ನಾಯಕ ನಟನಾದ ವಿಜಯ್ ಸೇತುಪತಿ ಪುತ್ರ, ಈ ಹಿಂದೆ ನಟಿಸಿದ ಸಿನಿಮಾಗಳು ಯಾವುವು?

Vijay Sethupathi: ವಿಜಯ್ ಸೇತುಪತಿ ಬೇಡಿಕೆಯ ಸಿನಿಮಾ ನಟ ಇದೀಗ ಅವರ ಪುತ್ರ ಸೂರ್ಯ ಸೇತುಪತಿ ಸಹ ನಾಯಕ ನಟನಾಗುತ್ತಿದ್ದಾರೆ. ಸೂರ್ಯ ಸೇತುಪತಿಗೆ ಸಿನಿಮಾ ಹೊಸದೇನೂ ಅಲ್ಲ. ಸೂರ್ಯ ಸೇತುಪತಿ ನಟಿಸಿರುವ ಈ ಹಿಂದಿನ ಸಿನಿಮಾಗಳು ಯಾವುವು ಗೊತ್ತೆ?

ನಾಯಕ ನಟನಾದ ವಿಜಯ್ ಸೇತುಪತಿ ಪುತ್ರ, ಈ ಹಿಂದೆ ನಟಿಸಿದ ಸಿನಿಮಾಗಳು ಯಾವುವು?
ವಿಜಯ್ ಸೇತುಪತಿ
Follow us
ಮಂಜುನಾಥ ಸಿ.
|

Updated on: Nov 25, 2023 | 6:36 PM

ವಿಜಯ್ ಸೇತುಪತಿ (Vijay Sethupathi) ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟ. ಸೇತುಪತಿ ಗಂಟೆಗಳ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತಿದೆ. ಇತ್ತೀಚೆಗೆ ಬಾಲಿವುಡ್​ಗೂ ವಿಜಯ್ ಸೇತುಪತಿ ಪದಾರ್ಪಣೆ ಮಾಡಿದ್ದಾರೆ. ಶಾರುಖ್ ಖಾನ್ ಜೊತೆ ‘ಜವಾನ್’ ಸಿನಿಮಾದಲ್ಲಿ ನಟಿಸಿರುವ ವಿಜಯ್ ಸೇತುಪತಿ, ಕತ್ರಿನಾ ಕೈಫ್ ಜೊತೆಗೆ ‘ಮೇರಿ ಕ್ರಿಸ್​ಮಸ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ವಿಜಯ್ ಸೇತುಪತಿ ಬಹು ಬೇಡಿಕೆಯಲ್ಲಿದ್ದಾಗಲೇ ಇದೀಗ ಅವರ ಪುತ್ರ ಹೀರೋ ಆಗುತ್ತಿದ್ದಾರೆ.

ವಿಜಯ್ ಸೇತುಪತಿ ಪುತ್ರ ಸೂರ್ಯ, ನಾಯಕ ನಟನಾಗಲು ರೆಡಿಯಾಗಿದ್ದಾರೆ. ಈ ಹಿಂದೆ ತಂದೆಯ ಜೊತೆಗೆ ಕೆಲವು ಸಿನಿಮಾಗಳಲ್ಲಿ ಸಣ್ಣ ಪುತ್ರಗಳಲ್ಲಿ ನಟಿಸಿದ್ದರು. ಜೊತೆಗೆ ಒಂದು ವೆಬ್ ಸರಣಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇದೀಗ ನಾಯಕ ನಟನಾಗುತ್ತಿದ್ದಾರೆ. ಆಕ್ಷನ್ ನಿರ್ದೇಶಕರಾಗಿ ಹಲವು ಸಿನಿಮಾಗಳಿಗೆ ಕೆಲಸ ಮಾಡಿರುವ ಅನಿಲ್ ಅರಸು ನಿರ್ದೇಶನ ಮಾಡಲಿರುವ ಹೊಸ ಸಿನಿಮಾಕ್ಕೆ ವಿಜಯ್ ಸೇತುಪತಿ ಪುತ್ರ ಸೂರ್ಯ ಅವರೇ ನಾಯಕ.

ಸೂರ್ಯ ಸೇತುಪತಿ ನಟಿಸುತ್ತಿರುವ ಈ ಸಿನಿಮಾಕ್ಕೆ ‘ಫಿನಿಕ್ಸ್’ ಎಂದು ಹೆಸರಿಡಲಾಗಿದ್ದು ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿರಲಿದೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು ಗಮನ ಸೆಳೆಯುತ್ತಿದೆ. ಸಿನಿಮಾದ ಮುಹೂರ್ತ ಸಮಾರಂಭ ಸಹ ಇತ್ತೀಚೆಗಷ್ಟೆ ನೆರವೇರಿದೆ. ಮಗ ನಾಯಕನಾಗಿ ನಟಿಸಲಿರುವ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ನಾನು ಆ ನಟಿಯ ಜೊತೆ ಮಾತ್ರ ರೊಮ್ಯಾನ್ಸ್ ಮಾಡಲ್ಲ’; ನೇರವಾಗಿ ಹೇಳಿದ್ದ ವಿಜಯ್ ಸೇತುಪತಿ

‘ಫಿನಿಕ್ಸ್’ ಸಿನಿಮಾವನ್ನು ಎಕೆ ಬ್ರವಿಮನ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡುತ್ತಿರುವುದು ಸ್ಯಾಮ್ ಸಿಎಸ್, ಸಿನಿಮಾಟೊಗ್ರಫಿ ಯನ್ನು ವೆಲ್​ರಾಜ್ ಮಾಡಲಿದ್ದಾರೆ. ಪ್ರವೀಣ್ ಕೆಎಲ್ ಅವರು ಎಡಿಟಿಂಗ್ ಕೆಲಸ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಸಿನಿಮಾಕ್ಕೆ ನಾಯಕಿ ಹಾಗೂ ಇನ್ನಿತರೆ ಪಾತ್ರವರ್ಗದ ಆಯ್ಕೆ ಇನ್ನಷ್ಟೆ ಆಗಬೇಕಿದೆ.

ವಿಜಯ್ ಸೇತುಪತಿ ಪುತ್ರ ಸೂರ್ಯಾಗೆ ಸಿನಿಮಾ ಹೊಸದಲ್ಲ. ಈ ಮುಂಚೆ ವಿಜಯ್ ಸೇತುಪತಿ ನಟಿಸಿರುವ ‘ನಾನೂ ರೌಡಿ ದಾ’ ಸಿನಿಮಾದಲ್ಲಿ ಬಾಲನಟನಾಗಿ ಸೂರ್ಯ ನಟಿಸಿದ್ದರು. ‘ಸಿಂಧುಬಾದ್’ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಸ್ಟ್ರೀಂ ಆಗುತ್ತಿರುವ ‘ನಾಡು ಸೆಂಟರ್’ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಜಯ್ ಸೇತುಪತಿಯ ಬಿಡುಗಡೆ ಆಗಲಿರುವ ಸಿನಿಮಾ ‘ವಿಡುದಲೈ 2’ ನಲ್ಲಿಯೂ ಸೂರ್ಯ ನಟಿಸಿದ್ದಾರೆ. ಇದೀಗ ‘ಫಿನಿಕ್ಸ್’ ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕ ನಟ ಆಗುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ