Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲು ಸಾಲು ಸೋಲು; ಕೊನೆಗೂ ‘ಅಪ್ಪು’ ನಿರ್ದೇಶಕನಿಗೆ ಅವಕಾಶ ಕೊಟ್ಟ ಸ್ಟಾರ್ ನಟ

ಪುರಿ ಜಗನ್ನಾಥ್ ಅವರು ಇತ್ತೀಚೆಗೆ ಹಲವು ಸಿನಿಮಾಗಳಲ್ಲಿ ಸೋಲು ಕಂಡಿದ್ದಾರೆ. ಆದರೆ, ತಮಿಳು ನಟ ವಿಜಯ್ ಸೇತುಪತಿ ಅವರೊಂದಿಗೆ ಹೊಸ ಚಿತ್ರ ನಿರ್ಮಿಸಲು ಒಪ್ಪಿಗೆ ನೀಡಿದ್ದಾರೆ. ಈ ಸಹಯೋಗವು ಪುರಿ ಜಗನ್ನಾಥ್ ಅವರ ವೃತ್ತಿಜೀವನಕ್ಕೆ ಹೊಸ ಆಶಾಕಿರಣವಾಗಿದೆ. ವಿಜಯ್ ಸೇತುಪತಿ ಅವರೊಂದಿಗಿನ ಈ ಚಿತ್ರದ ಯಶಸ್ಸು ಪುರಿ ಜಗನ್ನಾಥ್ ಅವರ ಭವಿಷ್ಯವನ್ನು ನಿರ್ಧರಿಸಬಹುದು.

ಸಾಲು ಸಾಲು ಸೋಲು; ಕೊನೆಗೂ ‘ಅಪ್ಪು’ ನಿರ್ದೇಶಕನಿಗೆ ಅವಕಾಶ ಕೊಟ್ಟ ಸ್ಟಾರ್ ನಟ
ಪುರಿ
Follow us
ರಾಜೇಶ್ ದುಗ್ಗುಮನೆ
|

Updated on: Mar 18, 2025 | 12:08 PM

ನಿರ್ದೇಶಕ ಪುರಿ ಜಗನ್ನಾಥ ಅವರು ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದವರು. ‘ಅಪ್ಪು’ ರೀತಿಯ ಸೂಪರ್ ಹಿಟ್ ಚಿತ್ರಗಳು ಅವರ ಬತ್ತಳಕೆಯಿಂದ ಬಂದಿವೆ. ಆದರೆ, ಇತ್ತೀಚೆಗೆ ಅವರು ಲಯ ತಪ್ಪಿದ್ದಾರೆ. ‘ಲೈಗರ್’ ಸೋತ ಬಳಿಕ ಅವರು ‘ಇಸ್ಮಾರ್ಟ್​ ಶಂಕರ್’ ಸಿನಿಮಾ ಮಾಡಿದರು. ಇದು ಕೂಡ ಸೋಲು ಕಂಡಿತು. ಖಾಲಿ ಕುಳಿತಿದ್ದ ಅವರಿಗೆ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಅವಕಾಶ ಕೊಟ್ಟಿದ್ದಾರೆ. ಒಂದೇ ಸಿಟ್ಟಿಂಗ್​ನಲ್ಲಿ ಕಥೆ ಓಕೆ ಮಾಡಿದ್ದಾರೆ. ಈ ವಿಚಾರ ಕೇಳಿ ಪುರಿ ಜಗನ್ನಾಥ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಪುರಿ ಜಗನ್ನಾಥ್ ಅವರನ್ನು ಹೊಸ ಜನರೇಶನ್​ ಅವರು ಇಷ್ಟಪಟ್ಟಿಲ್ಲ. ಅವರು ಬೌನ್ಸ್ ಬ್ಯಾಕ್ ಆಗುತ್ತಾರೆ ಎಂದು ಎಲ್ಲರೂ ಕಾದರು. ‘ಲೈಗರ್’ ಹಾಗೂ ‘ಡಬಲ್ ಇಸ್ಮಾರ್ಟ್’ ಅವರ ವೃತ್ತಿ ಜೀವನಕ್ಕೆ ಭಾರೀ ಹೊಡೆತ ಕೊಟ್ಟಿತ್ತು. ನಾಗಾರ್ಜುನ ರೀತಿಯ ಹೀರೋಗಳಿಗೆ ಅವರು ಕಥೆ ಹೇಳಿದರೂ ಯಾರೂ ಸಿನಿಮಾ ಮಾಡೋಕೆ ಒಪ್ಪಿಲ್ಲ.

ಈಗ ವಿಜಯ್ ಸೇತುಪತಿ ಅವರು ಪುರಿ ಜಗನ್ನಾಥ ಜೊತೆ ಸಿನಿಮಾ ಮಾಡಲು ಓಕೆ ಎಂದಿದ್ದಾರೆ. ಇದರಿಂದ ಖುಷಿ ಆಗಿರೋ ಪುರಿ ಅವರು ಶ್ರದ್ಧೆಯಿಂದ ಸ್ಕ್ರಿಪ್ಟ್ ಮಾಡೋಕೆ ಆರಂಭಿಸಿದ್ದಾರೆ. ವಿಜಯ್ ಅವರ ಮ್ಯಾನರಿಸಂಗೆ ತಕ್ಕಂತೆ ಸಿನಿಮಾ ಮಾಡಲಾಗುತ್ತಿದೆ. ಈ ಚಿತ್ರದಿಂದ ಅವರು ಗೆಲ್ಲುವ ಭರವಸೆಯಲ್ಲಿ ಇದ್ದಾರೆ.

ಇದನ್ನೂ ಓದಿ
Image
ಪುಸ್ತಕ ರೂಪದಲ್ಲಿ ಬರ್ತಿದೆ ಪುನೀತ್ ಜೀವನ; ಅಪ್ಪು ಹೆಸರಲ್ಲೇ ಪುಸ್ತಕ ರಿಲೀಸ್
Image
ಪುನೀತ್ ರಾಜ್​ಕುಮಾರ್ 50ನೇ ವರ್ಷದ ಜನ್ಮದಿನ; ಎಂದಿಗೂ ಕಮ್ಮಿ ಆಗಲ್ಲ ಅಭಿಮಾನ
Image
ಹೊಸ ನಟರು ಬಂದರೂ ಪುನೀತ್ ಫ್ಯಾನ್ಸ್ ನಿಯತ್ತು ಬದಲಾಗಲ್ಲ: ರಮ್ಯಾ ಮೆಚ್ಚುಗೆ
Image
ಪುನೀತ್ ಕಪ್ಪಿದ್ದಾರೆ ಎಂದವರಿಗೆ ಖಡಕ್ ಉತ್ತರ ಕೊಟ್ಟಿದ್ದ ರಾಜ್​ಕುಮಾರ್

ವಿಜಯ್ ಸೇತುಪತಿ ಅವರು ಹಲವು ನಿರ್ದೇಶಕರ ಜೊತೆ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿದ್ದಾರೆ. ಫ್ಲಾಪ್ ನಿರ್ದೇಶಕರ ಜೊತೆ ಅವರು ಕೈ ಜೋಡಿಸಿ ಗೆಲುವಿನ ರುಚಿ ತೋರಿಸಿದ್ದಾರೆ. ಈಗ ಅವರು ಪುರಿ ಜಗನ್ನಾಥ್​ಗೆ ಅವಕಾಶ ಕೊಟ್ಟಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಪುರಿ ಜಗನ್ನಾಥ ದೇವಾಲಯಕ್ಕೆ ಪ್ರವೇಶಿಸಲು ನಿರಾಕರಿಸಿದ್ದ ಪುನೀತ್ ರಾಜ್​ಕುಮಾರ್, ಕಾರಣ?

ವಿಜಯ್ ಸೇತುಪತಿ ಅವರು ಫ್ಯಾಮಿಲಿ ಡ್ರಾಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಆ್ಯಕ್ಷನ್ ಸಿನಿಮಾಗಳನ್ನೂ ಮಾಡಿದ್ದಾರೆ. ಈಗ ಅವರು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.  ಈ ಸಿನಿಮಾ ಗೆದ್ದರೆ ಪುರಿ ಜಗನ್ನಾಥ್ ವೃತ್ತಿ ಬದುಕು ಬದಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ನಮಗಾದರೋ ಕುಮಾರಸ್ವಾಮಿ ಎಲ್ಲದಕ್ಕೂ ರಾಜೀನಾಮೆ ಕೇಳುತ್ತಿದ್ದರಲ್ಲ? ಸಚಿವ
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ತೋಟದ ಮನೆ ಸುತ್ತ ಸರ್ಕಾರಿ ಒತ್ತುವರಿ ಭೂಮಿ ತೆರವು: ಎಚ್​ಡಿಕೆ ಹೇಳಿದ್ದಿಷ್ಟು
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
ಭಾರತೀಯ ಸಂಸ್ಕೃತಿಯ ರಾಯಭಾರಿ; ಅಂಧ ಯುವತಿಯ ಸ್ಫೂರ್ತಿಯ ಕತೆ ಹೇಳಿದ ಮೋದಿ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ
ಎಚ್​ಡಿಕೆ ತೋಟದ ಮನೆ ಸುತ್ತ ಎಷ್ಟು ಎಕರೆ ಒತ್ತುವರಿ?ಸ್ಫೋಟಕ ಮಾಹಿತಿ ಇಲ್ಲಿದೆ