AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijay Devarakonda: ರಿಲೀಸ್​ಗೂ ಮುನ್ನ 180 ಕೋಟಿ ರೂಪಾಯಿಗೂ ಹೆಚ್ಚು ಬಿಸ್ನೆಸ್​ ಮಾಡಿದ ‘ಲೈಗರ್’ ಸಿನಿಮಾ​

Liger Movie Pre-release Business: ‘ಲೈಗರ್’ ಸಿನಿಮಾ ​ಆಗಸ್ಟ್​ 25ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ರಿಲೀಸ್​ ಆಗಲಿದೆ. ವಿಜಯ್​ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಜೋಡಿಯಾಗಿ ನಟಿಸಿದ್ದಾರೆ.

Vijay Devarakonda: ರಿಲೀಸ್​ಗೂ ಮುನ್ನ 180 ಕೋಟಿ ರೂಪಾಯಿಗೂ ಹೆಚ್ಚು ಬಿಸ್ನೆಸ್​ ಮಾಡಿದ ‘ಲೈಗರ್’ ಸಿನಿಮಾ​
ವಿಜಯ್ ದೇವರಕೊಂಡ
TV9 Web
| Edited By: |

Updated on: Jul 28, 2022 | 12:40 PM

Share

ನಟ ವಿಜಯ್​ ದೇವರಕೊಂಡ (Vijay Devarakonda) ಅವರು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಅವರು ನಟಿಸಿರುವ ‘ಲೈಗರ್’ ಸಿನಿಮಾ ವಿಶ್ವಮಟ್ಟದಲ್ಲಿ ಧೂಳೆಬ್ಬಿಸಲು ಬರುತ್ತಿದೆ. ಈಗಾಗಲೇ ರಿಲೀಸ್​ ಆಗಿರುವ ಹಾಡು ಮತ್ತು ಟ್ರೇಲರ್​ನಿಂದಾಗಿ ಸಿಕ್ಕಾಪಟ್ಟೆ ಹೈಪ್​ ಸೃಷ್ಟಿ ಆಗಿದೆ. ದಕ್ಷಿಣ ಭಾರತದಿಂದ ಇನ್ನೊಂದು ಸಿನಿಮಾ ಅಬ್ಬರಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ‘ಲೈಗರ್​’ (Liger Movie) ಟ್ರೇಲರ್​ ನೋಡಿದ ಎಲ್ಲರೂ ಹೇಳುತ್ತಿದ್ದಾರೆ. ಸಿನಿಮಾ ಬಿಡುಗಡೆ ಆದ ಬಳಿಕ ಈ ಚಿತ್ರ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗೂ ಇದೆ. ಅಚ್ಚರಿ ಎಂದರೆ ರಿಲೀಸ್​ ಆಗೋದಕ್ಕಿಂತ ಮೊದಲೇ ಈ ಚಿತ್ರ 180 ಕೋಟಿ ರೂಪಾಯಿಗೂ ಹೆಚ್ಚು ಬಿಸ್ನೆಸ್​ ಮಾಡಿದೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್​ (Puri Jagannadh) ನಿರ್ದೇಶನ ಮಾಡಿದ್ದು, ವಿಜಯ್​ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಜೋಡಿಯಾಗಿ ನಟಿಸಿದ್ದಾರೆ.

ಈಗ ಪ್ಯಾನ್​ ​ಇಂಡಿಯಾ ಟ್ರೆಂಡ್​ ಜೋರಾಗಿದೆ. ಅದೇ ಮಾರ್ಗದಲ್ಲಿ ‘ಲೈಗರ್​’ ಸಿನಿಮಾ ಬರುತ್ತಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಈ ಚಿತ್ರ ರಿಲೀಸ್​ ಆಗುತ್ತಿದೆ. ಈಗಾಗಲೇ ಹಿಂದಿ ಹೊರತುಪಡಿಸಿ ಉಳಿದೆಲ್ಲ ಭಾಷೆಗಳ ವಿತರಣೆ ಹಕ್ಕುಗಳು ಬರೋಬ್ಬರಿ 80 ಕೋಟಿ ರೂಪಾಯಿಗೆ ಸೇಲ್​ ಆಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆ ಮೂಲಕ ಬಿಡುಗಡೆಗೂ ಮುನ್ನವೇ ಚಿತ್ರಕ್ಕೆ ದೊಡ್ಡ ಮೊತ್ತ ಸಿಕ್ಕಂತಾಗಿದೆ.

ಇನ್ನು, ಹಿಂದಿ ವರ್ಷನ್​ ಹಕ್ಕುಗಳು ಸೇಲ್​ ಆಗುವುದು ಬಾಕಿ ಇದೆ. ಅದರಿಂದ ಕೂಡ ಬಹುಕೋಟಿ ರೂಪಾಯಿ ಆದಾಯ ಹರಿದುಬರುವ ನಿರೀಕ್ಷೆ ಇದೆ. ಉತ್ತರ ಭಾರತದ ಮಂದಿ ‘ಲೈಗರ್​’ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗಾಗಿ ಹಿಂದಿ ವರ್ಷನ್​ಗೆ ಭಾರಿ ಬೇಡಿಕೆ ಬಂದಿದೆ. ಈ ಡೀಲ್​ ಕೂಡ ಶೀಘ್ರವೇ ಕುದುರಲಿದೆ. ಆಗಸ್ಟ್​ 25ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಈ ಸಿನಿಮಾ ರಿಲೀಸ್​ ಆಗಲಿದೆ.

ಇದನ್ನೂ ಓದಿ
Image
‘ಇದು ಕ್ರಾಸ್ ಬ್ರೀಡ್’; ಆ್ಯಕ್ಷನ್​ ಮೂಲಕ ‘ಲೈಗರ್’ ಟ್ರೇಲರ್​ನಲ್ಲಿ ಮಿಂಚಿದ ವಿಜಯ್ ದೇವರಕೊಂಡ
Image
ವಿಜಯ್ ದೇವರಕೊಂಡ ಜತೆ ಡೇಟ್ ಮಾಡಲು ಸಾರಾ-ಜಾನ್ವಿ ನಡುವೆ ಸ್ಪರ್ಧೆ
Image
‘ಅಕ್ಡಿ ಪಕ್ಡಿ’ ಸಾಂಗ್ ಮೂಲಕ ಗಮನ ಸೆಳೆದ ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ
Image
Vijay Devarakonda: ಹುಡುಗಿ ಬೆನ್ನಲ್ಲಿ ವಿಜಯ್​ ದೇವರಕೊಂಡ ಟ್ಯಾಟೂ; ನೆಚ್ಚಿನ ಹೀರೋ ಮುಂದೆ ಯುವತಿ ಆನಂದಭಾಷ್ಪ

‘ಲೈಗರ್​’ ಸಿನಿಮಾದ ಆಡಿಯೋ ಹಕ್ಕುಗಳನ್ನು ಸೋನಿ ಮ್ಯೂಸಿಕ್​ ಕಂಪನಿ ಖರೀದಿಸಿದೆ. ಅದರಿಂದ ಬರೋಬ್ಬರಿ 14 ಕೋಟಿ ರೂಪಾಯಿ ಆದಾಯ ಬಂದಿದೆ ಎನ್ನಲಾಗಿದೆ. ಚಿತ್ರ ಬಿಡುಗಡೆ ಆಗಿ ಹಲವು ದಿನಗಳು ಕಳೆದ ಬಳಿಕ ಒಟಿಟಿಯಲ್ಲಿ ಮತ್ತು ಟಿವಿಯಲ್ಲಿ ಪ್ರಸಾರ ಮಾಡಲು ಬರೋಬ್ಬರಿ 85 ಕೋಟಿ ರೂಪಾಯಿಗಳಿಗೆ ಹಕ್ಕುಗಳನ್ನು ಖ್ಯಾತ ಸಂಸ್ಥೆಯೊಂದು ಖರೀದಿಸಿದೆ​ ಎಂದು ವರದಿ ಆಗಿದೆ. ಎಲ್ಲ ಸೇರಿದರೆ 180 ಕೋಟಿ ರೂಪಾಯಿಗಿಂತಲೂ ಹೆಚ್ಚು ಆದಾಯ ಬಂದಂತಾಗಿದೆ.

Follow Us
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
ತುಂಗಭದ್ರ ನದಿಯಲ್ಲಿ ಕಾಣಿಸಿಕೊಳ್ತು ಬೃಹದಾಕಾರದ ಮೊಸಳೆ!
ತುಂಗಭದ್ರ ನದಿಯಲ್ಲಿ ಕಾಣಿಸಿಕೊಳ್ತು ಬೃಹದಾಕಾರದ ಮೊಸಳೆ!
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು