ನ್ಯಾಯಾಲಯದಲ್ಲಿ ನರೇಶ್-ಪವಿತ್ರಾಗೆ ಗೆಲುವು, ರಮ್ಯಾ ರಘುಪತಿ ಅರ್ಜಿ ವಜಾ

Naresh-Pavithra Lokesh: ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್​ರ ಸಿನಿಮಾ ವಿರುದ್ಧ ರಮ್ಯಾ ರಘುಪತಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.

ನ್ಯಾಯಾಲಯದಲ್ಲಿ ನರೇಶ್-ಪವಿತ್ರಾಗೆ ಗೆಲುವು, ರಮ್ಯಾ ರಘುಪತಿ ಅರ್ಜಿ ವಜಾ
ನರೇಶ್-ಪವಿತ್ರಾ-ರಮ್ಯಾ ರಘುಪತಿ
Follow us
ಮಂಜುನಾಥ ಸಿ.
|

Updated on: Aug 02, 2023 | 3:52 PM

ತೆಲುಗು ನಟ ನರೇಶ್ (Naresh) ಹಾಗೂ ನಟಿ ಪವಿತ್ರಾ ಲೋಕೇಶ್ (Pavitra Lokesh) ಸಂಬಂಧದ ಕುರಿತು ಕಳೆದ ವರ್ಷ ಹಲವು ರೀತಿಯ ಸುದ್ದಿಗಳು ಹರಿದಾಡಿದ್ದವು. ನರೇಶ್ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆ (Ramya Raghupathi) ವಿಚ್ಛೇದನ ನೀಡದೆ ಪವಿತ್ರಾ ಲೋಕೇಶ್ ಅವರನ್ನು ಕಾನೂನು ಬಾಹಿರವಾಗಿ ವಿವಾಹವಾಗಿದ್ದಾರೆಂದು, ತಮಗೆ ಅನ್ಯಾಯ ಮಾಡಿದ್ದಾರೆಂದು ರಮ್ಯಾ ರಘುಪತಿ ಸುದ್ದಿಗೋಷ್ಠಿ ನಡೆಸಿ ಅಳಲು ತೋಡಿಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ನಟ ನರೇಶ್ ಸಹ ಸುದ್ದಿಗೋಷ್ಠಿ ನಡೆಸಿ ರಮ್ಯಾ ವಿರುದ್ಧ ಆರೋಪಗಳ ಸುರಿಮಳೆ ಮಾಡಿದ್ದರು. ಬಳಿಕ ನರೇಶ್ ಹಾಗೂ ಪವಿತ್ರಾ ಒಟ್ಟಿಗಿದ್ದ ಹೋಟೆಲ್​ ಬಳಿ ಹೋಗಿ ರಮ್ಯಾ ಜಗಳ ಮಾಡಿದ್ದರು.

ಅದಾದ ಬಳಿಕ ನರೇಶ್ ಹಾಗೂ ಪವಿತ್ರಾ ತಮ್ಮದೇ ಬದುಕಿನಲ್ಲಿ ನಡೆದಿರುವ ಘಟನೆಗಳನ್ನೇ ಆಧರಿಸಿ ‘ಮಳ್ಳಿ ಪೆಳ್ಳಿ’ ಸಿನಿಮಾ ಮಾಡಿದರು. ಈ ಸಿನಿಮಾದಲ್ಲಿ ರಮ್ಯಾ ರಘುಪತಿ ಪಾತ್ರವನ್ನು ಪರಮ ಸ್ಯಾಡಿಸ್ಟ್ ರೀತಿಯಲ್ಲಿಯೂ, ಮಹಾನ್ ಜಗಳಗಂಟಿ ರೀತಿಯಲ್ಲಿಯೂ ಚಿತ್ರಿಸಲಾಗಿತ್ತು. ಸಿನಿಮಾ ಬಿಡುಗಡೆ ಆದ ಬಳಿಕ ಸಿನಿಮಾದ ವಿರುದ್ಧ ರಮ್ಯಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಿನಿಮಾದ ಒಟಿಟಿ ಬಿಡುಗಡೆಗೆ ತಡೆ ನೀಡಬೇಕೆಂದು ರಮ್ಯಾ ಕೋರಿದ್ದರು. ಆದರೆ ಆ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ. ಅಸಲಿಗೆ ಸಿನಿಮಾ ಒಟಿಟಿಗೆ ಬಂದು ಬಹಳ ದಿನಗಳೇ ಕಳೆದುಬಿಟ್ಟಿದೆ. ಸಿನಿಮಾದ ಬಿಡುಗಡೆ ತಡೆಯಾಜ್ಞೆ ನೀಡಲು ನ್ಯಾಯಾಲಯ ಒಪ್ಪಿರಲಿಲ್ಲವಾದರೂ ಅರ್ಜಿಯ ವಿಚಾರಣೆ ಜಾರಿಯಲ್ಲಿಟ್ಟಿತ್ತು, ಇದೀಗ ಅರ್ಜಿಯನ್ನು ವಜಾಗೊಳಿಸಿದೆ.

ಇದನ್ನೂ ಓದಿ:‘ನನ್ನ ಖುಷಿಯಿಂದ ನೋಡಿಕೊಂಡ್ರೆ ಸಾಕು ಎಂದಿದ್ದೆ’; ನರೇಶ್ ಕೇಳಿದ್ದ ಮೊದಲ ಪ್ರಶ್ನೆಗೆ ಪವಿತ್ರಾ ಲೋಕೇಶ್ ಉತ್ತರ

ಇದರ ಹೊರತಾಗಿ ನರೇಶ್ ಹಾಗೂ ಕುಟುಂಬದವರು ತಮ್ಮ ನಿವಾಸಕ್ಕೆ ರಮ್ಯಾರ ಅಕ್ರಮ ಪ್ರವೇಶವನ್ನು ನಿಷೇಧಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು, ಈ ಪ್ರಕರಣದಲ್ಲಿ ನರೇಶ್ ಪರ ಆದೇಶ ಬಂದಿದೆ. ಅಕ್ರಮವಾಗಿ ರಮ್ಯಾ, ನರೇಶ್​ರ ನಿವಾಸ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಅಲ್ಲದೆ, ಕಳೆದ ಆರು ವರ್ಷಗಳಿಂದಲೂ ರಮ್ಯಾ ಹಾಗೂ ನರೇಶ್ ಪರಸ್ಪರ ಪ್ರತ್ಯೇಕವಾಗಿಯೇ ವಾಸಿಸುತ್ತಿರುವ ಕಾರಣ ಇಬ್ಬರ ಮದುವೆ ಅನೂರ್ಜಿತಗೊಳಿಸಬಹುದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ತೆಲುಗು ನಟ ನರೇಶ್ ಕರ್ನಾಟಕ ಮೂಲದ ರಮ್ಯಾ ರಘುಪತಿ ಸೇರಿದಂತೆ ಮೂವರನ್ನು ಮದುವೆಯಾಗಿದ್ದರು. ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇದನ ನೀಡಿರಲಿಲ್ಲವಾದರೂ ಈ ಇಬ್ಬರೂ ಕೆಲವಾರು ವರ್ಷಗಳಿಂದಲೂ ಒಟ್ಟಿಗಿರಲಿಲ್ಲ. ಆದರೆ 2022ರ ಜೂನ್ ತಿಂಗಳಲ್ಲಿ ಹಠಾತ್ತನೆ ಕರ್ನಾಟಕದ ಮಾಧ್ಯಮಗಳ ಮುಂದೆ ಬಂದಿದ್ದ ರಮ್ಯಾ ರಘುಪತಿ, ನಟ ನರೇಶ್ ತನಗೆ ಮೋಸ ಮಾಡಿದ್ದಾನೆಂದು, ವಿಚ್ಛೇದನ ನೀಡದೆ ಪವಿತ್ರಾ ಲೋಕೇಶ್ ಅನ್ನು ವರಿಸಿದ್ದಾನೆಂದು ಅಥವಾ ಅವರೊಟ್ಟಿಗೆ ಕಾನೂನು ಬಾಹಿರ ಸಂಬಂಧ ಇರಿಸಿಕೊಂಡಿದ್ದಾನೆಂದು ಆರೋಪಿಸಿದ್ದರು.

ನಟಿ ಪವಿತ್ರಾ ಲೋಕೇಶ್​ ಸಹ ಈ ಮೊದಲು ಎರಡು ಮದುವೆಯಾಗಿದ್ದರು. ಅವರೂ ಸಹ ಎರಡನೇ ಪತಿ ನಟ ಸುಚಿತೇಂದ್ರ ಪ್ರಸಾದ್​ಗೆ ವಿಚ್ಛೇದನ ನೀಡದೆ ನರೇಶ್ ಜೊತೆ ಲಿವಿನ್ ರಿಲೇಶನ್​ಷಿಪ್​ನಲ್ಲಿದ್ದರು. ಈಗಲೂ ನರೇಶ್ ಹಾಗೂ ಪವಿತ್ರಾ ಲಿವಿನ್ ರಿಲೇಷನ್​ನಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ