ಎರಡು ಭಾಗದಲ್ಲಿ ರಿಲೀಸ್ ಆಗಲಿದೆ ವೈಎಸ್​ ಜಗನ್ ಬಯೋಪಿಕ್; ಗಮನ ಸೆಳೆದ ಪೋಸ್ಟರ್

ಇಂದು (ಅಕ್ಟೋಬರ್ 11) ಹೊಸ ಪೋಸ್ಟರ್ ರಿವೀಲ್ ಮಾಡಿದ್ದಾರೆ ಆರ್​ಜಿವಿ. ಮೊದಲ ಭಾಗಕ್ಕೆ ‘ವ್ಯೂಹಂ’ ಎಂದು ಹಾಗೂ ಎರಡನೇ ಭಾಗಕ್ಕೆ ‘ಶಪಥಂ’ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಸಿನಿಮಾದ ಮೊದಲ ಭಾಗ ನವೆಂಬರ್ 10ರಂದು ರಿಲೀಸ್ ಆಗಲಿದೆ.

ಎರಡು ಭಾಗದಲ್ಲಿ ರಿಲೀಸ್ ಆಗಲಿದೆ ವೈಎಸ್​ ಜಗನ್ ಬಯೋಪಿಕ್; ಗಮನ ಸೆಳೆದ ಪೋಸ್ಟರ್
ವೈಎಸ್ ಜಗನ್ ಬಯೋಪಿಕ್
Edited By:

Updated on: Oct 11, 2023 | 2:54 PM

ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಸಿನಿಮಾ ಮಾಡುವುದು, ರಿಲೀಸ್ ಮಾಡುವುದು ಮತ್ತು ಪ್ರಚಾರ ಮಾಡುವುದರಲ್ಲಿ ತಮ್ಮದೇ ಶೈಲಿ ಹೊಂದಿದ್ದಾರೆ. ಸಕ್ಸಸ್, ಫ್ಲಾಪ್ ಲೆಕ್ಕಿಸದೆ ಅವರು ಸಿನಿಮಾ ಮಾಡುತ್ತಾರೆ. ಸದ್ಯ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್​ಮೋಹನ್ ರೆಡ್ಡಿ ಅವರ ಬಯೋಪಿಕ್ ಮಾಡುತ್ತಿದ್ದಾರೆ. ಈ ಸಿನಿಮಾ ಎರಡು ಭಾಗದಲ್ಲಿ ರಿಲೀಸ್ ಆಗಲಿದೆ. ಈಗ ಎರಡೂ ಸಿನಿಮಾಗಳ ರಿಲೀಸ್ ದಿನಾಂಕವನ್ನು ರಾಮ್​ ಗೋಪಾಲ್ ವರ್ಮಾ ರಿವೀಲ್ ಮಾಡಿದ್ದಾರೆ.

ಇಂದು (ಅಕ್ಟೋಬರ್ 11) ಹೊಸ ಪೋಸ್ಟರ್ ರಿವೀಲ್ ಮಾಡಿದ್ದಾರೆ ಆರ್​ಜಿವಿ. ಮೊದಲ ಭಾಗಕ್ಕೆ ‘ವ್ಯೂಹಂ’ ಎಂದು ಹಾಗೂ ಎರಡನೇ ಭಾಗಕ್ಕೆ ‘ಶಪಥಂ’ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಸಿನಿಮಾದ ಮೊದಲ ಭಾಗ ನವೆಂಬರ್ 10ರಂದು ರಿಲೀಸ್ ಆದರೆ ಎರಡನೇ ಭಾಗ ಮುಂದಿನ ವರ್ಷ ಜನವರಿ 25ರಂದು ಬಿಡುಗಡೆ ಆಗಲಿದೆ. ಈ ಪೋಸ್ಟರ್ ಗಮನ ಸೆಳೆಯುತ್ತಿದೆ. ಎರಡು ತಿಂಗಳ ಗ್ಯಾಪ್​ನಲ್ಲಿ ಎರಡೂ ಸಿನಿಮಾಗಳು ಬಿಡುಗಡೆ ಆಗುತ್ತಿವೆ ಅನ್ನೋದು ವಿಶೇಷ.

ವೈ.ಎಸ್. ರಾಜಶೇಖರ್ ರೆಡ್ಡಿ ನಿಧನದ ನಂತರ ಜಗನ್ ಕುಟುಂಬ ಎದುರಿಸಿದ ಸಂಕಷ್ಟದ ಸನ್ನಿವೇಶಗಳು, ಹಲವರಿಂದ ಸಿಕ್ಕ ಸಾಂತ್ವನ, ಅಪರಾಧ ಪ್ರಕರಣಗಳು, ಜೈಲು ಜೀವನ ಮತ್ತಿತರ ಅಂಶಗಳನ್ನು ‘ವ್ಯೂಹಂ’ ಚಿತ್ರದಲ್ಲಿ ತೋರಿಸಲಾಗುತ್ತಿದೆ. ‘ಶಪಥಂ’ ಸಿನಿಮಾದಲ್ಲಿ ಕಷ್ಟದ ಸಂದರ್ಭಗಳನ್ನು ಜಗನ್ ಎದುರಿಸಿದ ರೀತಿ ಹಾಗೂ ಮುಖ್ಯಮಂತ್ರಿ ಆದ ಹಾದಿ ಹೇಗಿತ್ತು ಎಂಬುದನ್ನು ರಾಮ್​ ಗೋಪಾಲ್ ವರ್ಮಾ ತೋರಿಸಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರಾಮ್ ಗೋಪಾಲ್ ವರ್ಮಾ ಜತೆ ಬೋಲ್ಡ್​ ಆಗಿ ಕಾಣಿಸಿಕೊಂಡ ಬಿಗ್​ ಬಾಸ್​ ಸ್ಪರ್ಧಿ  

ಅಜ್ಮಲ್ ಅಮೀರ್ ವೈಎಸ್ ಜಗನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಗನ್ ಪತ್ನಿ ವೈಎಸ್ ಭಾರತಿ ಪಾತ್ರದಲ್ಲಿ ಮಾನಸಾ ನಟಿಸುತ್ತಿದ್ದಾರೆ. ರಾಮದೂತ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಾಸರಿ ಕಿರಣ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ ಹಾಗೂ ಟೀಸರ್​ ಗಮನ ಸೆಳೆದಿವೆ. ಟಿಡಿಪಿ ನಾಯಕರು ರಾಮ್ ಗೋಪಾಲ್ ವರ್ಮಾ ಅವರನ್ನು ಟೀಕಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್ ನಾಯಕರು ಕೂಡ ಆರ್​ಜಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:14 pm, Wed, 11 October 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us