‘ಟಾಕ್ಸಿಕ್’ ಚಿತ್ರದ ‘ತಬಾಹಿ’ ವಿಡಿಯೋ ಸಾಂಗ್ ರಿಲೀಸ್​​ಗೆ ದಿನಾಂಕ ಫಿಕ್ಸ್?

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಆಗಸ್ಟ್ 26ರಂದು ತೆರೆಕಾಣಲಿದೆ. ಜುಲೈನಿಂದಲೇ ಚಿತ್ರದ ಭರ್ಜರಿ ಪ್ರಚಾರ ಕಾರ್ಯ ಆರಂಭವಾಗಲಿದ್ದು, ಜುಲೈ ಎರಡನೇ ವಾರದಲ್ಲಿ 'ತಬಾಹಿ' ವಿಡಿಯೋ ಸಾಂಗ್ ರಿಲೀಸ್ ಆಗಲಿದೆ. ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾ ಹಿನ್ನೆಲೆ ಹೊಂದಿರುವ ಈ ಹೈ-ಬಜೆಟ್ ಆಕ್ಷನ್ ಚಿತ್ರದಲ್ಲಿ ಯಶ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್-ಇಂಡಿಯಾ ಸಿನಿಮಾ ದೇಶಾದ್ಯಂತ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ.

‘ಟಾಕ್ಸಿಕ್’ ಚಿತ್ರದ ‘ತಬಾಹಿ’ ವಿಡಿಯೋ ಸಾಂಗ್ ರಿಲೀಸ್​​ಗೆ ದಿನಾಂಕ ಫಿಕ್ಸ್?
ತಬಾಹಿ ಸಾಂಗ್

Updated on: Jun 26, 2026 | 7:51 AM

ಮುಖ್ಯಾಂಶಗಳು

  • ‘ಟಾಕ್ಸಿಕ್’ ಹಬ್ಬಕ್ಕೆ ಕೌಂಟ್‌ಡೌನ್ ಶುರುವಾಗಿದೆ
  • ಜುಲೈನಿಂದಲೇ ಶುರುವಾಗಲಿದೆ ಬಿರುಸಿನ ಪ್ರಚಾರ
  • 'ತಬಾಹಿ' ವಿಡಿಯೋ ಸಾಂಗ್ ರಿಲೀಸ್​​ಗೆ ದಿನಾಂಕ ಫಿಕ್ಸ್

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ (Toxic) ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಆಗಸ್ಟ್ 26ರಂದು ಸಿನಿಮಾ ತೆರೆಮೇಲೆ ಬರಲಿದೆ. ಈ ಚಿತ್ರ ಸಾಕಷ್ಟು ಬಾರಿ ತನ್ನ ರಿಲೀಸ್​ ದಿನಾಂಕವನ್ನು ಮುಂದಕ್ಕೆ ಹಾಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಟಾಕ್ಸಿಕ್’ ಸಿನಿಮಾನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಇರುವುದರಿಂದ ಈ ರೀತಿಯ ಕ್ರಮ ಕೈಗೊಳ್ಳಲಾಗಿತ್ತು. ಸದ್ಯದ ಮಾಹಿತಿ ಪ್ರಕಾರ ಜುಲೈನಿಂದಲೇ ‘ಟಾಕ್ಸಿಕ್’ ಹಬ್ಬ ಶುರುವಾಗಲಿದೆ.

‘ಟಾಕ್ಸಿಕ್’ ಚಿತ್ರ ತುಂಬಾನೇ ದೊಡ್ಡ ಮಟ್ಟದಲ್ಲಿ ತೆರೆಗೆ ಬರಲು ರೆಡಿ ಆಗಿದೆ. ಈ ಕಾರಣದಿಂದ ಜುಲೈನಿಂದಲೇ ಸಿನಿಮಾದ ಪ್ರಚಾರ ಕಾರ್ಯ ಆರಂಭ ಆಗಲಿದೆಯಂತೆ. ಜುಲೈ ಎರಡನೇ ವಾರದಲ್ಲಿ ‘ತಬಾಹಿ’ಯ ವಿಡಿಯೋ ಸಾಂಗ್ ರಿಲೀಸ್ ಆಗಲಿದೆ ಎಂದು ವರದಿ ಆಗಿದೆ. ಈ ಹಾಡಿನಲ್ಲಿ ಸಖತ್ ಬೋಲ್ಡ್ ದೃಶ್ಯಗಳು ಇರಲಿವೆ ಎಂದು ಊಹಿಸಲಾಗಿದೆ.

ಈ ಮೊದಲೇ ‘ತಬಾಹಿ’ ಚಿತ್ರದ ಲಿರಿಕಲ್ ವರ್ಷನ್ ರಿಲೀಸ್ ಆಗಿದೆ. ಆಗಲೇ ವಿಡಿಯೋ ಸಾಂಗ್ ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿಕೊಳ್ಳುವ ಪ್ಲ್ಯಾನ್ ಇದ್ದಿದ್ದರಿಂದ ಕೇವಲ ಲಿರಿಕಲ್ ವಿಡಿಯೋ ರಿಲೀಸ್ ಮಾಡಲಾಗಿತ್ತು ಎಂದು ವರದಿ ಆಗಿತ್ತು. ಈಗ ಸಿನಿಮಾ ರಿಲೀಸ್​​ಗೆ ಎರಡು ತಿಂಗಳು ಇರುವಾಗ ಚಿತ್ರದ ಪ್ರಚಾರ ಆರಂಭಿಸಲಾಗಿದೆ.

ಇದನ್ನೂ ಓದಿ: ‘ಯಶ್ ಸಿನಿಮಾ ಎಂದರೆ ಏನೋ ಒಂದು ಅದ್ಭುತ ವಿಷಯ ಇರುತ್ತೆ’; ‘ಟಾಕ್ಸಿಕ್’ ಬಗ್ಗೆ ಪ್ರಿಯಾ ಆನಂದ್ ಮಾತು

‘ಟಾಕ್ಸಿಕ್’ ಚಿತ್ರಕ್ಕೆ ಮಲಯಾಳಂನ ಗೀತು ಮೋಹನ್‌ದಾಸ್ ನಿರ್ದೇಶನ ಇದೆ. ಇತ್ತೀಚಿನ ದಿನಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ಚಿತ್ರವಾಗಿದೆ. ಇದೊಂದು ಹೈ-ಬಜೆಟ್ ಆ್ಯಕ್ಷನ್ ಓರಿಯಂಟೆಡ್ ಸಿನಿಮಾ ಇದಾಗಿದ್ದು, ಅಂತರರಾಷ್ಟ್ರೀಯ ಮಟ್ಟದ ಡ್ರಗ್ ಮಾಫಿಯಾ ಹಿನ್ನೆಲೆಯನ್ನು ಹೊಂದಿದೆ ಎನ್ನಲಾಗಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದೆ. ಸಿನಿಮಾದಲ್ಲಿ ಯಶ್ ಅವರ ಲುಕ್ ಮತ್ತು ಸ್ಟೈಲ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಚಿತ್ರದಲ್ಲಿ ಅವರದ್ದು ಡಬಲ್ ಪಾತ್ರ ಎಂಬುದು ಕೂಡ ರಿವೀಲ್ ಆಗಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರವು ವಿಭಿನ್ನ ಮೇಕಿಂಗ್ ಮತ್ತು ಅದ್ದೂರಿ ತಾರಾಗಣದಿಂದಾಗಿ ಗಾಂಧಿನಗರ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:34 am, Fri, 26 June 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us