ಶುಕ್ರವಾರ ಹೇಗಿದೆ ‘ಕಿಂಗ್ಡಮ್’ ಸಿನಿಮಾದ ಗಳಿಕೆ? ಇಲ್ಲಿದೆ ವಿವರ

ವಿಜಯ್ ದೇವರಕೊಂಡ ಅಭಿನಯದ 'ಕಿಂಗ್ಡಮ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸು ಕಂಡಿದೆ. ಮೊದಲ ದಿನವೇ 33 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಗೌತಮ್ ತಿನ್ನನೂರಿ ನಿರ್ದೇಶನದ ಈ ಚಿತ್ರ ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿದೆ. ಎರಡನೇ ದಿನವೂ ಉತ್ತಮ ಗಳಿಕೆ ಆಗಿದೆ ಶನಿವಾರ ಮತ್ತು ಭಾನುವಾರ ಇನ್ನಷ್ಟು ಗಳಿಕೆ ನಿರೀಕ್ಷಿಸಲಾಗಿದೆ.

ಶುಕ್ರವಾರ ಹೇಗಿದೆ ‘ಕಿಂಗ್ಡಮ್’ ಸಿನಿಮಾದ ಗಳಿಕೆ? ಇಲ್ಲಿದೆ ವಿವರ
ಕಿಂಗ್ಡಮ್
Edited By:

Updated on: Aug 02, 2025 | 11:42 AM

ವಿಜಯ್ ದೇವರಕೊಂಡ ಅವರು ‘ಕಿಂಗ್ಡಮ್’ ಚಿತ್ರದ (Kingdom Movie) ಮೂಲಕ ಉತ್ತಮ ಯಶಸ್ಸನ್ನು ಗಳಿಸಿದ್ದಾರೆ. ಗೌತಮ್ ತಿನ್ನನುರಿ ನಿರ್ದೇಶನದ ‘ಕಿಂಗ್ಡಮ್’ ಮೊದಲ ಪ್ರದರ್ಶನದಿಂದಲೇ ಸಕಾರಾತ್ಮಕ ಅಭಿಪ್ರಾಯವನ್ನು ಪಡೆದುಕೊಂಡಿದೆ. ಈ ಬಗ್ಗೆ ಚಿತ್ರತಂಡ ಸಂತೋಷವನ್ನು ವ್ಯಕ್ತಪಡಿಸುತ್ತಿದೆ. ಏತನ್ಮಧ್ಯೆ, ಕಿಂಗ್ಡಮ್ ಚಿತ್ರವು ಉತ್ತಮ ಓಪನಿಂಗ್ಸ್ ಪಡೆದಿದೆ. ವ್ಯಾಪಾರ ವಿಶ್ಲೇಷಕರ ವರದಿಗಳ ಪ್ರಕಾರ, ಕಿಂಗ್ಡಮ್ ಚಿತ್ರವು ಮೊದಲ ದಿನ ಸುಮಾರು 33 ಕೋಟಿ ರೂ.ಗಳ ಒಟ್ಟು ಕಲೆಕ್ಷನ್ ಮಾಡಿತ್ತು. ಎರಡನೇ ದಿನವಾದ ಆಗಸ್ಟ್ 1ರಂದು ಕೂಡ ಚಿತ್ರ ಒಳ್ಳೆಯ ಗಳಿಕೆ ಮಾಡಿದೆ.

‘ಕಿಂಗ್ಡಮ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಈ ಚಿತ್ರವು ಭಾರತ ಒಂದರಲ್ಲೇ 18 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಿದ್ದನ್ನು ನೀವು ನೋಡಬಹುದು. ಇನ್ನು, ವಿಶ್ವ ಬಾಕ್ಸ್ ಆಫೀಸ್ ಸೇರಿದರೆ ಸಿನಿಮಾದ ಗಳಿಕೆ 33 ಕೋಟಿ ರೂಪಾಯಿ ಮೇಲೆ ಆಗಲಿದೆ.

ಇನ್ನು, ಶುಕ್ರವಾರದ ಲೆಕ್ಕಾಚಾರ ನೋಡುವುದಾದರೆ ಈ ಸಿನಿಮಾ 7 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. 7 ಕೋಟಿ ರೂಪಾಯಿ ಎಂದರೆ ಇದು ಕಡಿಮೆ ಏನೂ ಅಲ್ಲ. ವಾರದ ದಿನವೂ ಇಷ್ಟು ಉತ್ತಮ ಕಲೆಕ್ಷನ್ ಆಗಿರೋದು ಫ್ಯಾನ್ಸ್ ಖುಷಿಗೆ ಕಾರಣ ಆಗಿದೆ. ಶನಿವಾರ ಹಾಗೂ ಭಾನುವಾರ ಸಿನಿಮಾದ ಕಲೆಕ್ಷನ್ ಹೆಚ್ಚುವ ನಿರೀಕ್ಷೆ ಇದೆ ಎಂದೇ ಹೇಳಬಹುದು. ಈ ಮೂಲಕ ಕೆಲವೇ ದಿನಗಳಲ್ಲಿ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ಇದನ್ನೂ ಓದಿ
ಸಮಂತಾ ಕೈಯಲ್ಲಿ ಹೊಸ ಉಂಗುರ; ಹುಟ್ಟಿತು ನಿಶ್ಚಿತಾರ್ಥದ ಚರ್ಚೆ
‘ಕೊತ್ತಲವಾಡಿ’ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು?
ಗಂಟೆಗೆ 11 ಸಾವಿರ ಟಿಕೆಟ್ ಮಾರಿದ ಸು ಫ್ರಮ್ ಸೋ; ಶುಕ್ರವಾರ ದಾಖಲೆ ಕಲೆಕ್ಷನ್
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?

ಇದನ್ನೂ ಓದಿ: ‘ಕಿಂಗ್ಡಮ್’ ನೋಡುವವರಿಗೆ ಭರ್ಜರಿ ಅವಕಾಶ ಕೊಟ್ಟ ನಿರ್ಮಾಪಕ

ಕಿಂಗ್‌ಡಮ್ ಸಿನಿಮಾ ಬಗ್ಗೆ ಹೇಳುವುದಾದರೆ, ‘ಮಲ್ಲಿರಾವ’ ಮತ್ತು ‘ಜೆರ್ಸಿ’ಯಂತಹ ಒಳ್ಳೆಯ ಸಿನಿಮಾಗಳನ್ನು ನಿರ್ದೇಶಿಸಿದ ಗೌತಮ್ ತಿನ್ನನೂರಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸಿದ್ದಾರೆ. ಸತ್ಯದೇವ್ ಜೊತೆಗೆ ಮಲಯಾಳಂ ನಟ ವೆಂಕಟೇಶ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ನಾಗವಂಶಿ ಮತ್ತು ಸಾಯಿ ಸೌಜನ್ಯ ಜಂಟಿಯಾಗಿ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್‌ಗಳ ಅಡಿಯಲ್ಲಿ ಶ್ರೀಕರ ಸ್ಟುಡಿಯೋ ಪ್ರಸ್ತುತಿಯಲ್ಲಿ ಈ ಕಿಂಗ್‌ಡಮ್ ಚಿತ್ರವನ್ನು ನಿರ್ಮಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ವಿಜಯ್ ಅವರು ಈ ಗೆಲುವಿಗಾಗಿ ಬಹಳ ಸಮಯದಿಂದ ಕಾದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:42 am, Sat, 2 August 25