.

ನವಿ ಮುಂಬೈನಲ್ಲಿ ‘ಲೈಗರ್​’ ಸಿನಿಮಾದ ಫ್ಯಾನ್​ ಮೀಟ್​ ನಡೆಯಿತು. ಅದನ್ನು ನಿತಿನ್​ ಕಕ್ಕರ್​ ನಡೆಸಿಕೊಟ್ಟರು. ಆ ವೇಳೆ ಅಭಿಮಾನಿಗಳು ತೋರಿದ ಪ್ರೀತಿಯ ಬಗ್ಗೆ ನಿತಿನ್​ ಮಾಹಿತಿ ಹಂಚಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಈ ಕುರಿತು ಒಂದು ವಿಡಿಯೋ ಪೋಸ್ಟ್​ ಮಾಡಿದ್ದಾರೆ. ವಿಜಯ್​ ದೇವರಕೊಂಡ ಅಭಿಮಾನಿಗಳ ವಲಯದಲ್ಲಿ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

‘ನಾನು ಈಗತಾನೇ ನವಿ ಮುಂಬೈನಲ್ಲಿ ಲೈಗರ್​ ಚಿತ್ರದ ಕಾರ್ಯಕ್ರಮ ನಡೆಸಿಕೊಟ್ಟು ಬಂದೆ. ಈ ವಿಚಾರವನ್ನು ನಾನು ನಿಮಗೆ ಹೇಳಲೇ ಬೇಕು. ವಿಜಯ್​ ದೇವರಕೊಂಡ ಅವರನ್ನು ಕಂಡು ಜನರು ಹುಚ್ಚೆದ್ದು ಕುಣಿದರು. ಈ ರೀತಿ ಆಗಿದ್ದನ್ನು ನಾನು ಈ ಮೊದಲು ನೋಡಿಯೇ ಇಲ್ಲ. ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಾಗಲೂ ಇಂಥ ಕ್ರೇಜ್​ ನೋಡಿರಲಿಲ್ಲ’ ಎಂದು ನಿತಿನ್​ ಕಕ್ಕರ್​ ಹೇಳಿದ್ದಾರೆ.

‘ಪ್ರಭಾಸ್​, ಅಲ್ಲು ಅರ್ಜುನ್​, ಜ್ಯೂ. ಎನ್​ಟಿಆರ್, ರಾಮ್​ ಚರಣ್​​ ಮುಂತಾದ ನಟರಿಗಾಗಿ ನಾನು ಕಾರ್ಯಕ್ರಮಗಳನ್ನು ನಿರೂಪಿಸಿದ್ದೇನೆ. ಆದರೆ ವಿಜಯ್​ ದೇವರಕೊಂಡ ಅವರ ಬಗ್ಗೆ ಜನರು ಇಟ್ಟುಕೊಂಡಿರುವ ಕ್ರೇಜ್​ ಬೇರೆ ಯಾವುದೇ ನಟರಿಗೂ ಇಲ್ಲ. ಎಲ್ಲ ಅಭಿಮಾನಿಗಳಿಗೂ ಈ ಕಾರ್ಯಕ್ರಮ ನೋಡುವ ಅವಕಾಶ ಸಿಕ್ಕಿತ್ತು. ಇನ್ನೇನು ವಿಜಯ್​ ದೇವರಕೊಂಡ ಅವರು ವೇದಿಕೆಯಲ್ಲಿ ಒಂದು ಪರ್ಫಾರ್ಮೆನ್ಸ್​ ನೀಡುವವರಿದ್ದರು. ಆದರೆ ಜನರು ವೇದಿಕೆಗೆ ನುಗ್ಗಲು ಶುರುಮಾಡಿದರು. ಹಾಗಾಗಿ ನಾವು ಕಾರ್ಯಕ್ರಮವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು’ ಎಂದು ನಿತಿನ್​ ಕಕ್ಕರ್​ ಹೇಳಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada