AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಯ ಕೈಚಳಕದಲಿ ಅರಳಿತು ಯಶ್​ ಫ್ಯಾಮಿಲಿ ಚಿತ್ರ: ಪೆಂಟಿಂಗ್​​​ ಕಂಡು ರಾಕಿ ಬಾಯ್ ಫಿದಾ ​​                 ​   

ಕಲಾವಿದರಾದ ಕೃಷ್ಣ ಅವರು ಯಶ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರ ಕೈಚಳಕದಲ್ಲಿ ಯಶ್​ ಅವರ ಮುದ್ದಾದ ಫ್ಯಾಮಿಲಿ ಚಿತ್ರ ಅರಳಿದೆ. 

ಅಭಿಮಾನಿಯ ಕೈಚಳಕದಲಿ ಅರಳಿತು ಯಶ್​ ಫ್ಯಾಮಿಲಿ ಚಿತ್ರ: ಪೆಂಟಿಂಗ್​​​ ಕಂಡು ರಾಕಿ ಬಾಯ್ ಫಿದಾ ​​                 ​   
ನಟ ಯಶ್​, ಕಲಾವಿದ ಕೃಷ್ಣ
TV9 Web
| Edited By: |

Updated on:Nov 26, 2022 | 8:22 PM

Share

ನಟ ರಾಕಿಂಗ್​ ಸ್ಟಾರ್​​ ಯಶ್ (Yash) ಅವರ ‘ಕೆಜಿಎಫ್​ 2’ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗೆಲುವು ಕಂಡಿದೆ. ಸದ್ಯ ಬೇರೆ ಬೇರೆ ರೀತಿಯ ಸ್ಕ್ರಿಪ್ಟ್​ಗಳನ್ನು ಕೇಳುವುದರಲ್ಲಿ ಯಶ್​ ಬ್ಯುಸಿ ಆಗಿದ್ದಾರೆ. ಜೊತೆಗೆ ತಮ್ಮ ಕುಟುಂಬದವರೊಂದಿಗೂ ಅವರು ಕಾಲ ಕಳೆಯುತ್ತಿದ್ದಾರೆ. ಆದರೆ ಸಿನಿಮಾ ವಿಚಾರವಾಗಿ ಇಲ್ಲಿಯವರೆಗೂ ಯಾವುದೇ ರೀತಿಯ ಮಾಹಿತಿ ಬಿಟ್ಟಿಕೊಟ್ಟಿಲ್ಲ ನಟ ಯಶ್. ಅವರ ಮುಂದಿನ ಚಿತ್ರ ಯಾವುದು? ಚಿತ್ರದ ನಿರ್ದೇಶಕರು ಯಾರು? ಯಾವ ರೀತಿಯ ಸ್ಕ್ರಿಪ್ಟ್​ನ್ನು ಈ ಸಲ ಆಯ್ಕೆ ಮಾಡಿಕೊಳ್ಳುತ್ತಾರೆ ಹೀಗೆ ನೂರಾರು ಪ್ರಶ್ನೆಗಳು ಅವರ ಫ್ಯಾನ್ಸ್​​ ಕೇಳುತ್ತಿದ್ದಾರೆ. ತಮ್ಮ ನೆಚ್ಚಿನ ನಟರಿಗಾಗಿ ಏನು ಬೇಕಾದರು ಮಾಡಲು ಅಭಿಮಾನಿಗಳು ಸಿದ್ಧರಿರುತ್ತಾರೆ. ಒಂದು ಚಿತ್ರದ ಬಿಡುಗಡೆಯಿಂದ ಹಿಡಿದು ಕಟೌಟ್​, ಹಾಲಿನ ಅಭಿಷೇಕ, ಊಟದ ವ್ಯವಸ್ಥೆ ಕೊನೆಗೆ ಚಿತ್ರವನ್ನು ಗೆಲ್ಲಿಸುವವರು ಅವರೇ.

‘ಕೆಜೆಎಫ್​ 2’ ಚಿತ್ರ ಬಿಡುಗಡೆಯಾದಾಗ ಅಭಿಮಾನಿಗಳು ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಲು ಸುಮಾರು 20,700 ಪುಸ್ತಕಗಳನ್ನು ಬಳಸಿ ಯಶ್​​ ಅವರ ಬೃಹತ್ ಮೊಸಾಯಿಕ್ ಭಾವಚಿತ್ರ ರಚಿಸಿ ವಿಶ್ವ ದಾಖಲೆ ಬರೆದಿದ್ದರು. ಅದೇ ರೀತಿಯಾಗಿ ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ನಟ ಯಶ್ ಅವರಿಗೆ ಸಖತ್​ ಗಿಫ್ಟ್​ ಒಂದನ್ನು ನೀಡಿದ್ದಾರೆ. ಝಾರ್ಖಂಡ್​ ಮೂಲದ ಕಲಾವಿದರಾದ ಕೃಷ್ಣ ಅವರು ಯಶ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರ ಕೈಯಿಂದ ಯಶ್​ ಅವರ ಮುದ್ದಾದ ಫ್ಯಾಮಿಲಿ ಚಿತ್ರ ಅರಳಿದೆ.

View this post on Instagram

A post shared by Krish (@fly_pen_official)

ಅಭಿಮಾನಿ ಕೃಷ್ಣ ಅವರು ಯಶ್​, ರಾಧಿಕಾ ಪಂಡಿತ ಮತ್ತು ಮಕ್ಕಳಾದ ಆಯ್ರಾ, ಯಥರ್ವ್ ಒಟ್ಟಿಗೆ ಒಂದೇ ಫ್ರೇಮ್​ನಲ್ಲಿ ಚಿತ್ರಿಸಿದ್ದಾರೆ. ಜೊತೆಗೆ ಈ ಪೆಂಟಿಂಗ್​​ನ್ನು ಯಶ್​ ಮತ್ತು ರಾಧಿಕಾ ದಂಪತಿ ಅವರನ್ನು ಭೇಟಿ ಮಾಡಿ ನೀಡಿದ್ದಾರೆ. ಈ ವಿಚಾರವನ್ನು ಕೃಷ್ಣ ಅವರು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಲಾವಿದ ಕೃಷ್ಣ ಅವರು ಯಶ್ ಅವರ ಕುಟುಂಬದ ಮುದ್ದಾದ ಪೆಂಟಿಂಗ್​​ನ್ನು ತುಂಬಾ ಎಂಜಾಯ್​ ಮಾಡಿಕೊಂಡು ಬರೆದಿದ್ದಾರಂತೆ. ನಟ ಯಶ್​ ಅವರು ಚಿತ್ರವನ್ನು ಪಡೆದುಕೊಂಡು ಕಲಾವಿದ ಕೃಷ್ಣ ಅವರನ್ನು ಮಾತನಾಡಿಸಿದ್ದು, ‘ಚಿತ್ರ ತುಂಬಾನೇ ಚೆನ್ನಾಗಿದೆ. ನನಗೆ ಇಷ್ಟವಾಯಿತು ಧನ್ಯವಾದ’ ಎಂದು ಹೇಳಿದ್ದಾರೆ. ಜೊತೆಗೆ ಕಲಾವಿದ ಕೃಷ್ಣ ಅವರ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಕೃಷ್ಣ ಅವರು ಬಿಡಿಸಿರುವ ಈ ಚಿತ್ರ ಎಲ್ಲೆಡೆ ವೈರಲ್​ ಆಗುತ್ತಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:21 pm, Sat, 26 November 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್