ಬಿಗ್ ಬಾಸ್ ಆದೇಶಕ್ಕೆ ಇಕ್ಕಟಿಗೆ ಸಿಲುಕಿದ ಹಂಸಾ; ಕ್ಯಾಪ್ಟನ್ ವಿರುದ್ಧ ನಿಂತ ಇಡೀ ಮನೆ
ಸ್ವರ್ಗ ಹಾಗೂ ನರಕ ನಿವಾಸಿಗಳ ಮಧ್ಯೆ ಸ್ವರ್ಗದವರದ್ದೇ ಗೆಲುವು ಎಂದು ಹಂಸಾ ಘೋಷಣೆ ಮಾಡಿದರು. ಇದರಿಂದ ನರಕ ನಿವಾಸಿಗಳು ಸಿಟ್ಟಾದರು. ‘ಮೋಸ ಮೋಸ..’ ಎಂದು ಘೋಷಣೆ ಕೂಗಲು ಶುರು ಮಾಡಿದರು. ‘ಯಾವ ಸೀಮೆ ಕ್ಯಾಪ್ಟನ್ನೀವು?’ ಎಂದು ಚೈತ್ರಾ ಆಕ್ರೋಶ ಹೊರಹಾಕಿದರು. ‘ನಾವು ಆಟ ಆಡಲ್ಲ’ ಎಂದು ಗೋಲ್ಡ್ ಸುರೇಶ್ ಹೇಳಿದರು.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಮೊದಲು ಕ್ಯಾಪ್ಟನ್ ಆದ ಖುಷಿಯಲ್ಲಿ ಹಂಸ ಇದ್ದರು. ಇದರಿಂದ ಅವರಿಗೆ ಇಮ್ಯುನಿಟಿ ಕೂಡ ಸಿಕ್ಕಿತ್ತು. ಆದರೆ, ಈ ಖುಷಿ ಹೆಚ್ಚು ದಿನ ಇರಲೇ ಇಲ್ಲ. ಎಲ್ಲರೂ ರೂಲ್ಸ್ ಬ್ರೇಕ್ ಮಾಡಿದಾಗ ಇವರು ಸುಮ್ಮನೆ ಇದ್ದರು ಎನ್ನುವ ಕಾರಣಕ್ಕೆ ಅವರ ಇಮ್ಯುನಿಟಿಯನ್ನು ಹಿಂಪಡೆದು ನಾಮಿನೇಟ್ ಮಾಡಲಾಗಿದೆ. ಇದರಿಂದ ಅವರಿಗೆ ಆತಂಕ ಶುರುವಾಗಿದೆ. ಹೀಗಿರುವಾಗಲೇ ಬಿಗ್ ಬಾಸ್ ಆದೇಶದಿಂದ ಹಂಸ ಇಕ್ಕಟ್ಟಿಗೆ ಸಿಲುಕಿದ್ದಾರೆ.
‘ಬಿಗ್ ಬಾಸ್’ನಲ್ಲಿ ಈ ಬಾರಿ ಸ್ವರ್ಗ ಹಾಗೂ ನರಕ ಎಂದು ಎರಡು ವಿಭಾಗ ಮಾಡಲಾಗಿದೆ. ಇಬ್ಬರ ಮಧ್ಯೆ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಈ ಟಾಸ್ಕ್ಗಳಿಗೆ ಕ್ಯಾಪ್ಟನ್ ಹಂಸಾ ಉಸ್ತುವಾರಿ ವಹಿಸಿಕೊಂಡಿದ್ದರು. ಫೌಲ್ ಆದ ವಿಚಾರಕ್ಕೆ ಸಂಬಂಧಿಸಿ ನರಕ ಹಾಗೂ ಸ್ವರ್ಗದ ಮಧ್ಯೆ ಕಿತ್ತಾಟ ನಡೆದಿದೆ. ಸ್ವರ್ಗ ನಿವಾಸಿಗಳು ಫೌಲ್ ಆಗಿಲ್ಲ ಎಂದು ವಾದಿಸಿದರೆ, ನರಕ ನಿವಾಸಿಗಳು ಸ್ವರ್ಗದವರದ್ದು ಫೌಲ್ ಆಗಿದೆ ಎಂದು ವಾದಿಸುತ್ತಾ ಬಂದರು.
ಇವರ ಕಿತ್ತಾಟದಿಂದ ಹಂಸಾ ಅವರಿಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲ. ಹೀಗಾಗಿ, ಅವರು ರೀ ಮ್ಯಾಚ್ ಆಡಿಸೋ ನಿರ್ಧಾರಕ್ಕೆ ಬಂದರು. ಇದರಿಂದ ಮಧ್ಯ ಪ್ರವೇಶಿಸಿದ ಬಿಗ್ ಬಾಸ್, ‘ಎಲ್ಲದಕ್ಕೂ ರೀ ಮ್ಯಾಚ್ ಉತ್ತರ ಅಲ್ಲ. ನಿಯಮಗಳು ನಿಮಗೆ ಗೊತ್ತಿವೆ. ಅದರ ಪ್ರಕಾರ ನಿರ್ಧಾರ ತೆಗೆದುಕೊಳ್ಳಿ’ ಎಂದು ಹೇಳಿದರು.
ಕೊನೆಗೆ ಸ್ವರ್ಗದವರದ್ದೇ ಗೆಲುವು ಎಂದು ಹಂಸಾ ಘೋಷಣೆ ಮಾಡಿದರು. ಇದರಿಂದ ನರಕ ನಿವಾಸಿಗಳು ಸಿಟ್ಟಾದರು. ‘ಮೋಸ ಮೋಸ..’ ಎಂದು ಘೋಷಣೆ ಕೂಗಲು ಶುರು ಮಾಡಿದರು. ‘ಯಾವ ಸೀಮೆ ಕ್ಯಾಪ್ಟನ್ನೀವು?’ ಎಂದು ಚೈತ್ರಾ ಆಕ್ರೋಶ ಹೊರಹಾಕಿದರು. ‘ನಾವು ಆಟ ಆಡಲ್ಲ’ ಎಂದು ಗೋಲ್ಡ್ ಸುರೇಶ್ ಹೇಳಿದರು.
ಇದನ್ನೂ ಓದಿ: ‘ಏನೇನೋ ಬೊಗಳುತ್ತಾನೆ’: ಪದೇಪದೇ ಕೆಣಕಿದ ಜಗದೀಶ್ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಹಂಸಾ ಅವರು ಮೊದಲಿನಿಂದಲೂ ಸ್ವರ್ಗದಲ್ಲೇ ಇದ್ದವರು. ಈ ಕಾರಣಕ್ಕೆ ಅವರು ಸ್ವರ್ಗದವರ ಪರವಾಗಿ ನಿಯಮಗಳನ್ನು ರಚಿಸುತ್ತಾರೆ, ಆದೇಶಗಳನ್ನು ನೀಡುತ್ತಾರೆ ಎಂಬುದು ಮನೆಯವರ ಆರೋಪ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.