The Wedding of VIROSH: ವಿವಾಹಕ್ಕೂ ಮೊದಲು ಸಖತ್ ಎಂಜಾಯ್​​ ಮಾಡಿದ ವಿಜಯ್-ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ವಿವಾಹ ಅಧಿಕೃತಗೊಂಡಿದ್ದು, ಸ್ವತಃ ರಶ್ಮಿಕಾ ಈ ವಿಷಯ ಖಚಿತಪಡಿಸಿದ್ದಾರೆ. 'ವಿರೋಶ್' ಜೋಡಿ ಉದಯಪುರದಲ್ಲಿ ಪ್ರೀ-ವೆಡ್ಡಿಂಗ್ ಆಚರಣೆಗಳಲ್ಲಿ ತೊಡಗಿಕೊಂಡಿದೆ. ಕುಟುಂಬದೊಂದಿಗೆ ವಾಲಿಬಾಲ್, ಜಪಾನೀಸ್ ಡಿನ್ನರ್ ಪಾರ್ಟಿ ಆಯೋಜಿಸಿ ಸಂಭ್ರಮಿಸುತ್ತಿದ್ದಾರೆ. ಫೆಬ್ರವರಿ 26 ರಂದು ಐಟಿಸಿ ಹೋಟೆಲ್‌ನಲ್ಲಿ ಇವರ ಮದುವೆ ನಡೆಯಲಿದೆ.

The Wedding of VIROSH: ವಿವಾಹಕ್ಕೂ ಮೊದಲು ಸಖತ್ ಎಂಜಾಯ್​​ ಮಾಡಿದ ವಿಜಯ್-ರಶ್ಮಿಕಾ
ವಿಜಯ್ ಹಾಗೂ ರಶ್ಮಿಕಾ

Updated on: Feb 24, 2026 | 7:04 AM

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ವಿವಾಹ ಆಗೋದು ಅಧಿಕೃತ ಆಗಿದೆ. ಸ್ವತಃ ರಶ್ಮಿಕಾ ಮಂದಣ್ಣ ಅವರೇ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಈ ಮಧ್ಯೆ ದಂಪತಿಗಳು ಪ್ರೀ ವೆಡ್ಡಿಂಗ್ ಸೆಲಬ್ರೇಷನ್ ಅಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಾ ಇದೆ. ಇದು ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ.

ತಮ್ಮ ಜೋಡಿಯನ್ನು ವಿರೋಶ್ ಎಂದು ಕರೆದುಕೊಂಡಿದ್ದಾರೆ ರಶ್ಮಿಕಾ ಹಾಗೂ ವಿಜಯ್. ಇದು ಅಭಿಮಾನಿಗಳೇ ಇಟ್ಟ ಹೆಸರು ಎಂದು ಅವರು ಹೇಳಿದ್ದಾರೆ. ಈಗಾಗಲೇ ಭಾವಿ ದಂಪತಿಗಳು ಉದಯಪುರ ಸೇರಿದ್ದು, ಅಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇಡೀ ಕುಟುಂಬ ಈಗಾಗಲೇ ಅಲ್ಲಿ ನೆಲೆಯೂರಿದೆ. ನೀರಿನಲ್ಲಿ ನೆಟ್ ಕಟ್ಟಿ ಕುಟುಂಬದವರ ಜೊತೆ ವಿಜಯ್ ದೇವರಕೊಂಡ ವಾಲಿಬಾಲ್ ಆಡಿದ್ದಾರೆ. ಈ ಸಂದರ್ಭದ ಫೋಟೋನ ಇನ್​​ಸ್ಟಾಗ್ರಾಮ್ ಸ್ಟೇಟಸ್​​ನ್ಲಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಜಾಪನೀಸ್ ಡಿನ್ನರ್ ಆಯೋಜನೆ ಮಾಡಿದ್ದರು. ಈ ಸಂದರ್ಭದ ಫೋಟೋನ ಹಂಚಿಕೊಳ್ಳಲಾಗಿದೆ. ಇದರಲ್ಲಿ ಜಾಪನೀಸ್ ಅಡುಗೆ ಊಟ ಇರುವ ಮೆನ್ಯು ಸಾಕಷ್ಟು ಗಮನ ಸೆಳೆದಿದೆ. ರಶ್ಮಿಕಾ ಮಂದಣ್ಣ ಅವರ ಮೆನ್ಯು ಕಾರ್ಡ್ ಬಳಿ ಗ್ರೀನ್ ಆ್ಯಪಲ್ ಹಾಗೂ ದ್ರಾಕ್ಷಿಗಳನ್ನು ಇಡಲಾಗಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಫೆಬ್ರವರಿ 26ರಂದು ವಿವಾಹ ಆಗಲಿದ್ದಾರೆ. ಉದಯಪುರದ ಐಟಿಸಿ ಹೋಟೆಲ್​ ಅಲ್ಲಿ ಈ ವಿವಾಹ ನಡೆಯುತ್ತಿದೆ. ಡೆಸ್ಟಿನೇಷನ್ ವಿವಾಹಗಳನ್ನು ಆಯೋಜನೆ ಮಾಡಲು ಉದಯಪುರ ಮುಂಚೂಣಿಯಲ್ಲಿ ಇದೆ. ಈ ಕಾರಣದಿಂದಲೇ ಈ ಜಾಗವನ್ನು ಆಯ್ಕೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಾ ಇದೆ.

ಇದನ್ನೂ ಓದಿ: The Wedding of VIROSH: ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ವಯಸ್ಸಿನ ಅಂತರ ಎಷ್ಟು?

ವಿಜಯ್ ದೇವರಕೊಂಡ ಹಾಗು ರಶ್ಮಿಕಾ ಮಂದಣ್ಣ ಅವರು ‘ಗೀತ ಗೋವಿಂದಂ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಈ ಸಿನಿಮಾ ಗಮನ ಸೆಳೆಯಿತು. ಈ ಚಿತ್ರದ ಬಳಿಕ ಇವರ ಲವ್​​ಸ್ಟೋರಿ ಶುರುವಾಯಿತು ಎಂದು ಹೇಳಲಾಗುತ್ತಾ ಇದೆ. ಈಗ ಇವರು ಮದುವೆ ಆಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:01 am, Tue, 24 February 26

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us