
ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಟಾಲಿವುಡ್ನ ಯಶಸ್ವಿ ಜೋಡಿ. ಇಬ್ಬರೂ ಒಟ್ಟಿಗೆ ನಟಿಸಿರುವ ‘ಗೀತಾ ಗೋವಿಂದಂ’ ಸೂಪರ್ ಹಿಟ್ ಆದರೆ ‘ಡಿಯರ್ ಕಾಮ್ರೆಡ್’ ಸಹ ಯಶಸ್ವಿ ಆಗಿತ್ತು. ನಟಿಸಿದ ಮೊದಲ ಸಿನಿಮಾದಿಂದಲೂ ಈ ಜೋಡಿ ಆತ್ಮೀಯವಾಗಿತ್ತು. ಆರಂಭದಲ್ಲಿ ತಾವು ಒಳ್ಳೆಯ ಗೆಳೆಯರು ಎಂದು ಹೇಳಿಕೊಂಡಿದ್ದ ರಶ್ಮಿಕಾ ಮತ್ತು ವಿಜಯ್, ವರ್ಷಗಳು ಕಳೆದಂತೆ ಗೆಳೆತನವನ್ನು ಪ್ರೀತಿಯಾಗಿ ಬದಲಾಯಿಸಿಕೊಂಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದಾರೆ ರಶ್ಮಿಕಾ ಮತ್ತು ವಿಜಯ್. ರಶ್ಮಿಕಾ ಅಂತೂ ಕಳೆದ ಕೆಲ ವರ್ಷಗಳಿಂದ ಎಲ್ಲ ಹಬ್ಬಗಳನ್ನೂ ವಿಜಯ್ ಅವರ ಮನೆಯಲ್ಲೇ ಆಚರಿಸುತ್ತಿದ್ದಾರೆ. ಈ ಇಬ್ಬರೂ ಅಕ್ಟೋಬರ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಇದೀಗ ಈ ಜೋಡಿಯ ಮದುವೆ ಸುದ್ದಿ ಹರಿದಾಡುತ್ತಿದೆ. ಇಬ್ಬರ ಮದುವೆ ಮುಂದಿನ ವರ್ಷ ನಡೆಯಲಿದ್ದು, ಮದುವೆ ಎಲ್ಲಿ ನಡೆಯಲಿದೆ, ಯಾವಾಗ ನಡೆಯಲಿದೆ ಎಂದು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರುಗಳು ತಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಜೋಡಿಯ ವಿವಾಹ ಫೆಬ್ರವರಿ ತಿಂಗಳಲ್ಲಿ ಬಲು ಅದ್ಧೂರಿಯಾಗಿ ನಡೆಯಲಿದೆ. ರಾಜಸ್ಥಾನದ ಜೈಪುರದಲ್ಲಿ ಐಶಾರಾಮಿ ಅರಮನೆಯಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದಾರೆ ರಶ್ಮಿಕಾ ಮತ್ತು ವಿಜಯ್. ಚಿತ್ರರಂಗದ ಹಲವು ಗಣ್ಯರು, ಎರಡೂ ಕಡೆಯ ಕುಟುಂಬದವರು ಮದುವೆಗೆ ಹಾಜರಾಗಲಿದ್ದಾರೆ. ಜೈಪುರದಲ್ಲಿ ಅದ್ಧೂರಿ ವಿವಾಹದ ಬಳಿಕ ಹೈದರಾಬಾದ್ನಲ್ಲಿ ನಿಶ್ಚಿತಾರ್ಥವನ್ನೂ ಸಹ ಮಾಡಿಕೊಳ್ಳಲಿದ್ದಾರೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಆಯ್ತು ಈಗ ಶ್ರೀಲೀಲಾಗೂ ಶುರುವಾಯ್ತು ಕಾಟ
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ಸಹ ಮದುವೆಗೆ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಇಬ್ಬರೂ ಸಹ ಮದುವೆ ಶಾಪಿಂಗ್ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ, ತಮ್ಮ ಕೆಲವು ಆಪ್ತ ಗೆಳತಿಯರೊಟ್ಟಿಗೆ ಶ್ರೀಲಂಕಾಕ್ಕೆ ತೆರಳಿ ಬ್ಯಾಚುಲರ್ ಪಾರ್ಟಿ ಸಹ ಮಾಡಿದ್ದಾರೆ. ತಮ್ಮ ಬ್ಯಾಚುಲರ್ ಪಾರ್ಟಿಯ ಚಿತ್ರಗಳನ್ನು ಸಹ ರಶ್ಮಿಕಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಇನ್ನು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ಮತ್ತೆ ತೆರೆ ಮೇಲೆ ಸಹ ಕಾಣಿಸಿಕೊಳ್ಳಲಿದ್ದಾರೆ. 2019 ರಲ್ಲಿ ‘ಡಿಯರ್ ಕಾಮ್ರೆಡ್’ ಸಿನಿಮಾನಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು, ಅದಾದ ಬಳಿಕ ಒಟ್ಟಿಗೆ ನಟಿಸಿರಲಿಲ್ಲ. ಇದೀಗ ‘ಗೀತ ಗೋವಿಂದಂ 2’ ಸಿನಿಮಾನಲ್ಲಿ ಮತ್ತೊಮ್ಮೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ