ವಿಜಯ್ ದೇವರಕೊಂಡ ಒಟ್ಟೂ ಆಸ್ತಿ ಎಷ್ಟು? ಕಡಿಮೆ ಸಮಯದಲ್ಲಿ ಭರ್ಜರಿ ಹಣ ಮಾಡಿದ ನಟ
ಇತ್ತೀಚೆಗೆ ವಿಜಯ್ ದೇವರಕೊಂಡಗೆ ದೊಡ್ಡ ಗೆಲುವು ಸಿಕ್ಕಿಲ್ಲ. 2020ರಲ್ಲಿ ರಿಲೀಸ್ ಆದ ‘ವರ್ಲ್ಡ್ ಫೇಮಸ್ ಲವರ್’ ಸಾಧಾರಣ ಹಿಟ್ ಎನಿಸಿಕೊಂಡಿತು. ‘ಲೈಗರ್’ ಚಿತ್ರವಂತೂ ಹೇಳ ಹೆಸರಿಲ್ಲದೇ ಸೋತಿತು. ಸದ್ಯ ಅವರು ‘ಖುಷಿ’ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ.
ನಟ ವಿಜಯ್ ದೇವರಕೊಂಡ (Vijay Devarakonda) ಅವರು ಸದ್ಯ ‘ಖುಷಿ’ ಸಿನಿಮಾ (Kushi Movie) ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಸೆಪ್ಟೆಂಬರ್ 1ರಂದು ಈ ಚಿತ್ರ ತೆಲುಗು, ಕನ್ನಡ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಈ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡುವ ಕೆಲಸ ಆಗುತ್ತಿದೆ. ಸಮಂತಾ ರುತ್ ಪ್ರಭು ಅವರು ಈ ಚಿತ್ರಕ್ಕೆ ನಾಯಕಿ. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ. ಹಲವು ಹಿಟ್ ಸಿನಿಮಾಗಳನ್ನು ನೀಡಿರೋ ವಿಜಯ್ ದೇವರಕೊಂಡ ಅವರ ಒಟ್ಟೂ ಆಸ್ತಿ ಎಷ್ಟು? ಅವರು ಪ್ರತಿ ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ವಿಜಯ್ ದೇವರಕೊಂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2011ರಲ್ಲಿ. ‘ನುವ್ವಿಲಾ’ ಅವರ ನಟನೆಯ ಮೊದಲ ಸಿನಿಮಾ. ಆ ಬಳಿಕ ಅವರು ಸಾಕಷ್ಟು ಸೈಕಲ್ ತುಳಿಯಬೇಕಾಯಿತು. 2016ರಲ್ಲಿ ರಿಲೀಸ್ ಆದ ‘ಪೆಳ್ಳಿ ಚೂಪುಲು’ ಚಿತ್ರ ಅವರಿಗೆ ಯಶಸ್ಸು ತಂದುಕೊಟ್ಟಿತು. 2017ರಲ್ಲಿ ಬಿಡುಗಡೆ ಆದ ‘ಅರ್ಜುನ್ ರೆಡ್ಡಿ’ ಸಿನಿಮಾ ವಿಜಯ್ ಅವರ ವೃತ್ತಿ ಜೀವನವನ್ನೇ ಬದಲಿಸಿಬಿಟ್ಟಿತು. ರಶ್ಮಿಕಾ ಜೊತೆ ನಟಿಸಿದ ‘ಗೀತ ಗೋವಿಂದಂ’ ಸಿನಿಮಾ ಕೂಡ ದೊಡ್ಡ ಮಟ್ಟದ ಹಿಟ್ ಆಯಿತು.
ಇತ್ತೀಚೆಗೆ ವಿಜಯ್ ದೇವರಕೊಂಡಗೆ ದೊಡ್ಡ ಗೆಲುವು ಸಿಕ್ಕಿಲ್ಲ. 2020ರಲ್ಲಿ ರಿಲೀಸ್ ಆದ ‘ವರ್ಲ್ಡ್ ಫೇಮಸ್ ಲವರ್’ ಸಾಧಾರಣ ಹಿಟ್ ಎನಿಸಿಕೊಂಡಿತು. ‘ಲೈಗರ್’ ಚಿತ್ರವಂತೂ ಹೇಳ ಹೆಸರಿಲ್ಲದೇ ಸೋತಿತು. ಸದ್ಯ ಅವರು ‘ಖುಷಿ’ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ.
ಪ್ರತಿ ಸಿನಿಮಾಗೆ ಎಷ್ಟು ಕೋಟಿ?
ವಿಜಯ್ ದೇವರಕೊಂಡ ಈಗ ಬೇಡಿಕೆಯ ಹೀರೋ. ಅವರ ಕಾಲ್ಶೀಟ್ ಪಡೆಯಬೇಕು ಎಂದು ಅನೇಕ ನಿರ್ಮಾಪಕರು ಕಾದು ನಿಂತಿರುತ್ತಾರೆ. ವಿಜಯ್ ದೇವರಕೊಂಡ ಅವರು ಪ್ರತಿ ಚಿತ್ರಕ್ಕೆ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ‘ಲೈಗರ್’ ಚಿತ್ರಕ್ಕೆ ಅವರು ಇನ್ನೂ ಹೆಚ್ಚಿನ ಸಂಭಾವನೆ ಪಡೆದುಕೊಂಡಿದ್ದರು ಎನ್ನಲಾಗಿದೆ. ಈ ಚಿತ್ರಕ್ಕೆ ಅವರು ಪಡೆದಿದ್ದು 35 ಕೋಟಿ ರೂಪಾಯಿ ಎನ್ನಲಾಗಿದೆ. ಈ ಚಿತ್ರಕ್ಕಾಗಿ ಅವರು ಮೂರು ವರ್ಷ ಮುಡಿಪಿಟ್ಟಿದ್ದರು. ಆದರೆ, ಸಿನಿಮಾ ಸೋತಿತು.
ವಿಜಯ್ ಆಸ್ತಿ
ವಿಜಯ್ ದೇವರಕೊಂಡ ಅವರ ಆಸ್ತಿ ಮೊತ್ತ 65 ಕೋಟಿ ರೂಪಾಯಿ. ಬೇರೆ ಬೇರೆ ಕಡೆಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಅನೇಕ ಬ್ರ್ಯಾಂಡ್ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಇದರಿಂದ ಅವರಿಗೆ ಕೋಟಿ ಕೋಟಿ ಹಣ ಬರುತ್ತಿದೆ.
ವಿಜಯ್ ಕಾರ್ ಕಲೆಕ್ಷನ್
ವಿಜಯ್ ದೇವರಕೊಂಡ ಬಳಿ ಒಳ್ಳೆಯ ಕಾರ್ ಕಲೆಕ್ಷನ್ ಇದೆ. ಫೋರ್ಡ್ ಮಸ್ಟಾಂಗ್, ಬಿಎಂಡಬ್ಲ್ಯೂ 5 ಸೀರಿಸ್ 520, ಬೆಂಜ್ ಜಿಎಲ್ಎಸ್ 350, ಆಡಿ ಕ್ಯೂ 7 ಕಾರುಗಳು ವಿಜಯ್ ದೇವರಕೊಂಡ ಬಳಿ ಇದೆ.
ಇದನ್ನೂ ಓದಿ: ‘ಆ ಘಟನೆ ಬಳಿಕ ಸಮಂತಾ ನನ್ನ ಜೊತೆ ಮಾತನಾಡುವುದನ್ನೇ ನಿಲ್ಲಿಸಿದರು’; ವಿಜಯ್ ದೇವರಕೊಂಡ
ಮಲ್ಟಿಪ್ಲೆಕ್ಸ್
ವಿಜಯ್ ದೇವರಕೊಂಡ ಅವರು ತಮ್ಮದೇ ಮಲ್ಟಿಪ್ಲೆಕ್ಸ್ ಹೊಂದಿದ್ದಾರೆ. ಹೌದು ಹೈದರಾಬಾದ್ ಹೊರಭಾಗದಲ್ಲಿ ಎವಿಡಿ ಸಿನಿಮಾಸ್ ಇದೆ. ಎವಿಡಿ ಎಂದರೆ ಏಷಿಯನ್ ವಿಜಯ್ ದೇವರಕೊಂಡ ಎಂದರ್ಥ. ಏಷಿಯನ್ ಸಿನಿಮಾಸ್ ಜೊತೆ ಅವರು ಸಹಯೋಗ ಬೆಳೆಸಿದ್ದಾರೆ.
ರಶ್ಮಿಕಾ ಜೊತೆ ಸುತ್ತಾಟ
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸಾಕಷ್ಟು ಸುತ್ತಾಟ ನಡೆಸುತ್ತಿದ್ದಾರೆ. ಈ ಕಾರಣಕ್ಕೂ ಇಬ್ಬರೂ ಸುದ್ದಿ ಆಗಿದ್ದಿದೆ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ಇವರು ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ