AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾರ್ 2’ ಶೂಟಿಂಗ್ ಶುರು ಯಾವಾಗ? ಸಿನಿಮಾ ನಿಂತು ಹೋಯ್ತ?

Salaar 2: ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿತ್ತು, ಈ ಸಿನಿಮಾದ ಎರಡನೇ ಭಾಗ ಬಿಡುಗಡೆ ಆಗುವುದು ಯಾವಾಗ? ಚಿತ್ರೀಕರಣ ರದ್ದಾಗಿಬಿಟ್ಟಿತಾ?

‘ಸಲಾರ್ 2’ ಶೂಟಿಂಗ್ ಶುರು ಯಾವಾಗ? ಸಿನಿಮಾ ನಿಂತು ಹೋಯ್ತ?
ಮಂಜುನಾಥ ಸಿ.
|

Updated on: Sep 20, 2024 | 7:07 PM

Share

ಸತತ ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಸ್ ಅನ್ನು ಗೆಲುವಿನ ಹಳಿಗೆ ಮರಳಿ ತಂದು ನಿಲ್ಲಿಸಿದ್ದು ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ. ಭಾರಿ ಬಜೆಟ್, ದೊಡ್ಡ ತಾರಾಗಣದ ಈ ಸಿನಿಮಾ ಪ್ರಭಾಸ್ ಅಭಿಮಾನಿಗಳ ಪಾಲಿಗೆ ಹಬ್ಬವೇ ಆಗಿತ್ತು. ಕನ್ನಡದ ‘ಉಗ್ರಂ’ ಸಿನಿಮಾವನ್ನೇ ದೊಡ್ಡ ಬಜೆಟ್ ಹಾಕಿ, ದೊಡ್ಡ ನಟರನ್ನು ಹಾಕಿಕೊಂಡು ಬಾಡಿದ ರೀಮೇಕ್ ಆಗಿತ್ತು ‘ಸಲಾರ್’. ಆದರೆ ‘ಸಲಾರ್’ ಸಿನಿಮಾದ ಮೊದಲ ಭಾಗವಷ್ಟೆ ಈಗ ಬಿಡುಗಡೆ ಆಗಿದ್ದು, ಎರಡನೇ ಭಾಗ ಇನ್ನೂ ಬಿಡುಗಡೆ ಆಗಬೇಕಿದೆ. ಆದರೆ ಎರಡನೇ ಭಾಗ ಬಿಡುಗಡೆ ಆಗುವುದೊ ಇಲ್ಲವೊ ಎಂಬ ಅನುಮಾನ ಮೂಡಿದೆ.

ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಬೇರೆ ಪ್ರಾಜೆಕ್ಟ್​ಗಳಲ್ಲಿ ನಿರತರಾಗಿದ್ದಾರೆ. ಮುಂದಿನ ಸುಮಾರು ಎರಡು ವರ್ಷಗಳ ಕಾಲ ಇಬ್ಬರೂ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ‘ಸಲಾರ್ 2’ ಪ್ರಾರಂಭವಾಗುವುದು ಯಾವಾಗ ಮತ್ತು ಅದು ತೆರೆಗೆ ಬರುವುದು ಯಾವಾಗ ಎಂಬ ಅನುಮಾನ ವ್ಯಕ್ತವಾಗಿದೆ. ‘ಸಲಾರ್’ ಸಿನಿಮಾ ಬಿಡುಗಡೆ ಆಗಿ ಒಂದು ವರ್ಷವಾಗುತ್ತಾ ಬಂದಿದೆ. ಮೊದಲು ನಿರ್ಧಾರ ಮಾಡಿದ್ದ ಯೋಜನೆಯಂತೆ ಈ ವೇಳೆಗೆ ‘ಸಲಾರ್ 2’ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಇಬ್ಬರೂ ಸಹ ಇದೇ ಸಮಯದಲ್ಲಿ ಬೇರೆ ಬೇರೆ ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ:‘ಸಲಾರ್ 2’ ಸಿನಿಮಾಕ್ಕೆ ಮಲಯಾಳಂ ಸೂಪರ್ ಸ್ಟಾರ್ ಎಂಟ್ರಿ?

ಪ್ರಭಾಸ್​ಗೆ ಈಗ ಕೈತುಂಬಾ ಸಿನಿಮಾಗಳಿವೆ. ‘ರಾಜಾ ಡಿಲಕ್ಸ್’ ಹಾರರ್ ಕಾಮಿಡಿ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಇದರ ಜೊತೆಗೆ ರಘು ಹನುಪುಡಿಯ ಹೊಸ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ನಡೆದಿದೆ. ಅದಾದ ಬಳಿಕ ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆ. ಆ ಬಳಿಕ ‘ಕಲ್ಕಿ 2’ ಸಿನಿಮಾದ ಚಿತ್ರೀಕರಣ ನಡೆಯಬೇಕಿದೆ. ಈ ನಾಲ್ಕೂ ಸಿನಿಮಾ ಮುಗಿಯಲು ಕನಿಷ್ಟ ಮೂರು ವರ್ಷವಾದರೂ ಬೇಕಿದೆ. ಇನ್ನು ಪ್ರಶಾಂತ್ ನೀಲ್ ಇಷ್ಟು ದಿನ ಖಾಲಿ ಇದ್ದರು. ಆದರೆ ಇತ್ತೀಚೆಗೆ ಜೂ ಎನ್​ಟಿಆರ್ ಜೊತೆಗಿನ ಹೊಸ ಸಿನಿಮಾದ ಘೋಷಣೆ ಮಾಡಿದ್ದು, ಆ ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಲಿದ್ದಾರೆ. ಆ ಸಿನಿಮಾ 2026ಕ್ಕೆ ತೆರೆಗೆ ಬರಲಿದೆ. ಅಲ್ಲಿಗೆ ಪ್ರಶಾಂತ್ ನೀಲ್ ಎರಡು ವರ್ಷ ಬ್ಯುಸಿ, ಪ್ರಭಾಸ್ ಮೂರು ವರ್ಷ ಬ್ಯುಸಿ. ಹಾಗಿದ್ದ ಮೇಲೆ ‘ಸಲಾರ್ 2’ ಪ್ರಾರಂಭ ಆಗುವುದು ಯಾವಾಗ? ಎಂಬ ಪ್ರಶ್ನೆ ಸಹಜವಾಗಿಯೆ ಹುಟ್ಟಿದೆ.

‘ಸಲಾರ್’ ಸಿನಿಮಾವನ್ನು ಕನ್ನಡದ ಹೊಂಬಾಳೆ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿತ್ತು. ‘ಸಲಾರ್’ ಸುಮಾರು 700 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಿಶ್ವದಾದ್ಯಂತ ಗಳಿಸಿತ್ತು. ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್, ನಾಯಕಿಯಾಗಿ ಶ್ರುತಿ ಹಾಸನ್, ಕನ್ನಡದ ಗರುಡ ರಾಮ್, ನವೀನ್ ಶಂಕರ್, ಪ್ರಮೋದ್, ಮಧು ಗುರುಸ್ವಾಮಿ, ಸೌರವ್ ಲೋಕೇಶ್ ಅವರುಗಳು ನಟಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್