AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಯಲೆಂಟ್ ಅವತಾರದಲ್ಲಿ ವಿಜಯ್ ದೇವರಕೊಂಡ, ವಾವ್ ಎಂದ ರಶ್ಮಿಕಾ

Vijay Deverakonda movie: ಸತತ ಸೋಲುಗಳಿಂದ ಕಂಗೆಟ್ಟಿರುವ ನಟ ವಿಜಯ್ ದೇವರಕೊಂಡ ಇದೀಗ ಹೊಸ ಸಿನಿಮಾ ಆರಂಭಿಸಿದ್ದಾರೆ. ಇತ್ತೀಚೆಗೆ ವಿಪರೀತ ವೈಯಲೆಂಟ್ ಸಿನಿಮಾಗಳು ಹೊಸ ಟ್ರೆಂಡ್ ಆಗಿದ್ದು, ಇದೀಗ ವಿಜಯ್ ದೇವರಕೊಂಡ ಸಹ ಗೆಲುವಿಗಾಗಿ ಅದೇ ಹಾದಿ ಹಿಡಿದಂತೆ ಇದೆ. ‘ರೌಡಿ ಜನಾರ್ಧನ್’ ಹೆಸರಿನ ಸಿನಿಮಾನಲ್ಲಿ ವಿಜಯ್ ನಟಿಸುತ್ತಿದ್ದು, ಸಖತ್ ವೈಯಲೆಂಟ್ ಆಗಿರಲಿದೆಯಂತೆ ಈ ಸಿನಿಮಾ.

ವೈಯಲೆಂಟ್ ಅವತಾರದಲ್ಲಿ ವಿಜಯ್ ದೇವರಕೊಂಡ, ವಾವ್ ಎಂದ ರಶ್ಮಿಕಾ
Rowdy Janardhan
ಮಂಜುನಾಥ ಸಿ.
|

Updated on: Dec 23, 2025 | 7:02 PM

Share

ವಿಜಯ್ ದೇವರಕೊಂಡ (Vijay Deverakonda) ತೆಲುಗು ಚಿತ್ರರಂಗದ ಸ್ಟಾರ್ ನಟ. ಆದರೆ ಕಳೆದ ಕೆಲ ವರ್ಷಗಳಿಂದಲೂ ಗೆಲುವು ಅವರಿಂದ ಬಲು ದೂರವೇ ಉಳಿದಿದೆ. ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರಾದರೂ ಗೆಲುವು ಎಂಬುದು ಅವರ ಪಾಲಿಗೆ ಮರೀಚಿಕೆಯೇ ಆಗಿದೆ. ರೊಮ್ಯಾಂಟಿಕ್, ಆಕ್ಷನ್, ಕೌಟುಂಬಿಕ, ಹಾರರ್, ಕಾಮಿಡಿ ಸಿನಿಮಾ ಹೀಗೆ ಹಲವು ಜಾನರ್​​ನ ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ಕಳೆದ ಕೆಲ ವರ್ಷಗಳಲ್ಲಿ ನಟಿಸಿದ್ದಾರೆ. ಆದರೆ ಯಾವೊಂದು ಸಿನಿಮಾ ಸಹ ಗೆದ್ದಿಲ್ಲ. ಇದೀಗ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಪ್ರತಿ ಬಾರಿಯಂತೆ ರಶ್ಮಿಕಾ, ಈ ಬಾರಿಯೂ ತಮ್ಮ ಭಾವಿ ಪತಿಗೆ ಶುಭಾಶಯ ತಿಳಿಸಿದ್ದಾರೆ.

ಇತ್ತೀಚೆಗೆ ಅತಿಯಾದ ವೈಯಲೆನ್ಸ್ ಎಂಬುದು ಸಿನಿಮಾಗಳಲ್ಲಿ ಟ್ರೆಂಡ್ ಆಗಿಬಿಟ್ಟಿದೆ. ಅತಿಯಾದ ಹಿಂಸಾತ್ಮಕ ದೃಶ್ಯಗಳುಳ್ಳ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಸಖತ್ ಹಿಟ್ ಆಗುತ್ತಿವೆ. ‘ಅನಿಮಲ್’, ‘ಮಾರ್ಕೊ’ ಇತ್ತೀಚೆಗೆ ಬಿಡುಗಡೆ ಆದ ‘ಧುರಂಧರ್’ ಇಂಥಹಾ ಸಿನಿಮಾಗಳಲ್ಲಿ ಕೆಲವು. ಇದೀಗ ವಿಜಯ್ ದೇವರೊಕಂಡ ಸಹ ಅದೇ ಫಾರ್ಮುಲಾ ತಮ್ಮದಾಗಿಸಿಕೊಳ್ಳಲು ಮುಂದಾಗಿದ್ದು, ಅತ್ಯಂತ ವೈಯಲೆಂಟ್ ಸಿನಿಮಾನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ವಿಜಯ್ ದೇವರಕೊಂಡ, ‘ರೌಡಿ ಜನಾರ್ಧನ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಟೀಸರ್ ಇಂದು (ಡಿಸೆಂಬರ್ 23) ಬಿಡುಗಡೆ ಆಗಿದ್ದು, ಟೀಸರ್​​ನಲ್ಲಿ ರಕ್ತವನ್ನು ಮೈಗೆಲ್ಲ ಮೆತ್ತಿಕೊಂಡು ಬರಿಮೈಯಲ್ಲಿ ಕಾಣಿಸಿಕೊಂಡಿದ್ದಾರೆ ವಿಜಯ್ ದೇವರಕೊಂಡ. ಕೈಯಲ್ಲಿ ರಕ್ತ ಮೆತ್ತಿದ ಕತ್ತಿಯೊಂದನ್ನು ಹಿಡಿದು ಅದನ್ನು ಎದುರಾಳಿ ಗುಂಪಿನ ಕಡೆ ಬೀಸುತ್ತಿದ್ದಾರೆ. ಮೀಸೆ ಬಿಟ್ಟುಕೊಂಡು, ತುಸು ಕೂದಲು ಬಿಟ್ಟು 80ರ ದಶಕದ ವಿಲನ್​​ಗಳ ರೀತಿ ಕಾಣುತ್ತಿದ್ದಾರೆ ನಟ ವಿಜಯ್ ದೇವರಕೊಂಡ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆ ಜೈಪುರದಲ್ಲಿ?

ಸಿನಿಮಾದ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ‘ಲೆಟ್ಸ್ ಗೋ…’ ಎಂದು ಉತ್ಸಾಹ ವ್ಯಕ್ತಪಡಿಸಿದ್ದಾರೆ. ‘ರೌಡಿ ಜನಾರ್ಧನ್’ ಸಿನಿಮಾವನ್ನು ತೆಲುಗಿನ ನಿರ್ದೇಶಕ ರವಿ ಕಿರಣ್ ಕೊಲ್ಲ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ‘ಅಶೋಕವನಂ ಲೊ ಅರ್ಜುನ ಕನ್ಯಾಣಂ’, ‘ರಾಜಾವಾರು, ರಾಣಿಗಾರು’, ‘ಲವ್ ಮ್ಯಾರೇಜ್’ ಅಂಥಹಾ ಹಾಸ್ಯಮಯ ಪ್ರೇಮಕತೆಗಳನ್ನು ನಿರ್ದೇಶನ ಮಾಡಿದ್ದ ರವಿ ಕಿರಣ್ ಅವರು ಇದೀಗ ಪಕ್ಕಾ ಆಕ್ಷನ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ವಿಜಯ್ ದೇವರಕೊಂಡ ನಟನೆಯ ‘ಗೀತಾ ಗೋವಿಂದಂ’ ಸಿನಿಮಾದ ಬಳಿಕ ಅವರು ನಟಿಸಿದ ಯಾವೊಂದು ಸಿನಿಮಾ ಸಹ ಹಿಟ್ ಆಗಿಲ್ಲ. ‘ಡಿಯರ್ ಕಾಮ್ರೆಡ್’ ಸಾಧಾರಣ ಹಿಟ್ ಆಗಿದ್ದು ಬಿಟ್ಟರೆ, ‘ಲೈಗರ್’, ‘ಖುಷಿ’, ‘ಟ್ಯಾಕ್ಸಿವಾಲ’, ‘ವರ್ಲ್ಡ್ ಫೇಮಸ್ ಲವ್ವರ್’, ‘ದಿ ಫ್ಯಾಮಿಲಿ ಸ್ಟಾರ್’ ಇನ್ನೂ ಕೆಲವು ಸಿನಿಮಾಗಳು ಒಂದರ ಹಿಂದೆ ಒಂದರಂತೆ ಸೋತಿವೆ. ಇತ್ತೀಚೆಗೆ ಬಂದ ‘ಕಿಂಗ್ಡಮ್’ ಸಿನಿಮಾ ಅಟ್ಟರ್ ಫ್ಲಾಪ್ ಆಗಿದೆ. ಇದೀಗ ‘ರೌಡಿ ಜನಾರ್ಧನ್’ ಸಿನಿಮಾ ಆದರೂ ಗೆಲ್ಲುತ್ತದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಹುಬ್ಬಳ್ಳಿ ಮರ್ಯಾದಾ ಹತ್ಯೆ​​: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್​
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಧರ್ಮದ ಸಂರಕ್ಷಕರಾಗಲು ಆರ್‌ಎಸ್‌ಎಸ್‌ಗೆ ಯಾರು ಅಧಿಕಾರ ನೀಡಿದ್ದು
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕೈಕೊಟ್ಟ ಕೇಂದ್ರದ ವಾಹನ್-4: ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳ ಪರದಾಟ
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ?
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು
GBA ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು