‘ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ’; ಪ್ರತಾಪ್​ಗೆ ಆವಾಜ್ ಹಾಕಿದ ವಿನಯ್

ಬಿಗ್ ಬಾಸ್ ಹೆಚ್ಚು ದಿನಸಿ ನೀಡುವುದಿಲ್ಲ ಎನ್ನುವ ಆರೋಪವನ್ನು ಸ್ಪರ್ಧಿಗಳು ಮಾಡುತ್ತಲೇ ಬಂದಿದ್ದರು. ಈ ಕಾರಣದಿಂದ ಬಿಗ್ ಬಾಸ್ ಹೊಸ ಆಯ್ಕೆ ನಿಡಿದರು. ಈ ವೇಳೆ ಜಗಳ ಆಗಿದೆ.

‘ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ’; ಪ್ರತಾಪ್​ಗೆ ಆವಾಜ್ ಹಾಕಿದ ವಿನಯ್
ಪ್ರತಾಪ್​-ವಿನಯ್
Follow us
ರಾಜೇಶ್ ದುಗ್ಗುಮನೆ
|

Updated on: Dec 19, 2023 | 8:21 AM

ಬಿಗ್ ಬಾಸ್​ನಲ್ಲಿ (Bigg Boss) ಅಡುಗೆ ವಿಚಾರಕ್ಕೆ ಹಲವು ಜಗಳಗಳು ಉಂಟಾಗುತ್ತವೆ. ಯಾರು ಯಾರ ವಿರುದ್ಧ ಸಿಡಿದೇಳುತ್ತಾರೆ ಎಂದು ಹೇಳೋಕೆ ಸಾಧ್ಯವಿಲ್ಲ. ಈಗ ಮನೆಯ ದಿನಸಿ ವಸ್ತುಗಳ ವಿಚಾರಕ್ಕೆ ಸಂಬಂಧಿಸಿ ಜಗಳ ಮತ್ತೆ ಭುಗಿಲೆದ್ದಿದೆ. ವಿನಯ್ ಅವರು ಪ್ರತಾಪ್​ಗೆ ಅವಾಜ್ ಹಾಕಿದ್ದಾರೆ. ‘ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ’ ಎಂದು ಹೇಳಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಇಡೀ ಮನೆ ಹೊತ್ತಿ ಉರಿದಿದೆ.

ಬಿಗ್ ಬಾಸ್ ಹೆಚ್ಚು ದಿನಸಿ ನೀಡುವುದಿಲ್ಲ ಎನ್ನುವ ಆರೋಪವನ್ನು ಸ್ಪರ್ಧಿಗಳು ಮಾಡುತ್ತಲೇ ಬಂದಿದ್ದರು. ಈ ಕಾರಣದಿಂದ ಬಿಗ್ ಬಾಸ್ ಹೊಸ ಆಯ್ಕೆ ನಿಡಿದರು. ಸ್ಪರ್ಧಿಗಳಿಗೆ ದಿನಸಿಯನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆ ನೀಡಲಾಯಿತು. ಈ ಆಯ್ಕೆಗೆ ನಾಲ್ಕು ಸ್ಪರ್ಧಿಗಳ ಅವಶ್ಯಕತೆ ಇತ್ತು. ಅದೇ ರೀತಿ ಕಾರ್ತಿಕ್, ತನಿಷಾ, ಸಂಗೀತಾ ಹಾಗೂ ಮೈಕಲ್ ಕೆಲವು ವಸ್ತುಗಳನ್ನು ಆಯ್ಕೆ ಮಾಡಲು ಹೋದರು.

ಅಕ್ಕಿಯ ತೂಕವನ್ನು ಕೇವಲ 5 ಕೆಜಿ ಆಯ್ಕೆ ಮಾಡಿದರು. ಉಪ್ಪು ಇದೆ ಎಂದರೂ ಅದನ್ನು ಆಯ್ದುಕೊಂಡರು. ಈ ಎಲ್ಲಾ ಕಾರಣದಿಂದ ಉಳಿದ ಸ್ಪರ್ಧಿಗಳು ಸಿಟ್ಟಾಗಿದ್ದಾರೆ. ಮನೆಯ ಸೋಫಾ ಮೇಲೆ ಕುಳಿತಿದ್ದ ವಿನಯ್ ಅವರು ಬೈದುಕೊಳ್ಳುತ್ತಿದ್ದರು. ಈ ವೇಳೆ ಪ್ರತಾಪ್ ಅವರು, ‘ಸಂಗೀತಾ ಅವರ ತಪ್ಪಿಲ್ಲ. ಅಲ್ಲಿ ಹೋದ ಎಲ್ಲಾ ಸ್ಪರ್ಧಿಗಳ ತಪ್ಪು’ ಎಂಬರ್ಥದಲ್ಲಿ ಮಾತನಾಡಿದರು. ಆಗ ವಿನಯ್ ಸಿಟ್ಟಾದರು.

‘ಗುರು ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ. ನಾನು ನಿನ್ನ ಸಂಗೀತಾ ಅವರ ತಪ್ಪು ಎಂದು ಹೇಳಿಲ್ಲ. ಎಲ್ಲರ ತಪ್ಪು ಎಂದಿದ್ದೇನೆ. ನೀನು ಯಾವ ಅರ್ಥದಲ್ಲಿ ಮಾತನಾಡುತ್ತಿದ್ದೀಯಾ ಅನ್ನೋದು ಗೊತ್ತಾಗುತ್ತದೆ. ಸಂಗೀತಾನ ವಹಿಸಿಕೊಂಡು ಮಾತನಾಡುವ ಬದಲು ಮನೆಯ ಬಗ್ಗೆ ನೋಡು’ ಎಂದು ಎಚ್ಚರಿಕೆ ನೀಡಿದರು. ಆಗ ಪ್ರತಾಪ್ ಸೈಲೆಂಟ್ ಆದರು.

ಇದನ್ನೂ ಓದಿ: ‘ಈ ರೀತಿ ಬದುಕಿರೋಕಾಗಲ್ಲ, ಮನೆಗೆ ಕಳುಹಿಸಿ’; ಬಿಗ್ ಬಾಸ್ ಎದುರು ವಿನಯ್ ಹೊಸ ಬೇಡಿಕೆ

ವಿನಯ್ ಅವರು ಸದಾ ಅಗ್ರೆಷನ್ ತೋರಿಸುತ್ತಾರೆ. ಈ ರೀತಿಯ ಅಗ್ರೆಷನ್ ಸರಿ ಅಲ್ಲ ಅನ್ನೋದು ಅನೇಕರ ಅಭಿಪ್ರಾಯ. ಆದಾಗ್ಯೂ ಅವರು ಅದನ್ನು ಮುಂದುವರಿಸಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್