Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾ ಜೊತೆ ಬಾಲಿ ಸುತ್ತಿ ಬಂದ ಆತ್ಮೀಯ ಗೆಳತಿ ಯಾರು? ಈಕೆಯ ಹಿನ್ನೆಲೆ ಏನು?

Samantha: ನಟಿ ಸಮಂತಾ ಇತ್ತೀಚೆಗಷ್ಟೆ ಬಾಲಿಯಲ್ಲಿ ಪ್ರವಾಸ ಮುಗಿಸಿ ಬಂದಿದ್ದಾರೆ. ಬಾಲಿಗೆ ಸಮಂತಾ ಜೊತೆ ಹೋಗಿದ್ದ ಆ ಗೆಳತಿ ಯಾರೆಂದು ಸ್ಯಾಮ್ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅಂದಹಾಗೆ ಯಾರು ಆ ಆತ್ಮೀಯ ಗೆಳತಿ?

ಸಮಂತಾ ಜೊತೆ ಬಾಲಿ ಸುತ್ತಿ ಬಂದ ಆತ್ಮೀಯ ಗೆಳತಿ ಯಾರು? ಈಕೆಯ ಹಿನ್ನೆಲೆ ಏನು?
ಸಮಂತಾ
Follow us
ಮಂಜುನಾಥ ಸಿ.
|

Updated on:Aug 02, 2023 | 4:54 PM

ನಟಿ ಸಮಂತಾ (Samantha) ಸದ್ಯಕ್ಕೆ ಸಿನಿಮಾಗಳಿಂದ ಬಿಡುವು ಪಡೆದಿದ್ದಾರೆ. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸುವ ಉದ್ದೇಶದಿಂದ ಬರೋಬ್ಬರಿ ಒಂದು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ. ಶೂಟಿಂಗ್​ ಮುಗಿಯುತ್ತಲೆ ಮೊದಲು ಕೊಯಂಬತ್ತೂರಿನ ಇಶಾ ಸೆಂಟರ್​ಗೆ (Isha Center) ಭೇಟಿ ನೀಡಿ ಸದ್ಗುರು ಮಾರ್ಗದರ್ಶನದಲ್ಲಿ ಯೋಗ, ಧ್ಯಾನ ಅಭ್ಯಾಸ ಮಾಡಿದ ಸಮಂತಾ ಅದರ ಬಳಿಕ ಹಾರಿದ್ದು ಬಾಲಿಗೆ. ಪ್ರಕೃತಿ ಮಧ್ಯೆ ಆರಾಮದಿಂದ ಸಮಂತಾ ಸಮಯ ಕಳೆದಿದ್ದಾರೆ. ಸಮಂತಾ ಒಬ್ಬರೇ ಬಾಲಿ ಪ್ರವಾಸಕ್ಕೆ ಹೋಗಿರಲಿಲ್ಲ ಜೊತೆಗೆ ಗೆಳತಿಯೊಬ್ಬರನ್ನು ಕರೆದೊಯ್ದಿದ್ದರು. ಆ ಗೆಳತಿ ಯಾರು ಎಂದು ಸಮಂತಾ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಸ್ವತಃ ಸಮಂತಾ ಹಿಂದೊಮ್ಮೆ ಹೇಳಿಕೊಂಡಿದ್ದಂತೆ, ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಗೆಳೆಯರು ಗೆಳತಿಯರು ಇದ್ದಾರಂತೆ ಆದರೆ ಅತ್ಯಂತ ಆತ್ಮೀಯ ಗೆಳೆಯರು ಇರುವುದು ಚಿತ್ರರಂಗದಿಂದ ಹೊರಗೆ. ಹಾಗೆಯೇ ಸಮಂತಾ ಜೊತೆಗೆ ಬಾಲಿ ಟ್ರಿಪ್​ಗೆ ಹೋದ ಯುವತಿ ಸಹ ಸಮಂತಾರ ಅತ್ಯಂತ ಆತ್ಮೀಯ ಗೆಳತಿ ಆದರೆ ಚಿತ್ರರಂಗದಿಂದ ತುಸು ಅಂತರ ಕಾಯ್ದುಕೊಂಡಿರುವ ಆದರೆ ಕಲೆಯಲ್ಲಿ ಆಸಕ್ತಿ, ಪ್ರಾವಿಣ್ಯತೆ ಪಡೆದಿರುವ ಅನುಷಾ ಸ್ವಾಮಿ.

ಅನುಷಾ ಸ್ವಾಮಿ ಬಹುಕಲಾ ಪ್ರವೀಣೆ. ಅತ್ಯುತ್ತಮ ಭರತ ನಾಟ್ಯ ನೃತ್ಯಗಾರ್ತಿ ಆಗಿರುವ ಅನುಷಾ ಸ್ವಾಮಿ, ಪೋಲ್ ಡ್ಯಾನ್ಸರ್ ಸಹ ಹೌದು. ಸ್ವತಃ ಒಂದು ಡ್ಯಾನ್ಸ್ ಸ್ಟುಡಿಯೋವನ್ನು ಅನುಷಾ ಸ್ವಾಮಿ ಹೊಂದಿದ್ದಾರೆ. ಅಲ್ಲಿ ಪೋಲ್ ಡ್ಯಾನ್ಸ್ ಸೇರಿದಂತೆ ಹಲವು ವಿಧದ ನೃತ್ಯ ಪ್ರಕಾರಗಳನ್ನು ಕಲಿಸಿಕೊಡಲಾಗುತ್ತದೆ. ನೃತ್ಯ ಮಾತ್ರವೇ ಅಲ್ಲದೆ ಫಿಟ್​ನೆಸ್​ ಸಹ ಅನುಷಾರ ಜೀವನದ ಅವಿಭಾಜ್ಯ ಅಂಗ. ದೇಹವನ್ನು ಹುರಿಗಟ್ಟಿಸಿಕೊಂಡು ಆ ಮೂಲಕ ಮನಸ್ಸನ್ನು ಗಟ್ಟಿಯಾಗಿರಿಸಿಕೊಂಡಿದ್ದಾರೆ ಅನುಷಾ.

ಇದನ್ನೂ ಓದಿ:Samantha: ಗೆಳತಿಯೊಟ್ಟಿಗೆ ಸಮಂತಾರ ಬಾಲಿ ಟ್ರಿಪ್:​ ಇಲ್ಲಿವೆ ಚಿತ್ರಗಳು

ಅನುಷಾ ಅತ್ಯುತ್ತಮ ಮೇಕಪ್​ ಕಲಾವಿದೆಯೂ ಹೌದು. ಹಲವು ಸೆಲೆಬ್ರಿಟಿಗಳ ಮೇಕಪ್ ಜೊತೆಗೆ ಕೆಲವು ಸಿನಿಮಾಗಳಿಗೂ ಮೇಕಪ್ ಕಲಾವಿದೆಯಾಗಿ ಕೆಲಸ ಮಾಡಿದ್ದಾರೆ. ಇವುಗಳ ಜೊತೆಗೆ ಪ್ರವಾಸ, ಹೈಕಿಂಗ್, ಟ್ರೆಕ್ಕಿಂಗ್ ಇನ್ನಿತರೆ ಸಾಹಸ ಕ್ರೀಡೆಗಳಲ್ಲಿಯೂ ಅನುಷಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನೃತ್ಯ, ಫಿಟ್​ನೆಸ್ ಜೊತೆಗೆ ಕೆಲವು ಎನ್​ಜಿಓಗಳ ಜೊತೆಗೂ ಅನುಷಾ ಗುರುತಿಸಿಕೊಂಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೆಲಸ ಮಾಡುತ್ತಿರುವ ‘ಮಿಲಾಪ್’, ಪ್ರಕೃತಿ ಉಳಿವಿಗಾಗಿ ಕೆಲಸ ಮಾಡುತ್ತಿರುವ ಎನ್​ಜಿಓ ಜೊತೆಗೆ ಕೈಜೋಡಿಸಿದ್ದಾರೆ.

ಸ್ವತಃ ಫಿಟ್​ನೆಸ್ ಫ್ರೀಕ್ ಆಗಿರುವ ಹಾಗೂ ನಾರಿ ಶಕ್ತಿಯಲ್ಲಿ ವಿಶ್ವಾಸವಿಟ್ಟಿರುವ ಸಮಂತಾ ತಮ್ಮದೇ ಕನ್ನಡಿಯಂಥಹಾ ಗುಣಗಳನ್ನು ಹೊಂದಿರುವ ಅನುಷಾರಿಗೆ ಆಪ್ತ ಗೆಳಯರಾಗಿದ್ದಾರೆ. ಇಬ್ಬರೂ ಸಹ ಬಾಲಿ ಟ್ರಿಪ್​ನಲ್ಲಿ ಸಖತ್ ಮಜಾ ಮಾಡಿದ್ದಾರೆ. ಬಾಲಿ ಟ್ರಿಪ್​ನ ಬಹುತೇಕ ಸಮಯವನ್ನು ಪ್ರಕೃತಿ ಮಧ್ಯೆಯೇ ಕಳೆದಿದ್ದಾರೆ. ತಮ್ಮ ಟ್ರಿಪ್​ನ ಹಲವು ಚಿತ್ರಗಳು ಹಾಗೂ ವಿಡಿಯೋಗಳನ್ನು ಸಮಂತಾ ಹಾಗೂ ಅನುಷಾ ಸ್ವಾಮಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Wed, 2 August 23

ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್