ಯಶ್​ಗೆ ಇಷ್ಟ ಆಗದೆ ಇರುವ ಒಂದು ವಿಚಾರ ಯಾವುದು?

‘ಕೆಜಿಎಫ್ 2’ ರಿಲೀಸ್ ಸಂದರ್ಭ. ಈ ವೇಳೆ ಯಶ್ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಾ ಇದ್ದರು. ಈ ವೇಳೆ ಯಶ್ ಅವರು ಹಿಂದಿ ಮಾಧ್ಯಮಗಳ ಜೊತೆಯೂ ಮಾತನಾಡಿದ್ದರು. ಆಗ ಸಂದರ್ಶಕ ಅಭಿಮಾನಿಯ ಕಮೆಂಟ್ ಓದಿ ಹೇಳಿದ್ದ. ಯಶ್ ಅವರು ಇದನ್ನು ಪ್ರೀತಿಯಿಂದ ಸ್ವೀಕರಿಸಿದ್ದರು.

ಯಶ್​ಗೆ ಇಷ್ಟ ಆಗದೆ ಇರುವ ಒಂದು ವಿಚಾರ ಯಾವುದು?
ಯಶ್
Follow us
| Updated By: ರಾಜೇಶ್ ದುಗ್ಗುಮನೆ

Updated on: Sep 14, 2024 | 8:09 AM

ಒಂದು ಹೀರೋ ಗೆಲುವು ಕಂಡರೆ, ದೊಡ್ಡ ಯಶಸ್ಸು ಪಡೆದರೆ ಅವರನ್ನು ಅನೇಕರು ಬೇರೆ ಬೇರೆ ನಟರಿಗೆ ಹೋಲಿಕೆ ಮಾಡುವ ಸಂಪ್ರದಾಯ ನಮ್ಮಲ್ಲಿ ಇದೆ. ಇದನ್ನು ಕೆಲವರು ಹೊಗಳಿಕೆ ಎಂದು ಪರಿಗಣಿಸುತ್ತಾರೆ. ಇನ್ನೂ ಕೆಲವರು ಇದನ್ನು ಒಪ್ಪುವುದಿಲ್ಲ. ಈ ಮೊದಲು ರಾಕಿಂಗ್ ಸ್ಟಾರ್ ಯಶ್ ಅವರನ್ನು ಟಾಲಿವುಡ್ ಹೀರೋ ಪ್ರಭಾಸ್​​ಗೆ ಹೋಲಿಕೆ ಮಾಡಲಾಗಿತ್ತು. ಆದರೆ, ಯಶ್ ಅವರನ್ನು ಇದನ್ನು ಒಪ್ಪಿರಲಿಲ್ಲ. ಅವರು ನೇರ ಮಾತುಗಳಲ್ಲಿ ಉತ್ತರ ಕೊಟ್ಟಿದ್ದರು.

ಅದು ‘ಕೆಜಿಎಫ್ 2’ ರಿಲೀಸ್ ಸಂದರ್ಭ. ಈ ವೇಳೆ ಯಶ್ ಅವರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಾ ಇದ್ದರು. ಈ ವೇಳೆ ಯಶ್ ಅವರು ಹಿಂದಿ ಮಾಧ್ಯಮಗಳ ಜೊತೆಯೂ ಮಾತನಾಡಿದ್ದರು. ಆಗ ಸಂದರ್ಶಕ ಅಭಿಮಾನಿಯ ಕಮೆಂಟ್ ಓದಿ ಹೇಳಿದ್ದ. ಯಶ್ ಅವರು ಇದನ್ನು ಪ್ರೀತಿಯಿಂದ ಸ್ವೀಕರಿಸಿದ್ದರು. ಜೊತೆಗೆ ತಮ್ಮನ್ನು ಬೇರೆಯವರಿಗೆ ಹೋಲಿಕೆ ಮಾಡದಂತೆ ಪರೋಕ್ಷವಾಗಿ ಹೇಳಿದ್ದರು.

View this post on Instagram

A post shared by film point (@filmpoint_offl)

‘ಯಶ್ ಬಾಲಿವುಡ್‌ನ ಮುಂದಿನ ಪ್ರಭಾಸ್. ಅವರ ಹೆಸರು ಸಾಕಷ್ಟು ಜನಪ್ರಿಯತೆ ಪಡೆಯಲಿದೆ. ಈ ಕಮೆಂಟ್​ನ ಸೇವ್ ಮಾಡಿಟ್ಟುಕೊಳ್ಳಿ’ ಎಂಬುದು ಅಭಿಮಾನಿಯ ಕಮೆಂಟ್ ಆಗಿತ್ತು. ಇದಕ್ಕೆ ಯಶ್ ಉತ್ತರಿಸಿದರು. ‘ನಾನು ಯಶ್ ಮಾತ್ರ. ಪ್ರಭಾಸ್ ಕೂಡ ಒಳ್ಳೆಯ ಕಲಾವಿದ. ಎಲ್ಲರಿಗೂ ಅವರವರ ಚಾರ್ಮ್ ಇರುತ್ತದೆ. ಇದನ್ನು ಕಾಂಪ್ಲಿಮೆಂಟ್ ಆಗಿ ತೆಗೆದುಕೊಳ್ಳುತ್ತೇನೆ. ಪ್ರಭಾಸ್ ಅವರು ಸಾಕಷ್ಟು ಅಚಿವ್​ ಮಾಡಿದ್ದಾರೆ. ಆರಂಭದಿಂದಲೂ ನಾನು ಹೋಲಿಕೆಯನ್ನು ಇಷ್ಟಪಡಲ್ಲ. ಅದನ್ನು ಮಾಡಬಾರದು’ ಎಂದಿದ್ದರು ಯಶ್.

ಇದನ್ನೂ ಓದಿ: ‘ಅಮ್ಮಾವ್ರ ಗಂಡ’ ಚಿತ್ರದ ನಟಿ ಭಾಗ್ಯಶ್ರೀ ಪುತ್ರಿಯ ಸಿನಿಮಾಗೆ ನಾಗಶೇಖರ್​ ನಿರ್ದೇಶನ

ಅಂದು ಅಭಿಮಾನಿ ಹೇಳಿದ ಮಾತು ನಿಜವಾಗಿದೆ ಎನ್ನಬಹುದು. ಯಶ್ ಹೆಸರು ಎಲ್ಲ ಕಡೆಗಳಲ್ಲಿ ಜನಪ್ರಿಯತೆ ಪಡೆದಿದೆ. ಬಾಲಿವುಡ್ ನಿರ್ಮಾಪಕರು ಯಶ್ ಅವರ ಬಾಗಿಲನ್ನು ತಟ್ಟುತ್ತಿದ್ದಾರೆ. ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಹಾಲಿವುಡ್ ತಂತ್ರಜ್ಞರು ಬಂದಿದ್ದಾರೆ. ಅದೇ ರೀತಿ ಯಶ್ ಅವರು ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಹಿಂದಿಯ ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.