ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟ ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಅವರು ಅಭಿನಯದ ‘ಕಿಂಗ್ಡಮ್’ ಸಿನಿಮಾದ ಬಿಡುಗಡೆ ಮೇ 30 ರಿಂದ ಜುಲೈ 4ಕ್ಕೆ ಮುಂದೂಡಲಾಗಿದೆ. ಭಾರತ-ಪಾಕಿಸ್ತಾನ ಉದ್ವಿಗ್ನತೆ ಮತ್ತು ಐಪಿಎಲ್ ವೇಳಾಪಟ್ಟಿ ಬದಲಾವಣೆಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಈ ನಿರ್ಧಾರದಿಂದ ಅಭಿಮಾನಿಗಳಲ್ಲಿ ಬೇಸರ ಮೂಡಿದೆ.

ವಿಜಯ್ ದೇವರಕೊಂಡ (Vijay Devarakonda) ಅಭಿನಯದ ‘ಕಿಂಗ್ಡಮ್’ ಸಿನಿಮಾ ಮೇ 30ರಂದು ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ದಿನಾಂಕ ಮುಂದಕ್ಕೆ ಹೋಗಿದೆ. ಈ ಬಗ್ಗೆ ವಿಜಯ್ ದೇವರಕೊಂಡ ತಂಡದವರು ಅಧಿಕೃತ ಘೋಷಣೆ ಮಾಡಿದ್ದಾರೆ. ಸದ್ಯ ಇರುವ ಪರಿಸ್ಥಿತಿಯೇ ಇದಕ್ಕೆ ಕಾರಣ ಎಂದು ತಂಡದವರು ಹೇಳಿಕೊಂಡಿದ್ದಾರೆ. ಸದ್ಯ ಸಿನಿಮಾ ತಂಡದವರು ತೆಗೆದುಕೊಂಡ ಈ ನಿರ್ಧಾರ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ.
ವಿಜಯ್ ದೇವರಕೊಂಡ ಅವರ ನಟನೆಯ ಕೊನೆಯ ಸಿನಿಮಾ ‘ಫ್ಯಾಮಿಲಿ ಸ್ಟಾರ್’. ಈ ಚಿತ್ರ ಅಂದುಕೊಂಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಈ ಕಾರಣಕ್ಕೆ ಬಹಳ ಎಚ್ಚರಿಕೆಯಿಂದ ಅವರು ಹೊಸ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ಕಿಂಗ್ಡಮ್’ ಹೆಸರಿನ ಟೈಟಲ್ ಇಡಲಾಗಿದೆ. ಈ ಚಿತ್ರವು ಮೇ 30ರಂದು ರಿಲೀಸ್ ಆಗಬೇಕಿತ್ತು. ಆದರೆ, ಭಾರತ ಹಾಗೂ ಪಾಕ್ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ಕಾರಣಕ್ಕೆ ಸಿನಿಮಾ ರಿಲೀಸ್ ಮುಂದಕ್ಕೆ ತಳ್ಳಲ್ಪಟ್ಟಿದೆ.
‘ಮೇ 30ರಂದು ರಿಲೀಸ್ ಆಗಬೇಕಿದ್ದ ಕಿಂಗ್ಡಮ್ ಸಿನಿಮಾ ಜುಲೈ 4ಕ್ಕೆ ಮರು ನಿಗದಿ ಆಗಿದೆ. ನಾವು ಅಂದುಕೊಂಡ ದಿನಾಂಕಕ್ಕೆ ಸಿನಿಮಾ ರಿಲೀಸ್ ಮಾಡಲು ಪ್ರಯತ್ನಿಸಿದೆವು. ಆದರೆ, ದೇಶದಲ್ಲಿ ಉಂಟಾದ ಸದ್ಯದ ಪರಿಸ್ಥಿತಿಯಿಂದಾಗಿ ಸಿನಿಮಾ ಪ್ರಚಾರ ಮಾಡಲು ಹಾಗೂ ಸಂಭ್ರಮಿಸಲು ಅವಕಾಶ ಇಲ್ಲ. ಈ ಕಾರಣಕ್ಕೆ ರಿಲೀಸ್ನ ಮುಂದಕ್ಕೆ ಹಾಕಿಕೊಳ್ಳಬೇಕಿದೆ’ ಎಂದು ತಂಡದವರು ತಿಳಿಸಿದ್ದಾರೆ.
#Kingdom July 04, 2025.
Will see you in the cinemas 🙂 pic.twitter.com/uQUjpngygD
— Vijay Deverakonda (@TheDeverakonda) May 14, 2025
‘ಈ ನಿರ್ಧಾರದಿಂದ ನಾವು ಒಳ್ಳೆಯ ರೀತಿಯಲ್ಲಿ ಕಿಂಗ್ಡಮ್ ಚಿತ್ರವನ್ನು ಜನರ ಮುಂದೆ ಇಡಬಹುದಾಗಿದೆ. ನಾವು ನಿಮ್ಮ ಬೆಂಬಲ ಹಾಗೂ ಪ್ರೀತಿಯನ್ನು ಗೌರವಿಸುತ್ತೇವೆ. ಈ ಬದಲಾವಣೆ ತರಲು ಸಾಧ್ಯವಾದ ನಿರ್ಮಾಪಕರಾದ ದಿಲ್ ರಾಜ್ ಹಾಗೂ ನಿತೀನ್ ಅವರಿಗೆ ಧನ್ಯವಾದ’ ಎಂದು ಬರೆಯಲಾಗಿದೆ.
ಇದನ್ನೂ ಓದಿ: ಬ್ರ್ಯಾಂಡ್ ಮಾರಾಟಾದಿಂದ ಬರುವ ಹಣದ ಒಂದು ಭಾಗ ಭಾರತೀಯ ಸೇನೆಗೆ; ವಿಜಯ್ ದೇವರಕೊಂಡ ಘೋಷಣೆ
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮೇ 25ರಂದು ಐಪಿಎಲ್ ಫಿನಾಲೆ ನಡೆಯುತ್ತಿತ್ತು. ಆದರೆ, ಈ ದಿನಾಂಕ ಈಗ ಮುಂದಕ್ಕೆ ಹೋಗಿದೆ. ಪಾಕ್ ಹಾಗೂ ಭಾರತದ ಮಧ್ಯೆ ಇರುವ ಯುದ್ಧಭೀತಿಯಿಂದ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿತ್ತು. ಐಪಿಎಲ್ ವೇಳಾಪಟ್ಟಿ ಬದಲಾವಣೆ ಕೂಡ ಸಿನಿಮಾ ಮುಂದಕ್ಕೆ ಹೋಗಲು ಕಾರಣ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








