‘ಪುಷ್ಪ 3’ನಲ್ಲಿ ಅಲ್ಲು ಅರ್ಜುನ್ ಜೊತೆ ಇನ್ನಿಬ್ಬರು ಸ್ಟಾರ್ ಹೀರೋಗಳು

Allu Arjun: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದೆ. ‘ಪುಷ್ಪ 3’ ಸಿನಿಮಾ ಸಹ ಬಿಡುಗಡೆ ಆಗಲಿದ್ದು, ಸಿನಿಮಾದ ಬಗ್ಗೆ ಈಗಾಗಲೇ ಹಲವು ಸುದ್ದಿಗಳು ಹರಿದಾಡುತ್ತಿವೆ. ‘ಪುಷ್ಪ 3’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ಇನ್ನೂ ಇಬ್ಬರು ಸ್ಟಾರ್ ನಟರು ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಯಾರವರು?

‘ಪುಷ್ಪ 3’ನಲ್ಲಿ ಅಲ್ಲು ಅರ್ಜುನ್ ಜೊತೆ ಇನ್ನಿಬ್ಬರು ಸ್ಟಾರ್ ಹೀರೋಗಳು
Pushpa 2

Updated on: Apr 03, 2025 | 10:43 AM

ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಸಿನಿಮಾ ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಸಿನಿಮಾದ ಮೂರನೇ ಭಾಗವೂ ಬರಲಿದೆ ಎಂಬುದನ್ನು ಈಗಾಗಲೇ ಘೋಷಣೆ ಮಾಡಲಾಗಿದ್ದು, ಸಿನಿಮಾದ ಚಿತ್ರೀಕರಣ 2026ರಲ್ಲಿ ಪ್ರಾರಂಭ ಆಗಲಿದೆ ಎಂದು ಈಗಾಗಲೇ ಸಿನಿಮಾದ ನಿರ್ಮಾಪಕರು ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ‘ಪುಷ್ಪ 3’ (Pushpa 3) ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ಇನ್ನೂ ಇಬ್ಬರು ಸ್ಟಾರ್ ನಟರು ನಟಿಸಲಿದ್ದಾರೆ ಎಂಬ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡುತ್ತಿವೆ. ಈ ಬಗ್ಗೆ ಸ್ವತಃ ಸುಕುಮಾರ್ ಉತ್ತರ ನೀಡಿದ್ದಾರೆ.

‘ಪುಷ್ಪ 3’ ಸಿನಿಮಾನಲ್ಲಿ ನಟ ನಾನಿ ಮತ್ತು ವಿಜಯ್ ದೇವರಕೊಂಡ ಅವರುಗಳು ವಿಲನ್ ಪಾತ್ರಗಳಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅಸಲಿಗೆ ವಿಜಯ್ ದೇವರಕೊಂಡ ‘ಪುಷ್ಪ 3’ ಸಿನಿಮಾದಲ್ಲಿ ನಟಿಸುವ ಬಗ್ಗೆ ಈ ಹಿಂದೆಯೇ ಸುದ್ದಿ ಹರಿದಾಡಿತ್ತು. ಆದರೆ ಈಗ ಬರುತ್ತಿರುವ ಹೊಸ ಸುದ್ದಿಯಂತೆ ವಿಜಯ್ ದೇವರಕೊಂಡ ಮಾತ್ರವೇ ಅಲ್ಲದೆ ನಟ ನಾನಿ ಸಹ ‘ಪುಷ್ಪ 3’ ಸಿನಿಮಾನಲ್ಲಿ ನಟಿಸಲಿದ್ದಾರಂತೆ.

ಇತ್ತೀಚೆಗೆ ಕಾಲೇಜು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿರ್ದೇಶಕ ಸುಕುಮಾರ್ ಅವರಿಗೆ ಇದೇ ಪ್ರಶ್ನೆ ಎದುರಾಯ್ತು. ಪ್ರಶ್ನೆಗೆ ಜಾಣತನದ ಉತ್ತರ ನೀಡಿದ ಸುಕುಮಾರ್, ‘ನೀವು 2025 ರಲ್ಲಿ ನಿಮ್ಮೆದುರು ಇರುವ ಸುಕುಮಾರ್​ ಅನ್ನು ‘ಪುಷ್ಪ 3’ ಸಿನಿಮಾ ಬಗ್ಗೆ ಕೇಳಿದರೆ ಆತನಿಗೆ ಏನೂ ಗೊತ್ತಿಲ್ಲ. ಆದರೆ ನೀವು 2026 ರ ಸುಕುಮಾರ್​ಗೆ ‘ಪುಷ್ಪ 3’ ಸಿನಿಮಾ ಬಗ್ಗೆ ಕೇಳಿದರೆ ಆತ ಉತ್ತರ ನೀಡಬಹುದು’ ಎಂದಿದ್ದಾರೆ.

ಇದನ್ನೂ ಓದಿ
ಐಶಾರಾಮಿ ಕಾರು ಖರೀದಿ ಮಾಡಿದ ರಶ್ಮಿಕಾ ಮಂದಣ್ಣ, ಬೆಲೆ ಎಷ್ಟು ಕೋಟಿ?
ರಶ್ಮಿಕಾಗೆ ಹಿಂದಿ ಕಲಿಯಲು ಆಗಲ್ಲ, ಕಾರಣ ಹೇಳಿದ ಸಲ್ಮಾನ್ ಖಾನ್
‘ಮಾಣಿಕ್ಯ’ ಚಿತ್ರದ ನಟಿ ರನ್ಯಾ ಬಳಿ ಸಿಕ್ಕಿದ್ದು ಬರೋಬ್ಬರಿ 15 ಕೆಜಿ ಚಿನ್ನ
ಪುಡಿರೌಡಿ ತರ ಆಡೋದು ಬಿಡಿ, ಸಿಎಂ ಆದ್ರೆ ಕಷ್ಟ ಇದೆ’; ಡಿಕೆಶಿಗೆ ಕೌಂಟರ್

ಇದನ್ನೂ ಓದಿ:ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ ಸೂಪರ್ ಹಿಟ್ ಸಿನಿಮಾ ‘ಪುಷ್ಪ 2’

‘ಪುಷ್ಪ 2’ ಸಿನಿಮಾದ ಅಂತ್ಯದಲ್ಲಿ ವಿಲನ್ ಒಬ್ಬರ ಎಂಟ್ರಿಯನ್ನು ತೋರಿಸಲಾಗಿದೆ. ವಿಲನ್, ಪುಷ್ಪ ಅನ್ನು ಕೊಲ್ಲಲು ಹೂಗುಚ್ಛದಲ್ಲಿ ಬಾಂಬ್ ಇಟ್ಟು ಕಳಿಸಿರುತ್ತಾನೆ. ಡೆಟೊನೇಟರ್ ಒತ್ತಿ, ಪುಷ್ಪನ ಮನೆಯಲ್ಲಿ ಬಾಂಬ್ ಸಿಡಿಯುವ ದೃಶ್ಯವನ್ನು ತೋರಿಸಲಾಗುತ್ತದೆ. ಆದರೆ ಆ ಬಾಂಬ್ ಇಟ್ಟವರು ಯಾರು, ಬಾಂಬ್​ನ ಬಟನ್ ಒತ್ತುವ ಆ ಕೈ ಯಾರದ್ದು ಎಂಬುದನ್ನು ಮಾತ್ರ ತೋರಿಸಿಲ್ಲ. ಅದರು ‘ಪುಷ್ಪ 3’ನಲ್ಲಿ ರಿವೀಲ್ ಆಗಲಿದೆ.

ನಟ ನಾನಿ ಈಗಾಗಲೇ ಹಳ್ಳಿಗಾಡಿನ ಒರಟು ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರ ನಟನೆಯ ‘ದಸರಾ’ ಸಿನಿಮಾದ ನಾಯಕನ ಪಾತ್ರ ತುಸು ‘ಪುಷ್ಪ’ ಪಾತ್ರವನ್ನೇ ಹೋಲುವಂತಿತ್ತು. ಆದರೆ ವಿಜಯ್ ದೇವರಕೊಂಡಗೆ ಇದು ಮೊದಲ ಪ್ರಯತ್ನ ಆಗಲಿದೆ. ‘ಪುಷ್ಪ 2’ ಸಿನಿಮಾದ ಬಳಿಕ ಅಸಲಿಗೆ ಸುಕುಮಾರ್, ವಿಜಯ್ ದೇವರಕೊಂಡ ಜೊತೆಗೆ ಬೇರೆಯದ್ದೇ ಸಿನಿಮಾ ನಿರ್ದೇಶಿಸಬೇಕಿತ್ತು. ಆದರೆ ಆ ಕತೆಯನ್ನೇ ತುಸು ಬ್ಲೆಂಡ್ ಮಾಡಿ ‘ಪುಷ್ಪ 3’ ಕತೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ