ಶ್ರೀದೇವಿಯನ್ನು ಗಾಢವಾಗಿ ಪ್ರೀತಿಸಿದ್ದರೂ ಮದುವೆಯಾಗಲಿಲ್ಲವೇಕೆ ರಜನೀಕಾಂತ್
Rajinikanth: ರಜನೀಕಾಂತ್ ಹಾಗೂ ಶ್ರೀದೇವಿ ಒಟ್ಟಿಗೆ 18 ಸಿನಿಮಾಗಳಲ್ಲಿ ನಟಿಸಿದ್ದರು. ರಜನೀಕಾಂತ್ಗೆ ಶ್ರೀದೇವಿ ಮೇಲೆ ಬಹಳ ಪ್ರೀತಿಯಿತ್ತು. ಆದರೆ ಶ್ರೀದೇವಿಯನ್ನೇ ಮದುವೆ ಆಗುವೆ ಎಂದು ನಿರ್ಧಾರ ಸಹ ಮಾಡಿದ್ದರು. ಶ್ರೀದೇವಿಯ ತಾಯಿಯವರ ಬಗ್ಗೆ ಈ ಬಗ್ಗೆ ಮಾತುಕತೆ ಸಹ ಮಾಡಿದ್ದರಂತೆ. ಆದರೆ ಆ ಸಂದರ್ಭದಲ್ಲಿ ನಡೆದ ಒಂದು ಘಟನೆ ರಜನೀಕಾಂತ್ ಹಾಗೂ ಶ್ರೀದೇವಿಯನ್ನು ದೂರ ಮಾಡಿತು.

ತಮಿಳು ಚಿತ್ರರಂಗದ (Kollywood) ಸೂಪರ್ ಹಿಟ್ ಜೋಡಿಗಳಲ್ಲಿ ರಜನೀಕಾಂತ್ (Rajinikanth) ಮತ್ತು ಶ್ರೀದೇವಿ (Sridevi) ಜೋಡಿ ಪ್ರಮುಖವಾದುದು. ಇಬ್ಬರೂ ಒಟ್ಟಿಗೆ ಬರೋಬ್ಬರಿ 18 ಸಿನಿಮಾಗಳಲ್ಲಿ ನಟಿಸಿದ್ದರು. ಎಲ್ಲವೂ ಬಹುತೇಕ ಸೂಪರ್ ಹಿಟ್. ಅಸಲಿಗೆ ಶ್ರೀದೇವಿ ಹಾಗೂ ರಜನೀಕಾಂತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಹುತೇಕ ಒಂದೇ ಸಮಯದಲ್ಲಿ. ಶ್ರಿದೇವಿ ಮೊದಲಿಗೆ ಬಾಲನಟಿಯಾಗಿ ನಟಿಸಿದ್ದರು, ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದು 1976 ‘ಮೂಂಡ್ರು ಮದಿಚ್ಚು’ ಸಿನಿಮಾ ಮೂಲಕ. ರಜನೀಕಾಂತ್ಗೆ ಅದು ನಾಲ್ಕನೇ ಸಿನಿಮಾ. ಆ ನಂತರ ಇಬ್ಬರೂ ಹಲವಾರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರು.
ರಜನೀಕಾಂತ್ಗೆ ಶ್ರೀದೇವಿ ಮೇಲೆ ವಿಪರೀತ ಪ್ರೀತಿ ಇತ್ತು. ಶ್ರೀದೇವಿ ಇನ್ನೂ 16ನೇ ವಯಸ್ಸಿನಲ್ಲಿದ್ದಾಗಲೇ ರಜನೀಕಾಂತ್ ಶ್ರೀದೇವಿಯನ್ನು ವಿವಾಹವಾಗುವ ಆಲೋಚನೆ ಮಾಡಿದ್ದರು. ಶ್ರೀದೇವಿಯ ತಾಯಿಯ ಜೊತೆ ಆಪ್ತವಾಗಿದ್ದ ರಜನೀಕಾಂತ್, ಈ ಬಗ್ಗೆ ಅವರ ತಾಯಿಯ ಬಳಿಯೂ ಚರ್ಚಿಸಿದ್ದರು. ಶ್ರೀದೇವಿಯನ್ನೇ ಮದುವೆ ಆಗುವ ಆಲೋಚನೆಯಲ್ಲಿದ್ದ ರಜನೀಕಾಂತ್ಗೆ, ಆ ಸಂದರ್ಭದಲ್ಲಿ ನಡೆದ ಒಂದು ಘಟನೆ ಮನಸ್ಸು ಬದಲಾಯಿಸುವಂತೆ ಮಾಡಿತು. ಶ್ರೀದೇವಿಗೂ ಸಹ ರಜನೀಕಾಂತ್ ಬಗ್ಗೆ ಪ್ರೀತಿ ಇತ್ತು. ಒಮ್ಮೆ ಶೂಟಿಂಗ್ ಸಮಯದಲ್ಲಿ ರಜನೀಕಾಂತ್ಗೆ ಅನಾರೋಗ್ಯವಾದಾಗ ಅವರು ಬೇಗ ಗುಣಮುಖವಾಗಲೆಂದು ಏಳು ದಿನ ಉಪವಾಸ ಸಹ ಮಾಡಿದ್ದರಂತೆ ಶ್ರೀದೇವಿ.
ಇದನ್ನೂ ಓದಿ:ಕೋಟಿಲಿಂಗೇಶ್ವರಕ್ಕೂ ರಜನೀಕಾಂತ್-ಕಮಲ್ ಹಾಸನ್ಗೂ ಇದೆ ನಂಟು: ವಿಡಿಯೋ
ಒಮ್ಮೆ ರಜನೀಕಾಂತ್, ಶ್ರೀದೇವಿಯ ಹೊಸ ಮನೆಯ ಗೃಹ ಪ್ರವೇಶಕ್ಕೆಂದು ಹೋದರು. ಶೂಟಿಂಗ್ ಮುಗಿಸಿ ತುಸು ತಡವಾಗಿ ಶ್ರೀದೇವಿಯ ಮನೆಗೆ ರಜನೀಕಾಂತ್ ಹೋದರು. ರಜನೀಕಾಂತ್, ಶ್ರೀದೇವಿಯ ಹೊಸ ಮನೆಗೆ ಕಾಲಿಟ್ಟ ಕೂಡಲೇ ಕರೆಂಟ್ ಹೊರಟು ಹೋಯ್ತು. ಇಡೀ ಮನೆಯನ್ನು ಕತ್ತಲು ಆವರಿಸಿತು. ಧಾರ್ಮಿಕ ಜೀವಿ ಆಗಿದ್ದ ರಜನೀಕಾಂತ್ಗೆ ಇದು ಅಪಶಕುನ ಎನಿಸಿತು. ಈ ಒಂದೇ ಕಾರಣಕ್ಕೆ ಅವರು ಶ್ರೀದೇವಿಯಿಂದ ದೂರಾದರಂತೆ. ಈ ವಿಷಯವನ್ನು ರಜನೀಕಾಂತ್ರ ಗುರು ಕೆ ಬಾಲಚಂದರ್ ಹೇಳಿದ್ದರು.
ಆ ನಂತರ ರಜನೀಕಾಂತ್, ಲತಾ ಅವರನ್ನು ವಿವಾಹವಾದರು. ಶ್ರೀದೇವಿ, ಆ ಬಳಿಕ ಬಾಲಿವುಡ್ನಲ್ಲಿ ಬ್ಯುಸಿಯಾದರು. ಅಲ್ಲಿ ಅವರು ನಟ ಮಿಥುನ್ ಚಕ್ರವರ್ತಿಯವರನ್ನು ಬಹುವಾಗಿ ಪ್ರೀತಿಸಿದ್ದರು. ಆದರೆ ಮಿಥುನ್ ಚಕ್ರವರ್ತಿ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಲು ಒಪ್ಪದ ಕಾರಣ ಶ್ರೀದೇವಿ ಆಘಾತಕ್ಕೆ ಒಳಗಾದರು. ಆಗ ತೀವ್ರ ಖಿನ್ನತೆ ಅನುಭವಿಸಿದ್ದರಂತೆ ಶ್ರೀದೇವಿ. ಅದಾದ ಬಳಿಕ ನಿರ್ಮಾಪಕ ಬೋನಿ ಕಪೂರ್, ಶ್ರೀದೇವಿಯನ್ನು ಪ್ರೀತಿಸಿ ವಿವಾಹವಾದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ