ಕಿಂಗ್​​ ಖಾನ್​ಗೆ ವಿವೇಕ್ ಅಗ್ನಿಹೋತ್ರಿ ಟಾಂಗ್; ಶಾರುಖ್​ರ​ನ್ನು ಹೊಗಳಿದ್ದ ಹಳೆಯ ಟ್ವೀಟ್ ವೈರಲ್ ಮಾಡಿದ ಫ್ಯಾನ್ಸ್

| Updated By: ರಾಜೇಶ್ ದುಗ್ಗುಮನೆ

Updated on: Jul 16, 2022 | 6:04 PM

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಗೆದ್ದ ಬಳಿಕ ವಿವೇಕ್ ಅವರು ಸಾಕಷ್ಟು ವಿಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದ್ದಿದೆ. ಈಗ ಬಾಲಿವುಡ್ ಖಾನ್​ಗಳ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.

ಕಿಂಗ್​​ ಖಾನ್​ಗೆ ವಿವೇಕ್ ಅಗ್ನಿಹೋತ್ರಿ ಟಾಂಗ್; ಶಾರುಖ್​ರ​ನ್ನು ಹೊಗಳಿದ್ದ ಹಳೆಯ ಟ್ವೀಟ್ ವೈರಲ್ ಮಾಡಿದ ಫ್ಯಾನ್ಸ್
ಶಾರುಖ್​-ವಿವೇಕ್
Follow us on

ದಕ್ಷಿಣ ಭಾರತಕ್ಕೆ ಹೋಲಿಕೆ ಮಾಡಿದರೆ ಬಾಲಿವುಡ್ (Bollywood) ಸಿನಿಮಾಗಳು ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡುತ್ತಿಲ್ಲ ಎಂಬ ಚರ್ಚೆ ಇದೆ. ಬಾಲಿವುಡ್ ದಿನಕಳೆದಂತೆ ಸೊರಗುತ್ತಿದೆ. ಆಮಿರ್ ಖಾನ್ (Aamir Khan), ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಸಿನಿಮಾಗಳು ಮೊದಲಿನ ಖದರ್ ಉಳಿಸಿಕೊಂಡಿಲ್ಲ. ಈ ಮೂವರಿಂದಲೇ ಬಾಲಿವುಡ್ ಮುಳುಗುತ್ತಿದೆ ಎನ್ನುವ ಆರೋಪವನ್ನು ‘ದಿ ಕಾಶ್ಮೀರ್ ಫೈಲ್ಸ್​’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮಾಡಿದ್ದಾರೆ. ಈ ಹೇಳಿಕೆ ಸಾಕಷ್ಟು ಚರ್ಚೆ ಆಗುತ್ತಿದ್ದು, ಪರ-ವಿರೋಧ ಚರ್ಚೆ ನಡೆಯುತ್ತಿದೆ.

ಕಾಶ್ಮೀರಿ ಪಂಡಿತರ ವಲಸೆ ಹಾಗೂ ಹತ್ಯೆ ವಿಚಾರ ಇಟ್ಟುಕೊಂಡು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶನ ಮಾಡಿದ್ದರು ವಿವೇಕ್ ಆಗ್ನಿಹೋತ್ರಿ. ಈ ಚಿತ್ರದಿಂದ ಅವರಿಗೆ ಅಪಾರ ಜನಪ್ರಿಯತೆ ದೊರೆತಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ಗಳಿಕೆ ಮಾಡಿ ಬೀಗಿದೆ. ಈ ಚಿತ್ರ ಗೆದ್ದ ಬಳಿಕ ವಿವೇಕ್ ಅವರು ಸಾಕಷ್ಟು ವಿಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದ್ದಿದೆ. ಈಗ ಬಾಲಿವುಡ್ ಖಾನ್​ಗಳ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ
Chiranjeevi Sarja: ಚಿತ್ರರಂಗಕ್ಕೆ ಚಿರು ಪುತ್ರ ರಾಯನ್​ ರಾಜ್​ ಸರ್ಜಾ ಎಂಟ್ರಿ ನೀಡುವ ಬಗ್ಗೆ ಅರ್ಜುನ್​ ಸರ್ಜಾ ಹೇಳಿದ್ದೇನು?
RRR: ಹಾಲಿವುಡ್​​ ಜನಪ್ರಿಯ ಬರಹಗಾರನಿಂದ ‘ಆರ್​ಆರ್​ಆರ್​​’ಗೆ ಶಹಬ್ಬಾಸ್​ಗಿರಿ; ಚಿತ್ರ ನೋಡಿ ಹೇಳಿದ್ದೇನು ಗೊತ್ತಾ?
Kabza Movie: 7 ಭಾಷೆಗಳಲ್ಲಿ ಧೂಳೆಬ್ಬಿಸಲಿದೆ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ; ಭರದಿಂದ ಸಾಗುತ್ತಿದೆ ಡಬ್ಬಿಂಗ್​ ಕೆಲಸ
Vikrant Rona: ಕಿಚ್ಚನ ‘ರಾ ರಾ ರಕ್ಕಮ್ಮ..’ ಹಾಡಿಗೆ ಹೆಜ್ಜೆ ಹಾಕಿದ ಬಾಲಿವುಡ್​ ಸ್ಟಾರ್​ ನಟ ರಿತೇಶ್​ ದೇಶಮುಖ್​

ಮಾಧ್ಯಮವೊಂದು ಶಾರುಖ್ ಖಾನ್ ಬಗ್ಗೆ ಸುದ್ದಿ ಪ್ರಕಟ ಮಾಡಿತ್ತು. ‘ಬಾಲಿವುಡ್​ನಲ್ಲಿ ಶಾರುಖ್ ಖಾನ್ ಈಗಲೂ ಏಕೆ ಕಿಂಗ್?’ ಎಂಬುದನ್ನು ಈ ಸುದ್ದಿಯಲ್ಲಿ ವಿವರಿಸಲಾಗಿತ್ತು. ಈ ಬಗ್ಗೆ ಮಾಡಲಾದ ಟ್ವೀಟ್​ಅನ್ನು ವಿವೇಕ್ ರೀಟ್ವೀಟ್ ಮಾಡಿದ್ದಾರೆ. ‘ಎಲ್ಲಿಯವರೆಗೆ ಬಾಲಿವುಡ್​ನಲ್ಲಿ ಕಿಂಗ್​ಗಳು, ಬಾದ್​ಶಾಗಳು, ಸುಲ್ತಾನ್​ಗಳು ಇರುತ್ತಾರೋ ಅಲ್ಲಿಯವರೆಗೆ ಬಾಲಿವುಡ್ ಮುಳುಗುತ್ತಲೇ ಇರುತ್ತದೆ. ಇದನ್ನು ಜನರ ಇಂಡಸ್ಟ್ರಿಯನ್ನಾಗಿ ಮಾಡಿ. ಜನರ ಕಥೆಗಳನ್ನು ಸಿನಿಮಾ ಮಾಡಿ. ಆಗ ಇದು ಗ್ಲೋಬಲ್ ಇಂಡಸ್ಟ್ರಿಯಾಗಿ ಬದಲಾಗಲಿದೆ’ ಎಂದು ಬರೆದುಕೊಂಡಿರುವ ವಿವೇಕ್ ಅಗ್ನಿಹೋತ್ರಿ FACT (ಸತ್ಯ) ಎಂದು ಹ್ಯಾಶ್​ಟ್ಯಾಗ್ ಹಾಕಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್ ‘ಜವಾನ್​’ ಚಿತ್ರದಲ್ಲಿ ದಳಪತಿ ವಿಜಯ್​ಗೆ ಅತಿಥಿ ಪಾತ್ರ; ಸಂಭಾವನೆ ಎಷ್ಟು?

ಇದು ಶಾರುಖ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ. ಈ ಮೊದಲು ಶಾರುಖ್ ಖಾನ್ ಅವರನ್ನು ಹೊಗಳಿ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದರು. ಆ ಟ್ವೀಟ್​ಗಳ ಸ್ಕ್ರೀನ್​​ಶಾಟ್​ಗಳನ್ನು ಶಾರುಖ್ ಫ್ಯಾನ್ಸ್ ಪೋಸ್ಟ್ ಮಾಡುತ್ತಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ ಅನುಪ್ ಖೇರ್ ಅವರು ಶಾರುಖ್ ಬಗ್ಗೆ ಪಾಸಿಟಿವ್ ಆಗಿ ಮಾಡಿದ ಟ್ವೀಟ್ ಕೂಡ ವೈರಲ್ ಮಾಡಲಾಗುತ್ತಿದೆ.