ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಪೈಕಿ ಯಾರು ಶ್ರೀಮಂತರು? ಇಲ್ಲಿದೆ ವಿವರ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26 ರಂದು ಉದಯಪುರದಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಅವರ ಆಮಂತ್ರಣಪತ್ರ ವೈರಲ್ ಆದ ಬೆನ್ನಲ್ಲೇ, ಈ ತಾರಾ ಜೋಡಿಯ ಒಟ್ಟು ಆಸ್ತಿಯ ಬಗ್ಗೆ ಚರ್ಚೆ ಶುರುವಾಗಿದೆ. ವಿಜಯ್ ಅವರ 70 ಕೋಟಿ ಮತ್ತು ರಶ್ಮಿಕಾ ಅವರ 60 ಕೋಟಿ ಸೇರಿದಂತೆ ಒಟ್ಟು 130 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಪೈಕಿ ಯಾರು ಶ್ರೀಮಂತರು? ಇಲ್ಲಿದೆ ವಿವರ
ವಿಜಯ್-ರಶ್ಮಿಕಾ

Updated on: Feb 19, 2026 | 1:08 PM

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ಫೆಬ್ರವರಿ 26ರಂದು ಮದುವೆ ಆಗೋದು ಬಹುತೇಕ ಖಚಿತ ಆಗಿದೆ. ಅವರ ಆಮಂತ್ರಣಪತ್ರ ವೈರಲ್ ಆಗಿ ಗಮನ ಸೆಳೆದಿದೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಉದಯಪುರದಲ್ಲಿ ಮದುವೆ ನಡೆಯಲಿದೆಯಂತೆ. ಆದರೆ, ಯಾವ ಜಾಗದಲ್ಲಿ ವಿವಾಹ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಿರುವಾಗಲೇ ದಂಪತಿಗಳ ಒಟ್ಟೂ ಆಸ್ತಿ ಎಷ್ಟು ಎಂಬ ವಿಷಯದ ಬಗ್ಗೆ ಚರ್ಚೆ ನಡೆದಿದೆ.

ವಿಜಯ್ ದೇವರಕೊಂಡ ಅವರು ಕಷ್ಟದಿಂದ ಸಿನಿಮಾ ರಂಗಕ್ಕೆ ಬಂದವರು. ಈಗ ಅವರು ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿದ್ದಾರೆ. ಜುಬ್ಲಿ ಹಿಲ್ಸ್​​ನಲ್ಲಿ ವಿಜಯ್ 15 ಕೋಟಿ ರೂಪಾಯಿ ಬೆಲೆಯ ಮನೆ ಹೊಂದಿದ್ದಾರೆ. ಬಿಎಂಡ್ಬ್ಲ್ಯೂ 5 ಸೀರಿಸ್, ವೋಲ್ವೋ ಎಕ್ಸ್​​ಸಿ90, ರೇಂಜ್ ರೋವರ್ ರೀತಿಯ ಕಾರನ್ನು ಹೊಂದಿದ್ದಾರೆ. ವಿಜಯ್ ದೇವರಕೊಂಡ ಅವರು ತಮ್ಮದೇ ಆದ ಮಲ್ಟಿಪ್ಲೆಕ್ಸ್ ಚೈನ್ ಹೊಂದಿದ್ದಾರೆ. ಇದಕ್ಕೆ ‘ಏಷ್ಯನ್ ವಿಜಯ್ ದೇವರಕೊಂಡ’ ಅಥವಾ ಎವಿಡಿ ಎಂದು ಹೆಸರು ಇಡಲಾಗಿದೆ.

ವಿಜಯ್ ದೇವರಕೊಂಡ ಅವರು ತಮ್ಮದೇ ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ. ಅವರು ‘ಹೈದರಾಬಾದ್ ಬ್ಲ್ಯಾಕ್ ಹಾಕ್’ ಹೆಸರಿನ ವಾಲಿಬಾಲ್ ತಂಡ ಹೊಂದಿದ್ದಾರೆ. ವಿಜಯ್ ಅವರು ಸಿನಿಮಾಗೆ ದೊಡ್ಡ ಮೊತ್ತ ಪಡೆದುಕೊಳ್ಳುತ್ತಾರೆ. ಅವರು ಇನ್ಸ್​ಟಾಗ್ರಾಮ್​​ನಲ್ಲಿ ಕೊಲ್ಯಾಬ್ ಆಗಲು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅವರ ಒಟ್ಟೂ ಆಸ್ತಿ 70 ಕೋಟಿ ರೂಪಾಯಿ ಎನ್ನಲಾಗಿದೆ.

ಇದನ್ನೂ ಓದಿ: ಮದುವೆಗೂ ಮುನ್ನ ಗುಡ್ ನ್ಯೂಸ್ ನೀಡಿದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಕೂಡ ಶ್ರೀಮಂತ ನಟಿ. ಅವರ ಒಟ್ಟೂ ಆಸ್ತಿ 60 ಕೋಟಿ ರೂಪಾಯಿ ಆಸುಪಾಸಿನಲ್ಲಿ ಇದೆ ಎನ್ನಲಾಗಿದೆ. ಅವರು ಬೆಂಗಳೂರು, ಮುಂಬೈ ಹಾಗೂ ಗೋವಾದಲ್ಲಿ ಮನೆ ಹೊಂದಿದ್ದಾರೆ. ಅವರು ಪ್ರತಿ ಸಿನಿಮಾಗೆ 4 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ. ವಿಜಯ್ ಹಾಗೂ ರಶ್ಮಿಕಾ ಮದುವೆಗೆ ಎಲ್ಲ ರೀತಿಯ ತಯಾರಿ ನಡೆದಿದೆ. ಉದಯಪುರದಲ್ಲಿ ನಡೆಯೋ ಈ ಮದುವೆಗೆ ಆಪ್ತರು ಮಾತ್ರ ಆಗಮಿಸೋ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:08 pm, Thu, 19 February 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us