Baby Shamlee: ಬಾಲನಟಿಯಾಗಿ ಮಿಂಚಿದ ಬೇಬಿ ಶಾಮಿಲಿ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ?

ಬಾಲನಟಿಯಾಗಿ ಮನೆಮಾತಾಗಿದ್ದ ನಟಿ ಬೇಬಿ ಶಾಮಿಲಿ. ಈ ನಟಿ ಈಗ ಏನು ಮಾಡುತ್ತಿದ್ದಾರೆ? ಎಲ್ಲಿದ್ದಾರೆ? ಇಲ್ಲಿದೆ ಮಾಹಿತಿ.

Baby Shamlee: ಬಾಲನಟಿಯಾಗಿ ಮಿಂಚಿದ ಬೇಬಿ ಶಾಮಿಲಿ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ?
ಬೇಬಿ ಶಾಮಿಲಿ
Follow us
ಮಂಜುನಾಥ ಸಿ.
|

Updated on: Apr 12, 2023 | 7:17 PM

ಬೇಬಿ ಶಾಮಿಲಿ (Baby Shamlee) ಯಾರಿಗೆ ಗೊತ್ತಿಲ್ಲ, ಎಳವೆಯಲ್ಲೇ ತಮ್ಮ ಪ್ರತಿಭೆಯಿಂದ ಮನೆಮಾತಾಗಿದ್ದ ಮುದ್ದು ಮುಖದ ಮಾತಿನ ಮಲ್ಲಿ. ಕನ್ನಡ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಏಲ್ಲ ಭಾಷೆಗಳ ಸಿನಿಮಾಗಳಲ್ಲಿಯೂ ಬಾಲನಟಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಂತೂ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸಿದ್ದರು ಬೇಬಿ ಶಾಮಿಲಿ. ಸಣ್ಣ ವಯಸ್ಸಿನಲ್ಲೇ ಸ್ಟಾರ್ ಪಟ್ಟ ಅಲಂಕರಿಸಿದ್ದ ನಟಿ ಬೇಬಿ ಶಾಮಿಲಿ ಈಗೇನು ಮಾಡುತ್ತಿದ್ದಾರೆ.

2000 ದವರೆಗೆ ಬಹುತೇಕ ಬಾಲನಟಿಯಾಗಿಯೇ ನಟಿಸಿದ ಬೇಬಿ ಶಾಮಿಲಿ ಆ ನಂತರ ಚಿತ್ರರಂಗದಿಂದ ಹಠಾತ್ತನೆ ದೂರಾಗಿಬಿಟ್ಟರು. ಅದಾದ ಬಳಿಕ 2009 ರಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ‘ಓಯ್’ ಹೆಸರಿನ ಸಿನಿಮಾದಲ್ಲಿ ನಟಿಸಿದರು ಸಿನಿಮಾ ಹಿಟ್ ಎನಿಸಿಕೊಂಡಿತು. ಅದಾದ ಬಳಿಕ ಮತ್ತೊಂದು ದೊಡ್ಡ ಬ್ರೇಕ್ ತೆಗೆದುಕೊಂಡು 2016 ರಲ್ಲಿ ಮರಳಿ ಬಂದು ಎರಡು ಸಿನಿಮಾಗಳಲ್ಲಿ ನಟಿಸಿದರಾದರೂ ಎರಡೂ ಸಿನಿಮಾಗಳು ಫ್ಲಾಪ್ ಆದವು. ಶಾಮಿಲಿಯ ನಟನೆಯ ಬಗ್ಗೆ ಸಹ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಲಿಲ್ಲ. ಬಳಿಕ 2018 ರಲ್ಲಿ ತೆಲುಗು ಸಿನಿಮಾ ಒಂದರಲ್ಲಿ ನಟಿಸಿ ಆ ಸಿನಿಮಾ ಸಹ ಫ್ಲಾಪ್ ಆಯಿತು. ಆ ಬಳಿಕ ಇನ್ಯಾವುದೇ ಸಿನಿಮಾದಲ್ಲಿ ಬೇಬಿ ಶಾಮಿಲಿ ನಟಿಸಿಲ್ಲ.

2000 ಬಳಿಕ ಬೇಬಿ ಶಾಮಿಲಿ ಶಿಕ್ಷಣದ ಕಡೆ ಗಮನ ಕೇಂದ್ರೀಕರಿಸಿದ ಕಾರಣ ಸಿನಿಮಾಗಳಲ್ಲಿ ನಟಿಸಲಿಲ್ಲ ಬೇಬಿ ಶಾಮಿಲಿ. ಪದವಿ ಮುಗಿಸಿ 2009 ರಲ್ಲಿ ‘ಓಯ್’ ಹೆಸರಿನ ಸಿನಿಮಾದಲ್ಲಿ ನಟಿಸಿದ ಬಳಿಕ ಮತ್ತೆ ಉನ್ನತ ಶಿಕ್ಷಣದ ಕಡೆ ಮುಖ ಮಾಡಿದರು. ಸಿಂಗಪುರಕ್ಕೆ ತೆರಳಿ ಮೂರೂ ವರೆ ವರ್ಷ ಫಿಲಂ ಪ್ರೊಡಕ್ಷನ್ ಕಲಿತರು, ಅಲ್ಲಿಯೇ ಕೆಲ ಕಾಲ ಉದ್ಯೋಗ ಸಹ ಮಾಡಿದರು. ಆ ಬಳಿಕ ಮತ್ತೆ 2016 ರಲ್ಲಿ ಚಿತ್ರರಂಗಕ್ಕೆ ಮರಳಿದರಾದರೂ ಅವರಂದುಕೊಂಡಂತೆ ಯಶಸ್ಸು ಶಾಮಿಲಿಗೆ ಸಿಗಲಿಲ್ಲ. ಬೇಬಿ ಶಾಮಿಲಿ ಈಗ ನೃತ್ಯಗಾರ್ತಿಯೂ ಆಗಿದ್ದು ವಿದೇಶಗಳಲ್ಲಿ ನೃತ್ಯ ಪ್ರದರ್ಶನಗಳನ್ನು ಸಹ ನೀಡುತ್ತಾರೆ.

ಬೇಬಿ ಶಾಮಿಲಿ ಪ್ರಸ್ತುತ ವಿದೇಶದಲ್ಲಿಯೇ ನೆಲೆಸಿದ್ದಾರೆ ಎನ್ನಲಾಗುತ್ತಿದೆ. ಅವರ ಇನ್​ಸ್ಟಾಗ್ರಾಂನ ಚಿತ್ರಗಳು ಇದನ್ನೇ ಹೇಳುತ್ತಿವೆ. ಚಿತ್ರರಂಗದಿಂದ ದೂರವಾಗಿದ್ದಾರಾದರೂ ಇನ್​ಸ್ಟಾಗ್ರಾಂನಲ್ಲಿ ಆಕ್ಟರ್ ಎಂದೇ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ಬೇಬಿ ಶಾಮಿಲಿ ಈಗ ಕೇವಲ ನಟಿ ಮಾತ್ರವಲ್ಲ ಕಲಾವಿದೆ ಸಹ. ಚಿತ್ರಗಳನ್ನು ಬರೆಯುವುದು ಅವರ ಮೆಚ್ಚಿನ ಹವ್ಯಾಸ. ಚಿತ್ರಗಳನ್ನು ಬರೆದು ಅವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ದುಬೈ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಅವರು ರಚಿಸಿದ ಚಿತ್ರಗಳ ಪ್ರದರ್ಶನವೂ ಆಗಿದೆ.

ತಮಿಳು ಕುಟುಂಬದ ಬೇಬಿ ಶಾಮಿಲಿಯ ಅಣ್ಣ ರಿಚರ್ಡ್ ರಿಷಿ ಸಹ ನಟರು, ಶಾಮಿಲಿಯ ಅಕ್ಕ ಶಾಲಿನಿ ಸಹ ಜನಪ್ರಿಯ ನಟಿಯಾಗಿದ್ದವರು. ಬೇಬಿ ಶಾಮಿಲಿ ರೀತಿಯಲ್ಲಿಯೇ ಬೇಬಿ ಶಾಲಿನಿ ಎಂದು ಹೆಸರು ಗಳಿಸಿದ್ದರು. ಆದರೆ ತಂಗಿ ಶಾಮಿಲಿಯಷ್ಟು ಹೆಸರು ಗಳಿಸಲು ಸಾಧ್ಯವಾಗಲಿಲ್ಲವಾದರೂ ಮಲಯಾಳಂ, ತಮಿಳಿನ ಹಲವು ಸಿನಿಮಾಗಳಲ್ಲಿ ಶಾಲಿನಿ ಬಾಲನಟಿಯಾಗಿ ನಟಿಸಿದರು. ಬಳಿಕ ನಾಯಕಿಯಾಗಿಯೂ ದೊಡ್ಡ ಯಶಸ್ಸು ಗಳಿಸಿದರು. ಮಣಿರತ್ನಂ ನಿರ್ದೇಶನದ ಐಕಾನಿಕ್ ಸಿನಿಮಾ ಅಲೈಪಾಯುತೆ, ವಿಜಯ್ ಜೊತೆ ಕಡವುಲಕ್ಕು ಮರಿಯಾದೈ, ಕಣ್ಣುಕ್ಕುಲ್ ನಿಲವು ಅಜಿತ್ ಜೊತೆಗೆ ಅಮರ್​ಕಾಲಂ ಸಿನಿಮಾಗಳಲ್ಲಿ ನಟಿಸಿದ್ದಾರೆ. 2000 ದಲ್ಲಿ ತಮಿಳಿನ ಸ್ಟಾರ್ ನಟ ಅಜಿತ್ ಅನ್ನು ವಿವಾಹವಾಗಿ ಚಿತ್ರರಂಗದಿಂದ ದೂರ ಉಳಿದರು ನಟಿ ಶಾಲಿನಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ