‘ನೆನಪಿಟ್ಟುಕೊಳ್ಳಿ, ಹಣ ಇದ್ರೆ ಮಾತ್ರ ನಿಮಗೆ ಗೌರವ’; ಯುವ ಜನತೆ ಎಚ್ಚರಿಸಿದ ವಿಕ್ರಾಂತ್ ಮಾಸ್ಸಿ

ವಿಕ್ರಾಂತ್ ಮಾಸ್ಸಿ ಅವರು ಹಣದ ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಹಣ ಗೌರವ ಮತ್ತು ಆತ್ಮವಿಶ್ವಾಸವನ್ನು ತರುತ್ತದೆ. ಹಣ ಖುಷಿಯನ್ನು ಖರೀದಿಸಲು ಸಾಧ್ಯವಿಲ್ಲ ಎಂಬ ಸಾಮಾನ್ಯ ನಂಬಿಕೆಗೆ ವಿರುದ್ಧವಾಗಿ, ಹಣದಿಂದ ಬರುವ ಆತ್ಮವಿಶ್ವಾಸ ಖುಷಿಯನ್ನು ತರುತ್ತದೆ ಎಂದು ಅವರು ಹೇಳಿದ್ದಾರೆ.

‘ನೆನಪಿಟ್ಟುಕೊಳ್ಳಿ, ಹಣ ಇದ್ರೆ ಮಾತ್ರ ನಿಮಗೆ ಗೌರವ’; ಯುವ ಜನತೆ ಎಚ್ಚರಿಸಿದ ವಿಕ್ರಾಂತ್ ಮಾಸ್ಸಿ
ವಿಕ್ರಾಂತ್
Edited By:

Updated on: Jul 09, 2025 | 7:57 AM

‘ಹಣ ಖುಷಿಯನ್ನು ನೀಡೋದಿಲ್ಲ’ ಎಂಬ ಮಾತನ್ನು ನೀವು ಎಲ್ಲಾದರೂ ಕೇಳಿರುತ್ತೀರಿ. ಇದನ್ನು ಹೇಳೋದು ಹಣ ಇರುವವರೇ ಎಂಬುದು ಅನೇಕರಿಗೆ ತಿಳಿದಿದೆ. ಈಗ ವಿಕ್ರಾಂತ್ ಮಾಸ್ಸಿ ಅವರು ಒಂದು ವಿಚಾರವನ್ನು ಹೇಳಿದ್ದಾರೆ. ಅವರ ಪ್ರಕಾರ ಹಣ ಇದ್ದರೆ ಮಾತ್ರ ಗೌರವ ಸಿಗುತ್ತದೆ ಎಂದು ಹೇಳಿದ್ದಾರೆ. ಹಣ ಇದ್ದರೆ ಏನೆಲ್ಲ ಆಗುತ್ತದೆ ಎಂದು ಅವರು ವಿವರಿಸಿದ್ದು, ಈ ಹೇಳಿಕೆಯನ್ನು ಅನೇಕರು ಒಪ್ಪಿಕೊಂಡಿದ್ದಾರೆ.

ವಿಕ್ರಾಂತ್ ಮಾಸ್ಸಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ‘12th ಫೇಲ್’ ಚಿತ್ರದಲ್ಲಿ ಅವರ ನಟನೆ ಗಮನ ಸೆಳೆಯಿತು. ಏನೂ ಇಲ್ಲದ ವ್ಯಕ್ತಿ ಪೊಲೀಸ್ ಅಧಿಕಾರಿಯಾಗುವ ಕಥೆಯನ್ನು ಈ ಚಿತ್ರ ಹೊಂದಿದೆ. ಈ ಮಧ್ಯೆ ಅವರ ಒಂದು ಭಾಷಣ ಗಮನ ಸೆಳೆದಿದೆ.

ಇದನ್ನೂ ಓದಿ
‘ನಾನು ಗೌರಿಯನ್ನು ಮದುವೆಯಾಗಿ ಆಗಿದೆ..’; ಶಾಕಿಂಗ್ ಅಪ್​ಡೇಟ್ ಕೊಟ್ಟ ಆಮಿರ್
ನಿರ್ದೇಶಕನ ಜೊತೆಗಿನ ಪ್ರೀತಿ ವಿಚಾರವನ್ನು ಖಚಿತಪಡಿಸಿದ ಸಮಂತಾ; ಕ್ಯೂಟ್ ಫೋಟೋ
ಆಂಧ್ರ ಪ್ರದೇಶದಲ್ಲಿ ಗಾಂಜಾ ಕಡಿಮೆ ಮಾಡಿದ ನಟ ಪವನ್ ಕಲ್ಯಾಣ್
‘ನಿವೇದಿತಾಳನ್ನು ಈಗಲೂ ಮಿಸ್ ಮಾಡಿ ಕೊಳ್ತೀನಿ’; ಚಂದನ್ ಶೆಟ್ಟಿ

‘ಹಣ ಬೇಕೇ ಬೇಕು. ನನ್ನ ತಂದೆ ವಯಸ್ಸಿನ ವ್ಯಕ್ತಿಗಳು ಸೆಟ್​ನಲ್ಲಿ ಈಗಲೂ ಕೆಲಸ ಮಾಡುತ್ತಾರೆ. 22 ವರ್ಷದ ವ್ಯಕ್ತಿಯೂ 70 ವರ್ಷದ ವ್ಯಕ್ತಿಯನ್ನು ಬಯ್ಯುತ್ತಿರುತ್ತಾನೆ. ಆತ ಸೆಕ್ಯುರಿಟಿ ಗಾರ್ಡ್ ಎಂಬುದೇ ಇದಕ್ಕೆ ಕಾರಣ ಆಗಿರುತ್ತದೆ. ಎಷ್ಟು ಹಣ ಇರುತ್ತದೆಯೋ ಅಷ್ಟು ಗೌರವ ಸಿಗುತ್ತದೆ. ಹಣ ಖುಷಿಯನ್ನು ಖರೀದಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ, ಅದು ಸುಳ್ಳು. ಹಣ ನಿಮಗೆ ಕಾನ್ಫಿಡೆನ್ಸ್ ನೀಡುತ್ತದೆ. ಆ ಕಾನ್ಫಿಡೆನ್ಸ್​ನಿಂದ ಖುಷಿ ಸಿಗುತ್ತದೆ’ ಎಂದಿದ್ದಾರೆ ವಿಕ್ರಾಂತ್ ಅವರು.

ಇದನ್ನೂ ಓದಿ: ವಿಕ್ರಾಂತ್ ಮಾಸ್ಸಿ ಮನೆಯಲ್ಲಿ ಹಲವು ಧರ್ಮಗಳ ಸಂಗಮ; ಮಗನ ಧರ್ಮ ಯಾವುದು?

ಕೆಲವು ಸೆಲೆಬ್ರಿಟಿಗಳು ಹಣ ಹಾಗೂ ಸೆಲೆಬ್ರಿಟಿ ಪಟ್ಟದ ವಿಚಾರದಲ್ಲಿ ಬೇರೆಯದೇ ಅಭಿಪ್ರಾಯ ಹೊಂದಿದ್ದಾರೆ. ಈ ಮೊದಲು ಅನುಷ್ಕಾ ಶರ್ಮಾ ಅವರು ಈ ವಿಚಾರವಾಗಿ ಮಾತನಾಡಿದ್ದರು. ಸೆಲೆಬ್ರಿಟಿ ಪಟ್ಟ ಪಡೆಯಬೇಕು ಎಂದು ಅನೇಕರಿಗೆ ಇರುತ್ತದೆ. ಆದರೆ, ಇದನ್ನು ಪಡೆದ ಬಳಿಕ ಎದುರಾಗುವ ಸಮಸ್ಯೆಗಳು ಒಂದೆರಡಲ್ಲ. ಇದನ್ನು ಅವರು ವಿವರಿಸಿದ್ದರು. ಅವರಿಗೆ ಸಾಮಾನ್ಯ ವ್ಯಕ್ತಿಯಂತೆ ಬದುಕಬೇಕು ಎಂಬುದು ಇದೆ. ಇನ್ನು, ಶಾರುಖ್ ಖಾನ್ ಅವರು ಹಣ ಹಾಗೂ ಸೆಲೆಬ್ರಿಟಿ ಪಟ್ಟವನ್ನು ಸಾಕಷ್ಟು ಎಂಜಾಯ್ ಮಾಡುತ್ತಾ ಇದ್ದಾರೆ. ಇದನ್ನು ಅವರು ಅನೇಕ ಬಾರಿ ಓಪನ್ ಆಗಿ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:56 am, Wed, 9 July 25